ಹಿಂದುತ್ವನಿಷ್ಠ ಸಂಘಟನೆಗಳನ್ನು ಸಬಲೀಕರಣಗೊಳಿಸುವುದು ಕಾಲದ ಅಗತ್ಯ ! – ದತ್ತಾತ್ರೇಯ ಹೊಸಬಾಳೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಸ್ವಯಂಸೇವಕ ಸಂಘ

‘ವರ್ಲ್ಡ್ ಹಿಂದೂ ಕಾಂಗ್ರೆಸ್’

ಬ್ಯಾಂಕಾಕ (ಥೈಲ್ಯಾಂಡ್) – ಹಿಂದೂ ಸಂಘಟನೆಗಳನ್ನು ಬಲಪಡಿಸುವುದು ಕಾಲದ ಅವಶ್ಯಕತೆಯಾಗಿದ್ದು, ಇದಕ್ಕಾಗಿ ಸಮನ್ವಯ, ಪರಸ್ಪರ ಸಹಕಾರ, ಮಾಹಿತಿಯನ್ನು ಹಂಚಿಕೊಳ್ಳುವುದು ಮುಂತಾದವು ಆವಶ್ಯಕವಾಗಿವೆ. ಹಿಂದೂ ಸಂಸ್ಕೃತಿಯು ಜಗತ್ತಿಗೆ ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡಿದೆ. ನಮಗೆ ಮಾನವೀಯತೆಯ ನಿಜವಾದ ಅರ್ಥದಿಂದ ಪ್ರಭಾವ ಬೀರಬೇಕಾದರೆ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳನ್ನು ಪುನರುಜ್ಜೀವನಗೊಳಿಸುವುದು ಆವಶ್ಯಕವಾಗಿದೆ. ಸವಾಲುಗಳನ್ನು ಎದುರಿಸಲು ಒಂದುಗೂಡಿ ಕಾರ್ಯತಂತ್ರಗಳನ್ನು ರೂಪಿಸುವುದು ಅವಶ್ಯಕವಾಗಿದೆ. ಇದರಿಂದಲೇ ಕಾಲದ ಅತ್ಯಂತ ಆವಶ್ಯಕತೆಯಿರುವ ಹಿಂದೂಗಳ ಪುನರುತ್ಥಾನ ಸಾಧ್ಯವಿದೆಯೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇವರು ಹೇಳಿದರು. ಅವರು, ‘ವರ್ಲ್ಡ್ ಹಿಂದೂ ಕಾಂಗ್ರೆಸ್’ನ ಮೊದಲ ದಿನದ ಸಾಯಂಕಾಲದ ಅಧಿವೇಶನದಲ್ಲಿ ‘ಹಿಂದೂ ಸಂಘಟನಾ ಶಕ್ತಿಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಹಿಂದೂ ಧರ್ಮದ ಪುನರುತ್ಥಾನಗೊಳಿಸುವುದು’ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

(ಸೌಜನ್ಯ – Indraprasth Vishwa Samvad Kendra)

ಶ್ರೀ. ಹೊಸಬಾಳೆಯವರು ತಮ್ಮ ಮಾತನ್ನು ಮುಂದುವರಿಸಿ,

1. ಹಿಂದೂ ಪುನರುತ್ಥಾನದ ಪ್ರಕ್ರಿಯೆಯು ವಿಶ್ವ ಮಟ್ಟದಲ್ಲಿ ಆರಂಭವಾಗಿದೆ. ಹಿಂದೂಗಳಲ್ಲಿಯೂ ಹೊಸ ಜಾಗೃತಿ ಮೂಡಿದ್ದು, ಹಿಂದುತ್ವದ ಯೋಗ, ಆಯುರ್ವೇದ ಇತ್ಯಾದಿಗಳ ಮೂಲಕ ವಿಶ್ವ ಮಟ್ಟದಲ್ಲಿ ಪ್ರಸಾರವಾಗುತ್ತಿದೆ. ಹಿಂದೂ ಧರ್ಮದಲ್ಲಿ ಹುಟ್ಟದಿರುವ ಜನರಲ್ಲಿಯೂ ಹಿಂದೂ ಧರ್ಮದ ಬಗ್ಗೆ ಜಿಜ್ಞಾಸೆ ನಿರ್ಮಾಣವಾಗಿದೆ.

2. ಹಿಂದೂ ಸಂಸ್ಕೃತಿಗೆ ವಿರೋಧ, ಅವಮಾನ ಮತ್ತು ವಿಡಂಬನೆಯ ಮೂಲಕ ಹಾದು ಹೋಗಬೇಕಾಯಿತು. ಈಗ ವಿಶ್ವ ಮಟ್ಟದಲ್ಲಿ ಹಿಂದೂ ಧರ್ಮಕ್ಕೆ ಸ್ವೀಕೃತಿ ಮತ್ತು ಗೌರವದಲ್ಲಿ ಹೆಚ್ಚಳವಾಗುತ್ತಿರುವ ಸಮಯ ಬಂದಿದೆ. ಸಂಪತ್ತು ಮತ್ತು ಜ್ಞಾನದ ಉಪಯೋಗ ಸಮಾಜಹಿತಕ್ಕೆ ಆಗಬೇಕು.

3. ಇದರೊಂದಿಗೆ ನಮ್ಮೆದುರಿಗೆ ದೊಡ್ಡ ಸವಾಲುಗಳಿವೆ. ಇದರಲ್ಲಿ ‘ಹಿಂದೂಗಳ ಮತಾಂತರ, ಹಿಂದೂಗಳ ಮಾನವ ಹಕ್ಕುಗಳ ಹತ್ಯೆ, ಶೈಕ್ಷಣಿಕ ಕ್ಷೇತ್ರದಲ್ಲಿ ಧೈರ್ಯವಾಗಿ ಹಿಂದುತ್ವವನ್ನು ಮಂಡಿಸಲು ಸಾಧ್ಯವಾಗದಿರುವುದು, ಪ್ರಸಾರ ಮಾಧ್ಯಮ ಕ್ಷೇತ್ರಗಳಲ್ಲಿ ಹಿಂದೂಗಳ ಉಪಸ್ಥಿತಿಯ ಕೊರತೆ ಮತ್ತು ಅನೇಕ ದೇಶಗಳಲ್ಲಿ ಹಿಂದೂಗಳ ಪರಿಣಾಮಕಾರಿ ರಾಜಕೀಯ ಧ್ವನಿ ಇಲ್ಲದಿರುವುದು’, ಈ ಸವಾಲುಗಳು ಸೇರಿವೆ.

4. ಹಿಂದೂಗಳಿಗೆ ಮತ್ತು ವಿಶೇಷವಾಗಿ ಯುವ ಹಿಂದೂ ಪೀಳಿಗೆ ಧರ್ಮದ ಬಗ್ಗೆ ಶಿಕ್ಷಣ ಇಲ್ಲ. ಯುವಜನತೆಗೆ ಅವರ ಭಾಷೆಯಲ್ಲಿ, ಸಧ್ಯದ ತಂತ್ರಜ್ಞಾನದ ಉಪಯೋಗ ಮಾಡಿಕೊಂಡು ಜೀವನದ ವಾಸ್ತವಿಕ ಗುರಿ ಮುಂತಾದ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು.

ಹಿಂದೂಗಳ ಪುನರುತ್ಥಾನವಾಗಲು ಸಂತರು ಮತ್ತು ಆಧ್ಯಾತ್ಮಿಕ ನಾಯಕರ ಮಾರ್ಗದರ್ಶನ ಅಗತ್ಯ ! – ಶ್ರೀ. ಮಧು ಪಂಡಿತ ದಾಸ, ಅಧ್ಯಕ್ಷರು, ಇಸ್ಕಾನ್ ಬೆಂಗಳೂರು

ಆಧುನಿಕ ಜಗತ್ತಿನಲ್ಲಿ, ಪ್ರಸಾರ ಮಾಧ್ಯಮಗಳು ಮತ್ತು ಪ್ರಭಾವಶಾಲಿ ವ್ಯಕ್ತಿಗಳು ಸನಾತನ ಧರ್ಮದ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದು, ಹಿಂದೂ ಧರ್ಮ ಮತ್ತು ಅದರ ಆಚರಣೆಗಳ ಬಗ್ಗೆ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಧರ್ಮಶಿಕ್ಷಣ ಮತ್ತು ನಡುವಳಿಕೆಗಳ ವಿಷಯದಲ್ಲಿ ಗೊಂದಲವನ್ನು ನಿರ್ಮಾಣ ಮಾಡಲಾಗಿದೆ. ಧರ್ಮಶಿಕ್ಷಣದ ಅಭಾವದಿಂದ ಹಿಂದೂಗಳ ಯುವ ಪೀಳಿಗೆಯಿಂದ ಸಾಂಸ್ಕೃತಿಕ ಪರಂಪರೆಯ ಅಂಗೀಕಾರ ಮಾಡಲಾಗುವುದಿಲ್ಲ. ಆದ್ದರಿಂದಲೇ ಇಂದು ನಾವು ರಾಮರಾಜ್ಯ ಮತ್ತು ಸನಾತನ ಧರ್ಮದಿಂದ ನಿರ್ಮಾಣವಾಗಿರುವ ಭವ್ಯ ಇತಿಹಾಸದಿಂದ ಬಹಳ ದೂರ ಸರಿದಿದ್ದೇವೆ. ಅದಕ್ಕಾಗಿಯೇ ಹಿಂದೂ ಪುನರುಜ್ಜೀವನದ ಅಗತ್ಯವಿದೆ. ಆದ್ದರಿಂದ ಭಾರತ ಕಳೆದುಕೊಂಡಿರುವ ಎಲ್ಲವೂ ಅದಕ್ಕೆ ಪುನಃ ದೊರೆಯಲಿದೆ. ಹಾಗೆಯೇ ಸಮಾಜ, ರಾಜ್ಯ, ದೇಶ ಮತ್ತು ಜಗತ್ತಿನ ನಿಜವಾದ ಅರ್ಥದಲ್ಲಿ ಕಲ್ಯಾಣವಾಗಲಿದೆ. ಹಿಂದೂಗಳ ಪುನರುಜ್ಜೀವನಕ್ಕಾಗಿ ಸಂತರು ಮತ್ತು ಆಧ್ಯಾತ್ಮಿಕ ನಾಯಕರ ಮಾರ್ಗದರ್ಶನವನ್ನು ಪಡೆಯುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

‘ಒಮ್ಮೆ ದೇವಸ್ಥಾನ ಶಾಶ್ವತವಾಗಿ ದೇವಸ್ಥಾನ’, ಇದು ಸನಾತನದ ತತ್ವ ಅಂಗೀಕರಿಸಿ ! – ನ್ಯಾಯವಾದಿ ವಿಷ್ಣು ಶಂಕರ ಜೈನ

ಇಸ್ಲಾಮಿಕಾನೂನಿನಲ್ಲಿ, ಒಮ್ಮೆ ಮಸೀದಿ ಆದರೆ, ಅದು ಶಾಶ್ವತವಾಗಿ ಮಸೀದಿಯೇ ಆಗಿರುತ್ತದೆ. ಎಂದು ಹೇಳಿದೆ. ಯಾವುದಾದರೂ ಭೂಮಿ ವಕ್ಫ್ ಬೋರ್ಡ್ ಪಡೆದರೆ ಅದು ಯಾವಾಗಲೂ ವಕ್ಫ್ ಬೋರ್ಡ್ ಬಳಿಯೇ ಇರುತ್ತದೆ. ಅದೇ ರೀತಿ ಸನಾತನ ಧರ್ಮದ ತತ್ವ ಏನೆಂದರೆ, ‘ಒಂದು ದೇವಸ್ಥಾನ ಆದರೆ ಅದು ಯಾವಾಗಲೂ ದೇವಸ್ಥಾನವೇ ಆಗಿರುತ್ತದೆ; ಆದರೆ ದುರದೃಷ್ಟಕರವೆಂದರೆ ನಾವು ಈ ತತ್ವವನ್ನು ಅಂಗೀಕರಿಸಿಲ್ಲ. ಶ್ರೀರಾಮ ಮಂದಿರದ ತೀರ್ಪಿನ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು, ದೇವತೆಗಳ ಮೂರ್ತಿಯ ಸ್ಥಾಪನೆ ಆದ ನಂತರ ಅದರ ಅಧಿಕಾರ ಯಾವಾಗಲೂ ಶಾಶ್ವತವಾಗಿ ಇರುತ್ತದೆ ಎಂದು ಹೇಳಿತ್ತು. ಆದ್ದರಿಂದಲೇ ಈ ತತ್ವಕ್ಕೆ ಸಂವಿಧಾನಿಕ ಸಮರ್ಥನೆ ದೊರೆತಿದೆ, ಎಂದು ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವ ನಿಷ್ಠ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಹೇಳಿಕೆ ನೀಡಿದರು.

ನ್ಯಾಯವಾದಿ ಜೈನ್ ಇವರ ಭಾಷಣದಲ್ಲಿ ವಾರಾಣಸಿಯಲ್ಲಿನ ಜ್ಞಾನವಾಪಿಯ ಪಶ್ಚಿಮದ ಗೋಡೆ ತೋರಿಸುತ್ತಾ, ಈ ಗೋಡೆ ಹಿಂದೂ ದೇವಸ್ಥಾನದ ಅವಶೇಷವಾಗಿದೆ. ಜ್ಞಾನವಾಪಿಯ ಸಮೀಕ್ಷೆ ಮಾಡುವ ಭಾರತೀಯ ಪುರಾತತ್ವ ಇಲಾಖೆಯ ಸಮಿತಿಯ ಜೊತೆಗೆ ನಾನು ಕೂಡ ಇದ್ದೆ. ದೇವಸ್ಥಾನದ ಅವಶೇಷಗಳನ್ನು ಬಳಸಿ ಮಸೀದಿ ಕಟ್ಟಲಾಗಿದೆ ಇದು ಸ್ಪಷ್ಟವಾಗಿದೆ. ಮಸೀದಿಯ ಜಾಗದ ಮೂಲ ಧಾರ್ಮಿಕ ಗುರುತು ಇಲ್ಲ. ಯಾರಾದರೂ ಮಸೀದಿಗೆ ಹೋಗಿ ಅಲ್ಲಿ ಮೂರ್ತಿ ಸ್ಥಾಪಿಸಿದರೆ, ಆಗ ಆ ಧಾರ್ಮಿಕ ಸ್ಥಳಕ್ಕೆ ದೇವಸ್ಥಾನ ಎನ್ನಲಾಗುತ್ತದೆಯೇ ? ಇದಕ್ಕೆ ಒಂದೇ ಉತ್ತರವಾಗಿರುವುದು ಮತ್ತು ಅದು ಎಂದರೆ ಇಲ್ಲ. ಅದೇ ರೀತಿ ಒಂದು ದೇವಸ್ಥಾನದಲ್ಲಿ ಪ್ರವೇಶ ಮಾಡಿದರೆ ಮತ್ತು ಅವನು ಅಲ್ಲಿ ನಮಾಜ ಪಠಣೆ ಮಾಡಿದರೆ, ಆಗ ದೇವಸ್ಥಾನದ ವೈಶಿಷ್ಟ ನಾಶವಾಗುವುದೇ ? ಇದಕ್ಕೂ ಕೂಡ ಒಂದೇ ಉತ್ತರ – ‘ಇಲ್ಲ’ ಅಂತ ! ಜ್ಞಾನವಾಪಿಯಲ್ಲಿ ಬೇರೆ ಏನು ಮಾಡದೆ ನಮ್ಮ ದೇವಸ್ಥಾನದ ಅವಶೇಷಗಳ ಮೂಲಕ ಮಸೀದಿ ಕಟ್ಟಲಾಗಿದೆ.

ಪ್ರಾರ್ಥಮಿಕ ಶಿಕ್ಷಣದಿಂದಲೂ ಮೂಲ ಭಾರತೀಯ ತತ್ವ ಜ್ಞಾನ ಕಲಿಸಿದರೆ, ಆಗ ಅರ್ಧಕ್ಕಿಂತಲೂ ಹೆಚ್ಚಿನ ಆಘಾತಗಳು ದೂರವಾಗುವುದು ! – ಅಭಿಜಿತ ಮಜುಮದಾರ

‘ಸಿಎನ್ಎನ್ ನ್ಯೂಸ್ ೧೮’ ಇಂಗ್ಲಿಷ್ ವಾರ್ತವಾಹಿನಿಯ ಪ್ರಖರ ಹಿಂದುತ್ವನಿಷ್ಠ ಸಲಹೆಗಾರ ಸಂಪಾದಕ ಅಭಿಜಿತ ಮಜುಮದಾರ ಇವರು ಮಾತನಾಡುತ್ತಾ, ”ಭಾರತ ಇದು ಜಗತ್ತಿಗಾಗಿ ಮಾಹಿತಿಯ ಎಲ್ಲಕ್ಕಿಂತ ಶಕ್ತಿಶಾಲಿ ಸ್ರೋತ ಆಗಬಹುದು. ನಾವು ಶಿಕ್ಷಣ ಕ್ಷೇತ್ರದಲ್ಲಿನ ಕೊರತೆಗಳನ್ನು ಸುಧಾರಿಸಿ ಹೊಸ ಶಿಕ್ಷಣ ನೀತಿಯನ್ನು ಆದಷ್ಟು ಬೇಗನೆ ತರಬೇಕು. ಬಂಡವಾಳಶಾಹಿ, ಇಸ್ಲಾಮಿ ಮತ್ತು ಕಮ್ಯುನಿಸ್ಟರ ಹೊಲಸು ಮತ್ತು ಅಸತ್ಯತೆಯಿಂದ ತುಂಬಿರುವ ನಮ್ಮ ಪಠ್ಯಪುಸ್ತಕಗಳು ಬದಲಾಯಿಸಬೇಕು. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಶಿಕ್ಷಣದ ಸಶಕ್ತಿಕರಣವಾಗುವುದು. ಪ್ರಾರ್ಥಮಿಕ ಶಿಕ್ಷಣದಿಂದಲೇ ಮೂಲ ಭಾರತೀಯ ತತ್ವಜ್ಞಾನ ಕಲಿಸಬೇಕು. ಇದರಿಂದ ಮುಂದಿನ ೧-೨ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿಯ ಮೇಲೆ ಆಗುತ್ತಿರುವ ಅರ್ಧಕ್ಕಿಂತಲೂ ಹೆಚ್ಚಿನ ಆಘಾತಗಳು ದೂರವಾಗುವುದು, ಕಾರಣ ಇದೆ ಎಲ್ಲದರ ಮೂಲವಾಗಿದೆ ಎಂದು ಹೇಳಿದರು.

ಅಶ್ಲೀಲ ವಿಷಯ ತೋರಿಸುವುದು ಮತ್ತು ಪ್ರಸ್ತುತಪಡಿಸುವುದು ರಾಷ್ಟ್ರ ವಿರೋಧಿ ಕೃತ್ಯ ! – ಲೇಖಕ ಉದಯ ಮಾಹೂರಕರ

ಬ್ಯಾಂಕಾಕ್ (ಥಾಯ್ಲ್ಯಾಂಡ್) – ಭಾರತ ಸರಕಾರದ ಮಾಜಿ ಮಾಹಿತಿ ಆಯುಕ್ತರು, ಲೇಖಕರು ಮತ್ತು ಇತಿಹಾಸ ತಜ್ಞ ಶ್ರೀ. ಉದಯ ಮಾಹೂರಕರ ಇವರು ‘ವರ್ಲ್ಡ್ ಹಿಂದೂ ಕಾಂಗ್ರೆಸ್’ನ ಮೊದಲ ದಿನ ‘ಹಿಂದೂ ಮೀಡಿಯಾ ಕಾನ್ಫರೆನ್ಸ್’ಅನ್ನು ಉದ್ದೇಶಿಸಿ ಮಾತನಾಡುವಾಗ, ‘ನೆಟ್ ಫಿಕ್ಸ್’ ನಂತಹ ‘ಓಟಿಟಿ’ ಮೂಲಕ ತೋರಿಸಲಾಗುತ್ತಿರುವ ಕಾರ್ಯಕ್ರಮದಿಂದ ಹಿಂದೂ ಕುಟುಂಬಗಳ ಮೇಲೆ ಆಘಾತಕಾರಿ ಪರಿಣಾಮ ಆಗುತ್ತಿದೆ, ಈ ಪರಿಣಾಮ ಎಷ್ಟು ಆಘಾತಕಾರಿ ಆಗಿದೆ ಎಂದರೆ, ‘ವೆಬ್ ಸೀರೀಸ್’ ನಿರ್ಮಿಸುವ ಈ ಜನರು ಹಿಂದೂ ಸಮಾಜದ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಔರಂಗಜೇಬ ಇವರು ಮಾಡಿರುವ ಹಾನಿಗಿಂತಲೂ ಹೆಚ್ಚಿನ ಹಾನಿ ಮಾಡುತ್ತಿದ್ದಾರೆ.

ಇದರ ವಿರುದ್ಧ ಕಠಿಣ ಕಾನೂನು ರೂಪಿಸುವುದು ಆವಶ್ಯಕವಾಗಿದೆ. ಅಶ್ಲೀಲ ವಿಷಯ ತೋರಿಸುವುದು ಮತ್ತು ಪ್ರಸ್ತುತಪಡಿಸುವುದು, ಇದನ್ನು ರಾಷ್ಟ್ರ ವಿರೋಧಿ ಕೃತ್ಯ ಎಂದು ನಿಶ್ಚಯಿಸುವ ವ್ಯವಸ್ಥೆ ಈ ಕಾನೂನಿನಲ್ಲಿ ಇರುವುದು ಆವಶ್ಯಕವಾಗಿದೆ ಎಂದು ಹೇಳಿದರು.