China Mosques : ಕಳೆದ 3 ವರ್ಷಗಳಲ್ಲಿ ಚೀನಾದ ನಿಂಗ್ಜಿಯಾ ಪ್ರದೇಶದಲ್ಲಿರುವ 1 ಸಾವಿರದ 300 ಮಸೀದಿಗಳಿಗೆ ಬೀಗ !

ಅನೇಕ ಮಸೀದಿಗಳ ಗುಮ್ಮಟಗಳು ಮತ್ತು ಮಿನಾರುಗಳ ನೆಲಸಮ !

ಬೀಜಿಂಗ್ (ಚೀನಾ) – ಚೀನಾ ಸರಕಾರವು ನಿಂಗ್ಜಿಯಾ ಮತ್ತು ಗಾನ್ಸು ಸ್ವಾಯತ್ತ ಪ್ರದೇಶಗಳಲ್ಲಿ ಮಸೀದಿಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. 2020 ರಿಂದ, ಅಂದರೆ ಕಳೆದ 3 ವರ್ಷಗಳಲ್ಲಿ ನಿಂಗ್ಜಿಯಾ ಪ್ರದೇಶದಲ್ಲಿ ಚೀನಾ ಸರಕಾರ 1 ಸಾವಿರದ 300 ಮಸೀದಿಗಳನ್ನು ಮುಚ್ಚಿದೆ. ಈ ಮಾಹಿತಿ `ಹ್ಯೂಮನ್ ರೈಟ್ಸ್ ವಾಚ್‘ ಸಂಸ್ಥೆ ನಡೆಸಿದ ಸಂಶೋಧನೆಯಿಂದ ಬಹಿರಂಗವಾಗಿದೆ. ಈ ಎರಡೂ ಪ್ರದೇಶಗಳು ಕ್ಸಿನ್‌ಜಿಯಾಂಗ್ ಪ್ರದೇಶದ ಬಳಿಕ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಾಗಿವೆ. ಹೀಗಿರುವಾಗಲೂ ಒಂದೇ ಒಂದು ಮುಸ್ಲಿಂ ರಾಷ್ಟ್ರ ಅಥವಾ ಇಸ್ಲಾಮಿಕ್ ಸಹಕಾರ ಸಂಘಟನೆ (ಒ.ಐ.ಸಿ.) `ಚ’ಕಾರವನ್ನೂ ಎತ್ತಿಲ್ಲ.

‘ಹ್ಯೂಮನ್ ರೈಟ್ಸ್ ವಾಚ್’ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಮುಂದಿನಂತೆ ಹೇಳಲಾಗಿದೆ,

1. 2016 ರಲ್ಲಿ, ಚೀನಾದ ಕಮ್ಯುನಿಸ್ಟ್ ಸರಕಾರವು ಚೀನಾದಲ್ಲಿರುವ ಧರ್ಮಗಳನ್ನು ಚೀನೀಕರಣಗೊಳಿಸುವ ಕರೆ ನೀಡಿದಾಗ, ಅಲ್ಲಿನ ಮಸೀದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳಾಗಲು ಪ್ರಾರಂಭವಾಯಿತು.

2. ಏಪ್ರಿಲ್ 2018 ರಲ್ಲಿ, ಸರಕಾರವು ಇಸ್ಲಾಮಿಕ ಧಾರ್ಮಿಕ ಸ್ಥಳಗಳ ನಿರ್ಮಾಣ ಮತ್ತು ಕಟ್ಟಡಗಳನ್ನು ಸರಕಾರಿ ಅಧಿಕಾರಿಗಳು ನಿಯಂತ್ರಿಸಬೇಕೆಂದು ಸರಕಾರ ಆದೇಶಿಸಿತು.

3. ನಿಂಗ್ಜಿಯಾ ಪ್ರದೇಶದ 2 ಹಳ್ಳಿಗಳಲ್ಲಿನ ಮಸೀದಿಗಳ ‘ಉಪಗ್ರಹ’ ಚಿತ್ರಗಳನ್ನು ವಿಶ್ಲೇಷಣೆ ನಡೆಸಲಾಯಿತು. ಆಗ, 2019 ರಿಂದ 2021 ರವರೆಗಿನ 3 ವರ್ಷಗಳಲ್ಲಿ 7 ಮಸೀದಿಗಳ ಗುಮ್ಮಟಗಳು ಮತ್ತು ಮಿನಾರ್‌ಗಳನ್ನು ಕೆಡವಲಾಗಿದೆಯೆಂದು ಗಮನಕ್ಕೆ ಬಂದಿದೆ.

4. 2019 ರಲ್ಲಿ ಝೊಂಗ್‌ವೆಯಿ ನಗರದ ಅಧಿಕಾರಿಗಳು 214 ಮಸೀದಿಗಳನ್ನು ಬದಲಾಯಿಸಿದ್ದು, 58 ಮಸೀದಿಗಳನ್ನು ಕೆಡವಲಾಗಿದೆ ಮತ್ತು 37 ಅನಧಿಕೃತ ಮಸೀದಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದರು.

5. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಡೇವಿಡ್ ಸ್ಟ್ರಪ್ ಮತ್ತು ಪ್ಲಾಯ್ ಮೌಥ ವಿಶ್ವವಿದ್ಯಾಲಯದ ಪ್ರೊ. ಹನ್ನಾ ಥೇಕರ್ ಅವರು ಈ ಸಂಶೋಧನೆ ನಡೆಸಿದ್ದಾರೆ.

ಸಂಪಾದಕರ ನಿಲುವು

* ಮುಸ್ಲಿಂ ದೇಶಗಳು ಈ ವಿಷಯದ ಬಗ್ಗೆ ಕಣ್ಣು, ಕಿವಿ ಮುಚ್ಚಿ ಕುಳಿತಿವೆ !

* ಭಾಜಪದ ಆಗಿನ ನಾಯಕಿ ನೂಪುರ್ ಶರ್ಮಾ ಅವರು ಇಸ್ಲಾಂ ಧರ್ಮವನ್ನು ತಥಾಕಥಿತ ಅವಮಾನಿಸಿರುವ ಬಗ್ಗೆ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಒಗ್ಗಟ್ಟಿನಿಂದ ಭಾರತ ಸರಕಾರವನ್ನು ದೂಷಿಸಿದವು. ಇಂದು ಅದೇ ದೇಶಗಳು ಇಸ್ಲಾಂ ಅನ್ನು ನಷ್ಟಗೊಳಿಸಲು ಪ್ರಯತ್ನಿಸುತ್ತಿರುವ ಚೀನಾದ ವಿರುದ್ಧ `ಚ’ ಕಾರವನ್ನೂ ಎತ್ತುವುದಿಲ್ಲ, ಇದನ್ನು ಅವರ ತಥಾಕಥಿತ ಇಸ್ಲಾಂ ಪ್ರೇಮವೆನ್ನುವುದೋ, ದ್ವಂದ್ವನೀತಿಯೆನ್ನುವುದೋ ಅಥವಾ ಭಾರತದ ದ್ವೇಷ ಎನ್ನುವುದು?