ಮುಸಲ್ಮಾನರ ಹಬ್ಬದ ರಜೆಗಳಲ್ಲಿ ಹೆಚ್ಚಳ !ಇಸ್ಲಾಮಿ ಶಾಲೆ ಮತ್ತು ಮದರಸಾಗಳಿಗೆ ಇನ್ನು ಮುಂದೆ ಶುಕ್ರವಾರ ವಾರದ ರಜೆ !ಬಿಹಾರದ ಜನತಾದಳ (ಸಂಯುಕ್ತ) ಆಜೀರ ರಾಷ್ಟ್ರೀಯ ಜನತಾದಳ ಇವರ ಮೈತ್ರಿ ಸರಕಾರದಿಂದ ಜಾತ್ಯಾತೀತತೆಯ ಕಗ್ಗೊಲೆ ! |
ಪಾಟಲಿಪುತ್ರ (ಬಿಹಾರ) – ಬಿಹಾರ ಸರಕಾರದ ಶಿಕ್ಷಣ ಇಲಾಖೆ ಈ ವರ್ಷ ೨೦೨೪ ರಲ್ಲಿ ಶಾಲೆಗೆ ನೀಡಲಾಗುವ ರಜೆಯ ಪಟ್ಟಿ ಪ್ರಸಾರಗೊಳಿಸಿದೆ. ಇದರ ಪ್ರಕಾರ ಶಾಲೆಗೆ ಮಕರಸಂಕ್ರಾಂತಿ, ರಕ್ಷಾ ಬಂಧನ, ಹರಿತಾಲಿಕ ಮತ್ತು ಜಿತಿಯ (ಅಶ್ವಿನ ಮಾಸದಲ್ಲಿ ಮಕ್ಕಳಿಗಾಗಿ ಮಾತೆಯರಿಂದ ಮಾಡಲಾಗುವ ವ್ರತ) ಈ ಹಬ್ಬಗಳ ಜೊತೆಗೆ ಗಾಂಧಿ ಜಯಂತಿಯ ರಜೆ ಕೂಡ ರದ್ಧಪಡಿಸಲಾಗಿದೆ. ಇದರ ಜೊತೆಗೆ ದೀಪಾವಳಿ ಮತ್ತು ಛಟ್ ಪೂಜೆ ಇವುಗಳ ರಜೆ ಕಡಿತಗೊಳಿಸಲಾಗಿದೆ. ಇನ್ನೊಂದು ಕಡೆ ಬೇಸಿಗೆ ರಜೆಗಳ ಸಹಿತ ಈದ್, ಬಕ್ರಿ ಈದ್ ಮತ್ತು ಮೊಹರಂ ಈ ರಜೆಗಳು ಹೆಚ್ಚಿಸಿದ್ದಾರೆ. ಇಸ್ಲಾಮೀ ಶಾಲೆ ಮತ್ತು ಮದರಸಾದ ವಾರದ ರಜೆ ಬದಲಾಯಿಸಿ ಶುಕ್ರವಾರ ಮಾಡಲಾಗಿದೆ. ಭಾನುವಾರ ಈ ಶಾಲೆಗಳು ನಡೆಯುತ್ತವೆ. ಅಷ್ಟೇ ಅಲ್ಲದೆ ಯಾವುದಾದರೂ ಶಾಲೆ ಮುಸ್ಲಿಮ ಬಹುಸಂಖ್ಯಾತ ಇರುವ ಪ್ರದೇಶದಲ್ಲಿ ಇದ್ದರೆ ಮತ್ತು ಉರ್ದು ಶಾಲೆಯ ರೀತಿಯಲ್ಲಿ ಅವರು ವಾರದ ರಜೆ ಶುಕ್ರವಾರ ನೀಡಬೇಕು ಹಾಗೆ ಏನಾದರೂ ಇದ್ದರೆ ಆಗ ಅವರು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬಹುದು. ಬಿಹಾರ ಸರಕಾರವು ಉರ್ದು ಮತ್ತು ಸಾಮಾನ್ಯ ಶಾಲೆಗಳ ರಜೆಗಾಗಿ ಪ್ರತ್ಯೇಕ ಕ್ಯಾಲೆಂಡರ್ ಪ್ರಸಾರ ಮಾಡಿದ್ದಾರೆ.
ಬೇಸಿಗೆ ರಜೆ ೨೦ ರಿಂದ ೩೦ ದಿನಾ ಹೆಚ್ಚಿಸಲಾಗಿದೆ. ಬೇಸಿಗೆ ರಜೆಯಲ್ಲಿ ಇತರ ದಿನಗಳ ಹಾಗೆಯೇ ಶಿಕ್ಷಕರು ಮತ್ತು ಸಿಬ್ಬಂದಿಗಳು ಶಾಲೆಯಲ್ಲಿ ಉಪಸ್ಥಿತರಿರುವರು. ದೀಪಾವಳಿಯಲ್ಲಿ ೧ ದಿನ ಹಾಗೂ ಛಟ ಪೂಜೆಯ (ಉತ್ತರ ಭಾರತದಲ್ಲಿ ಮಾಡಲಾಗುವ ಸೂರ್ಯನ ಪೂಜೆಯ ವ್ರತ) ಸಮಯದಲ್ಲಿ ೩ ದಿನ ರಜೆ ಇರುವುದು. ಹರಿತಾಲಿಕ ವ್ರತದ ಸಮಯದಲ್ಲಿ ೨ ದಿನದ ಮತ್ತು ಜಿತಿಯಾಗೆ ಒಂದು ದಿನದ ರಜೆ ಕೂಡ ರದ್ದು ಪಡಿಸಲಾಗಿದೆ.
(ಸೌಜನ್ಯ: INDIA TODAY)
ಭಾಜಪದಿಂದ ಟೀಕೆ
ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಬಿಹಾರ ಸರಕಾರವನ್ನು ಟೀಕಿಸುವಾಗ, ಲಾಲು ಯಾದವ ಮತ್ತು ನಿತೀಶಕುಮಾರ ಇವರ ಸರಕಾರ ಯಾವ ರೀತಿ ಹಿಂದುಗಳ ಮೇಲೆ ದಾಳಿ ಮಾಡುತ್ತಿದೆ ಎಂದರೆ, ಅವರು ಭವಿಷ್ಯದಲ್ಲಿ ಮಹಮ್ಮದ ನಿತೀಶ ಮತ್ತು ಮಹಮ್ಮದ ಲಾಲು ಎಂದು ಗುರುತಿಸುವರು ಎಂದು ಹೇಳಿದರು.
ಭಾಜಪದ ರಾಜ್ಯಸಭೆಯ ಸಂಸದ ಸುಶೀಲ್ ಮೋದಿ ಇವರು, ಬಿಹಾರ ಸರಕಾರವು ಮತ್ತೊಮ್ಮೆ ಶಾಲೆಯಲ್ಲಿನ ಜನ್ಮಾಷ್ಟಮಿ, ರಕ್ಷಾ ಬಂಧನ, ಶಿವರಾತ್ರಿ ಈ ಹಿಂದುಗಳ ಹಬ್ಬಗಳ ರಜೆಯನ್ನು ರದ್ದುಪಡಿಸಿದ್ದಾರೆ. ಹಿಂದುಗಳಿಗೆ ಜಾತಿಯಲ್ಲಿ ವಿಭಜಿಸಿ, ಅಲ್ಪಸಂಖ್ಯಾತರನ್ನು ಓಲೈಸುವ ನಿತೀಶ ಕುಮಾರ ಮತಗಳ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ನಿತೀಶ ಕುಮಾರ ಸರಕಾರದ ಓರ್ವ ಸಚಿವರ ವಿರೋಧ ಹಾಗೂ ಆಡಳಿತರೂಢ ಪಕ್ಷದ ನಾಯಕರಿಂದ ಬಚಾವ !
ನಿತೇಶ ಸರಕಾರದ ಸಚಿವ ಅಶೋಕ ಚೌದರಿ ಇವರು ಮಾತನಾಡಿ, ಈ ನಿರ್ಣಯದಿಂದ ಜನರ ಭಾವನೆಗೆ ನೋವು ಉಂಟಾಗುವುದು. ಇದು ತಪ್ಪಾಗಿದೆ. ಶಿಕ್ಷಣ ಇಲಾಖೆಯ ಸಚಿವರಿಗೆ ಇದು ಕಾಣುತ್ತಿಲ್ಲ. ಮುಖ್ಯಮಂತ್ರಿಗಳಿಗೆ ತಿಳಿದರೆ, ಆಗ ಅವರು ಖಂಡಿತ ಗಮನಹರಿಸುವರು ಎಂದು ಹೇಳಿದರು.
ಜನತಾದಳ (ಸಂಯುಕ್ತ)ದ ನಾಯಕ ನೀರಜ ಕುಮಾರ ಇವರು ಮಾತನಾಡಿ, ಶಬ್-ಎ-ಬಾರಾತದ ರಜೆಗಳು ಕಡಿತಗೊಳಿಸಲಾಗಿದೆ. ಇದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹಿಂದೂಗಳ ರಜೆಗಳಲ್ಲಿ ಕಡಿತಗೊಳಿಸಿಲ್ಲ. ಹೆಚ್ಚಿನ ರಜೆಯ ಕಾರಣ ಶಿಕ್ಷಣ ಇಲಾಖೆಯೆ ಹೇಳಬೇಕು. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ ಶಿಕ್ಷಣ ಇಲಾಖೆಯ ಸ್ಪಷ್ಟಿಕರಣ ನೋಡಿ ಮನವಿ ನೀಡುವುದು ಯೋಗ್ಯವಾಗಿದೆ ಎಂದು ಹೇಳಿದರು.
ರಜೆಯ ಪಟ್ಟಿ
ಕಳೆದ ವರ್ಷ ಈದ್ ರಜೆ ಕೇವಲ ಏಪ್ರಿಲ್ ೨೨ ರಂದು ಇತ್ತು, ಅದು ಈ ವರ್ಷ ಏಪ್ರಿಲ್ ೧೦, ೧೧ ಮತ್ತು ೧೨ ಈದ್ ರಜೆ ನೀಡಲಾಗಿದೆ. ಕಳೆದ ವರ್ಷ ಬಕರಿ ಈದ್ ಗೆ ೨ ದಿನದ ರಜೆ ಇತ್ತು, ಅದನ್ನು ಈ ವರ್ಷ ಹೆಚ್ಚಿಸಿ ಜೂನ್ ೧೮, ೧೯ ಮತ್ತು ೨೦ ಹೀಗೆ ೩ ದಿನ ರಜೆ ನೀಡಿದ್ದಾರೆ. ಕಳೆದ ವರ್ಷ ಮೊಹರಂ ರಜೆ ೧ ದಿನ ಇತ್ತು, ಈ ವರ್ಷ ಜುಲೈ ೧೭ ಮತ್ತು ೧೮ ರಜೆ ನೀಡಲಾಗಿದೆ.
ಹಿಂದೂಗಳ ಈ ರಜೆಗಳು ರದ್ದು !
ಮಹಾಶಿವರಾತ್ರಿ, ರಾಮನವಮಿ, ಶ್ರಾವಣದಲ್ಲಿನ ಕೊನೆಯ ಸೋಮವಾರ, ಹರಿತಾಲಿಕ, ಜಿತಿಯಾ, ಶ್ರೀ ಕೃಷ್ಣ ಜನ್ಮಾಷ್ಟಮಿ, ಅನಂತ ಚತುರ್ದಶಿ, ಬಾವುಬಿದಿಗೆ, ಗೋವರ್ಧನ ಪೂಜೆ, ಗುರು ನಾನಕ ಜಯಂತಿ ಮತ್ತು ಕಾರ್ತಿಕ ಪೌರ್ಣಿಮೆ.
ಸಂಪಾದಕರ ನಿಲುವು* ಬಿಹಾರದ ಹಿಂದುಗಳಿಗೆ ಇದು ಒಪ್ಪಿಗೆಯೇ ? ಒಪ್ಪಿಗೆ ಇಲ್ಲವಾದರೆ ಇದನ್ನು ಕಾನೂನ ರೀತಿಯಲ್ಲಿ ವಿರೋಧಿಸುವರೋ ಅಥವಾ ಜಾತಿಯ ರಾಜಕಾರಣದಲ್ಲಿ ಬಿದ್ದು ಸ್ವಂತದ ಹಾನಿ ಮಾಡಿಕೊಳ್ಳುವುರೋ ? ಇದು ಅವರೇ ನಿಶ್ಚಯಿಸಬೇಕು ! * ಭಾಜಪಗೆ ‘ಶಿಕ್ಷಣದ ಕೇಸರೀಕರಣ’ ಮಾಡುವ ಆರೋಪ ಮಾಡುವ ಡೋಂಗಿ ಜಾತ್ಯತೀತವಾದಿಗಳು ದೇಶದಲ್ಲಿನ ರಾಜಕೀಯ ಪಕ್ಷ ಶಾಲೆಯ ‘ಇಸ್ಲಾಮೀಕರಣ’ ಮಾಡುತ್ತಿದೆ, ಇದನ್ನು ತಿಳಿದುಕೊಳ್ಳಿ ! |