ಅಶಾಂತ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಹಿಂದೂ ಮೌಲ್ಯದಿಂದ ಪ್ರೇರಣೆ ಪಡೆಯಬೇಕು ! – ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ

ವರ್ಲ್ದ ಹಿಂದೂ ಕಾಂಗ್ರೆಸ್ ಗೆ ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ ಇವರಿಂದ ಸಂದೇಶ !

ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೀ. ಶ್ರೇಥಾ ಥಾವಿಸಿನಿ

ಬ್ಯಾಂಕಾಕ್ (ಥೈಲ್ಯಾಂಡ್) – ಅಶಾಂತಿಯ ಜೊತೆಗೆ ಹೋರಾಡುವ ಜಗತ್ತಿನಲ್ಲಿ ಅಹಿಂಸೆ, ಸತ್ಯ, ಸಹಿಷ್ಣತೆ, ಮತ್ತು ಸದ್ಭಾವನೆ ಈ ಹಿಂದೂ ಮೌಲ್ಯಗಳಿಂದ ಪ್ರೇರಣೆ ಪಡೆಯಬೇಕು, ಆಗಲೇ ಜಗತ್ತಿನಲ್ಲಿ ಶಾಂತಿ ಸ್ಥಾಪಿತವಾಗುವುದು, ಎಂದು ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೀ. ಶ್ರೇಥಾ ಥಾವಿಸಿನಿ ಇವರು ಇಲ್ಲಿ ಆಯೋಜಿಸಿರುವ ಮೂರನೆಯ ವರ್ಲ್ದ ಹಿಂದೂ ಕಾಂಗ್ರೆಸ್ ಗಾಗಿ ಸಂದೇಶ ನೀಡಿದರು. ಈ ಸಂದೇಶ ಉದ್ಘಾಟನೆಯ ಸತ್ರದಲ್ಲಿ ಓದಲಾಯಿತು. ಪ್ರಧಾನಮಂತ್ರಿ ಶ್ರೆಥಾ ಸ್ವತಃ ಈ ಸಭೆಗೆ ಉಪಸ್ಥಿತರಾಗುವವರಿದ್ದರು; ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಅವರು ಉಪಸ್ಥಿತರಾಗಲು ಸಾಧ್ಯವಾಗಲಿಲ್ಲ.

ಈ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ ಇವರು ಮಾತು ಮುಂದುವರಿಸಿ, ಹಿಂದೂ ಧರ್ಮದ ಸಿದ್ದಾಂತ ಮತ್ತು ಮೌಲ್ಯಗಳು ಇದರ ಮೇಲೆ ಆಯೋಜಿತ ವರ್ಲ್ಡ್ ಹಿಂದೂ ಕಾಂಗ್ರೆಸಯಿಂದ ಆಯೋಜನೆ ಮಾಡುವುದು, ಇದು ನಮ್ಮ ದೇಶಕ್ಕಾಗಿ ಗೌರವದ ವಿಷಯವಾಗಿದೆ. ಥೈಲ್ಯಾಂಡ್ ಮತ್ತು ಭಾರತ ಇವರಲ್ಲಿನ ಭೌಗೋಳಿಕ ಅಂತರಾಯಷ್ಟೇ ಇದ್ದರೂ ಕೂಡ, ಹಿಂದೂ ಧರ್ಮದಲ್ಲಿನ ಸತ್ಯ ಮತ್ತು ಸಹಿಷ್ಣುತೆ, ಈ ಮೌಲ್ಯವನ್ನು ಯಾವಾಗಲೂ ಗೌರವಿಸಬೇಕು. ಜಗತ್ತಿನಲ್ಲಿನ ಹಿಂದುಗಳ ‘ಒಂದು ಪ್ರಗತಿಶೀಲ ಮತ್ತು ಪ್ರತಿಭಾ ಸಂಪನ್ನ ಸಮಾಜ’ ಎಂದು ಗುರುತು ಸ್ಥಾಪಿಸುವ ಉದ್ದೇಶದಿಂದ ಈ ಭವ್ಯ ಸಭೆಯ ಆರಂಭವಾಗಿದೆ.

ಸಂಪಾದಕರ ನಿಲುವು

* ಜಗತ್ತಿನಲ್ಲಿ ಅಶಾಂತಿ ನಿರ್ಮಾಣ ಮಾಡುವವರೆಗೆ ಪಾಠ ಕಲಿಸುವುದಕ್ಕಾಗಿ ಪ್ರಯತ್ನ ಮಾಡುವುದು ಕೂಡ ಅಷ್ಟೇ ಆವಶ್ಯಕವಾಗಿದೆ !

* ಹಿಂದೂ ಧರ್ಮದ ಮಹಾನತೆ ಥೈಲ್ಯಾಂಡ್ ನ ಪ್ರಧಾನಮಂತ್ರಿಗೆ ತಿಳಿಯುತ್ತದೆ; ಆದರೆ ಭಾರತದಲ್ಲಿನ ಕಪಟಿ ಜಾತ್ಯತೀತರಿಗೆ, ಪ್ರಗತಿ(ಅಧೋ)ಪರರಿಗೆ, ನಾಸ್ತಿಕವಾದಿಗಳಿಗೆ ತಿಳಿಯುವುದಿಲ್ಲ, ಇದು ವಸ್ತುಸ್ಥಿತಿಯಾಗಿದೆ !