ಪಾಕಿಸ್ತಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ಪೀಠದ ದೇವಸ್ಥಾನಗಳ ಧ್ವಂಸ !

ದೇವಸ್ಥಾನದ ಜಾಗದಲ್ಲಿ ‘ಕಾಫಿ ಹೌಸ್’ ನಿರ್ಮಾಣ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಒಂದರ ಹಿಂದೆ ಒಂದರಂತೆ ಹಿಂದೂ ದೇವಸ್ಥಾನಗಳನ್ನು ಗುರಿ ಮಾಡಲಾಗುತ್ತಿದೆ. ಪಾಕಿಸ್ತಾನವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಪುರಾತನ ಶಾರದಾಪೀಠ ದೇವಸ್ಥಾನವನ್ನು ಕೆಡವಿದೆ. ದೇವಸ್ಥಾನದ ಭೂಮಿಯನ್ನು ಕಬಳಿಸಿ ಅಲ್ಲಿ ‘ಕಾಫಿ ಹೌಸ್’ ನಿರ್ಮಿಸಿದೆ. ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಈ ದೇವಸ್ಥಾನವನ್ನು ರಕ್ಷಿಸುವಂತೆ ಆದೇಶವನ್ನು ನೀಡಿರುವಾಗಲೂ, ಪಾಕಿಸ್ತಾನವು ಆ ಆದೇಶವನ್ನು ಧಿಕ್ಕರಿಸಿ ದೇವಸ್ಥಾನವನ್ನು ಕೆಡವಿತು. ಈ ಪುರಾತನ ದೇವಸ್ಥಾನವನ್ನು `ಯುನೆಸ್ಕೋ’ದ ಸಂರಕ್ಷಣಾ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಶ್ರೀ ಹಿಂಗಲಾಜಮಾತಾ ದೇವಸ್ಥಾನವನ್ನು ಕೆಡವಲಾಗಿತ್ತು. ಶ್ರೀ ಹಿಂಗಲಾಜಮಾತಾ ದೇವಾಲಯವು ಯುನೆಸ್ಕೋದ ಸಂರಕ್ಷಣಾ ಪಟ್ಟಿಯಲ್ಲಿ ಸೇರಿತ್ತು. ಈ ಹಿಂದೆಯೂ ಜುಲೈ 2023 ರಲ್ಲಿ ಕರಾಚಿಯ ಶ್ರೀ ಮಾರಿಮಾತೆಯ ದೇವಸ್ಥಾನವನ್ನು ಕೆಡವಿತ್ತು.

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ಕೇಂದ್ರ ಸರಕಾರವು 100 ಕೋಟಿ ಹಿಂದೂಗಳ ಪರವಾಗಿ ಪಾಕಿಸ್ತಾನವನ್ನು ಪ್ರಶ್ನಿಸಿ, ಆ ಭೂಮಿಯನ್ನು ರಕ್ಷಿಸಬೇಕು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !