ಒಂದು ಹಳೆಯ ವೀಡಿಯೊದಲ್ಲಿ ನೆದರ್‌ಲ್ಯಾಂಡ್ಸ್‌ನ ಸಂಭಾವ್ಯ ಭಾವೀ ಪ್ರಧಾನ ಮಂತ್ರಿ ಗೀರ್ಟ್ ವಿಲ್ಡರ್ಸ್ ನೀಡಿರುವ ಭಾಷಣದಲ್ಲಿರುವ ಹೇಳಿಕೆ
ಆಮಸ್ಟರಡ್ಯಾಮ (ನೆದರಲ್ಯಾಂಡ) – ಇತ್ತೀಚಿಗೆ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ, ನೆದರಲ್ಯಾಂಡನ ಮೂಲಭೂತ ಇಸ್ಲಾಂವಿರೋಧಿ ಹಾಗೂ ರಾಷ್ಟ್ರವಾದಿ ನಾಯಕ ಗೀರ್ಟ್ ವಿಲ್ಡರ್ಸ್ ರವರ ಪಕ್ಷವು ಅತ್ಯಧಿಕ ಸ್ಥಾನಗಳೊಂದಿಗೆ ಚುನಾಯಿತಗೊಂಡಿದೆ. ಈ ದೃಷ್ಟಿಯಿಂದ ಶೀಘ್ರವೇ ವಿಲ್ಡರ್ಸ್ ರವರು ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವರ ಒಂದು ಹಳೆಯ ವಿಡಿಯೊ ಬೆಳಕಿಗೆ ಬಂದಿದೆ. ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯಾಗಿರುವ ರಾಯಿಟರ್ಸ್ ನೀಡಿರುವ ವಾರ್ತೆಯ ಅನುಸಾರ, ವಿಲ್ಡರ್ಸ್ ರವರು ವೀಡಿಯೊದಲ್ಲಿ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ. ಅದರಲ್ಲಿ ಅವರು ಇಲ್ಲಿನ ಕಾನೂನಿಗಿಂತ ಕುರಾನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನೆದರಲ್ಯಾಂಡ್ ನ ಮುಸಲ್ಮಾನರು ನೆದರಲ್ಯಾಂಡ್ ತೊರೆಯಬೇಕು ಎಂದು ಹೇಳುತ್ತಿದ್ದಾರೆ.
ಈ ವೀಡಿಯೊದ ಅನುಸಾರ, ವಿಲ್ಡರ್ಸ್ ರವರು ತಮ್ಮ ಮಾತನ್ನು ಮುಂದುವರಿಸಿ, ನೆದರಲ್ಯಾಂಡನ ಮುಸಲ್ಮಾನರು ನಮ್ಮ ಸ್ವಾತಂತ್ರ್ಯ, ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಮೌಲ್ಯಗಳನ್ನು ಗೌರವಿಸುವುದಿಲ್ಲ ಮತ್ತು ಯಾರಿಗೆ ಕುರಾನ ನಿಯಮಗಳು ನಮ್ಮ ಜಾತ್ಯತೀತ ಕಾನೂನುಗಳಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ ಎಂದು ಅನಿಸುತ್ತದೆಯೋ, ಅವರೆಲ್ಲರಿಗೂ ನಾನು ನೆದರಲ್ಯಾಂಡ ತೊರೆಯುವ ಸಂದೇಶ ನೀಡುತ್ತೇನೆ. ಅವರು ಯಾವುದೇ ಇಸ್ಲಾಮಿ ದೇಶಕ್ಕೆ ಹೋಗಬಹುದು. ಅಲ್ಲಿ ಅವರು ತಮ್ಮ ಇಸ್ಲಾಮಿ ಕಾನೂನುಗಳನ್ನು ಅನುಸರಿಸಬಹುದು. ಅದು ಅವರ ಕಾನೂನುಗಳು ಆಗಿರಬಹುದು, ನಮ್ಮದಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ಬಳಿಕ ವಿಲ್ಡರ್ಸ ರವರು `ಪಾರ್ಟಿ ಫಾರ ಫ್ರೀಡಂ’ ಪಕ್ಷವು ಶೀಘ್ರದಲ್ಲಿಯೇ ಸರಕಾರದ ಭಾಗವಾಗಲಿದೆ ಮತ್ತು ನಾನು ಈ ಸುಂದರ ದೇಶದ ಪ್ರಧಾನಮಂತ್ರಿಯಾಗುತ್ತೇನೆ ! ಎಂದು ಹೇಳಿದ್ದರು. ವಿಲ್ಡರ್ಸ್ ರವರ ಪಕ್ಷಕ್ಕೆ 76 ಸ್ಥಾನಗಳ ಸಂಸತ್ತಿನಲ್ಲಿ 37 ಸ್ಥಾನಗಳನ್ನು ಗೆದ್ದರೂ, ಒಟ್ಟು ಮತಗಳ ಶೇಕಡಾವಾರಿನಲ್ಲಿ ಅವರ ಪಕ್ಷದ ಸಹಭಾಗವು ಶೇ. 25 ರಷ್ಟಿದೆ.
(ಸೌಜನ್ಯ : NEWS9 Live)