ವಿವಿಧ ಸುಖಸೌಲಭ್ಯಗಳು ಮನಸ್ಸಿನ ಶಕ್ತಿ ವೃದ್ಧಿಸುವ ‘ಸಂಯಮ’ವನ್ನು ನೀಡಬಲ್ಲವೇ ?

ಇತ್ತೀಚಿಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಎಲ್ಲ ವಿಷಯಗಳು ತಕ್ಷಣ ಬೇಕಾಗಿರುತ್ತವೆ. ಉದಾ. ಮಕ್ಕಳಿಗೆ ಹಸಿವಾದಾಗ, ತಾಯಿ ಆಹಾರವನ್ನು ತಯಾರಿಸುವವರೆಗೆ ಮಕ್ಕಳು ಕಾಯಲು ತಯಾರಿರುವುದಿಲ್ಲ. ಆಗ ತಕ್ಷಣ ಸಿದ್ಧವಾಗುವ ಮ್ಯಾಗಿಯಂತಹ ಪದಾರ್ಥಗಳನ್ನು ಮಕ್ಕಳು ಬೇಡುತ್ತಾರೆ. ಇಂದಿನ ಈ ವಿಷಯವನ್ನು ಬರೆಯುವುದರ ಹಿಂದೆ ನನ್ನ ಕೆಲವು ಅನುಭವಗಳು ಕಾರಣವಾದವು. ಒಬ್ಬ ಮಹಿಳಾ ರೋಗಿ ಆಸ್ಪತ್ರೆಗೆ ಬಂದಿದ್ದಳು, ಅವಳಿಗೆ ಜ್ವರ ಬಂದಿತ್ತು ಮತ್ತು ಅವಳು ಔಷಧಿಯನ್ನು ತೆಗೆದುಕೊಂಡು ಹೋದಳು. ಅವಳು ಸಾಯಂಕಾಲ ಮತ್ತೆ ಬಂದಳು ಮತ್ತು ”ಔಷಧದಿಂದ ಯಾವುದೇ ಪರಿಣಾಮವಾಗಿಲ್ಲ”, ಎಂದು ಹೇಳಿದಳು. ನಾನು ಅವಳಿಗೆ, ”ಬೆಳಗ್ಗೆಯμಟ್ÉÃ ಔಷಧಿ ತೆಗೆದುಕೊಂಡಿದ್ದೀರಿ, ಅದರ ಪರಿಣಾಮ ಕಂಡು ಬರಲು ಸ್ವಲ್ಪ ಸಮಯ ಬೇಕಾಗುತ್ತದೆ” ಎಂದು ಸರಿಯಾಗಿ ತಿಳಿಸಿ ಹೇಳಿದೆನು. ಆದರೆ ಮಹಿಳಾ ರೋಗಿ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲದ ಕಾರಣ ನಾನು ಅವಳನ್ನು ಬೇರೆ ಕಡೆಗೆ ಹೋಗಲು ಬಿಟ್ಟೆ. ಎರಡನೇ ಬಾರಿ ಅವಳು ಮತ್ತೆ ನನ್ನ ಬಳಿಗೆ ಬಂದಾಗ, ಅವಳೊಂದಿಗೆ ನಾನು ಮೊದಲು ಇತರ ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆನು. ಅವಳೊಂದಿಗೆ ಮಾತನಾಡಿದ ಬಳಿಕ ನನಗೆ ಅವಳು ತನ್ನ ನೌಕರಿ ಮತ್ತು ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ ಎಂಬುದು ತಿಳಿಯಿತು. ಸಮಯದ ಅಭಾವದಿಂದ ಎಲ್ಲವನ್ನು ಶೀಘ್ರ ಗತಿಯಲ್ಲಿ ಹೇಗೆ ಮಾಡುವುದು ಎಂಬ ಚಿಂತೆ ಅವಳಲ್ಲಿ ನಿರಂತರವಾಗಿರುತ್ತದೆ ಎಂದು ತಿಳಿಯಿತು. ತದನಂತರ ರೆಫ್ರಿಜರೇಟರ್‌ನಲ್ಲಿ ಹಿಂದಿನ ದಿನವೇ ಹಿಟ್ಟನ್ನು ನಾದಿ ಇಡುವುದು, ಉಪಾಹಾರಕ್ಕೆ ‘ರೆಡಿ ಮಿಕ್ಸ್‌’ ಪ್ಯಾಕೆಟ್‌ಗಳನ್ನು (ಸಿದ್ಧ ಪದಾರ್ಥಗಳ ಪ್ಯಾಕೀಟುಗಳು) ಉಪಯೋಗಿಸುತ್ತಿರುವುದು, ಹೀಗೆ ಎಲ್ಲ ವಿವಿಧ ಪರ್ಯಾಯಗಳನ್ನು ಅವಳು ನನಗೆ ಹೇಳಿದಳು. ’ಒಂದು ದಿನ ನಾನು ಮಲಗಿದರೆ, ಬಹಳ ಹಾನಿಯಾಗುತ್ತದೆ’ ಎನ್ನುವ ಭಯ ಅವಳ ಮನಸ್ಸಿನಲ್ಲಿತ್ತು. ಇದರ ಪರಿಣಾಮದಿಂದ, ‘ಔಷಧಿ ಕೂಡ ಬೇಗನೆ ಕಾರ್ಯ ಮಾಡಬೇಕು’ ಎನ್ನುವುದು ಅವಳ ನಂಬಿಕೆಯಾಗಿತ್ತು. ಈ ಎಲ್ಲವನ್ನು ಹೇಳುವುದರ ಉದ್ದೇಶವೇನೆಂದರೆ, ‘ಇನ್ಸಸ್ಟಂಟ್‌ ‘ (ತಕ್ಷಣ ಅಥವಾ ತ್ವರಿತವಾಗಿ) ಮಾಡುವ ಗುಂಗಿನಲ್ಲಿ ಆ ಮಹಿಳಾ ರೋಗಿಯು ಆರೋಗ್ಯದ ದೃಷ್ಟಿಯಿಂದ ಬಹಳಷಟ್Ä ತಪ್ಪುಗಳನ್ನು ಮಾಡುತ್ತಿದ್ದಳು. ಇದರ ಪರಿಣಾಮದಿಂದ, ಅವಳ ಆರೋಗ್ಯ ಆಗಾಗ ಹದಗೆಡಲು ಪ್ರಾರಂಭವಾಯಿತು. ಅದರಲ್ಲಿಯೂ ಔಷಧಿಯನ್ನು ತೆಗೆದುಕೊಂಡ ನಂತರ ಆರಾಮ ಅನಿಸತೊಡಗಿದ ಕೂಡಲೇ ಮತ್ತೆ ಅದೇ ತಪ್ಪು ವಿಷಯಗಳು ಮುಂದುವರೆದವು. ಇದರಿಂದ ಈ ವಿಷವರ್ತುಲ ಹಾಗೆಯೇ ಮುಂದುವರಿಯಿತು. ಈ ಉದಾಹರಣೆಯಿಂದ ಸದ್ಯ ಜನರ ಮನಸ್ಸಿನ ಸಂಯಮ ಕ್ಷೀಣಿಸುತ್ತಾ ಹೋಗುತ್ತಿದೆ ಎನ್ನುವುದು ನನಗೆ ಕಲಿಯಲು ಸಿಕ್ಕಿತು. ‘ಎಲ್ಲ ವಿಷಯಗಳೂ ಬೇಗನೆ ಸಿಗಬೇಕು ಅಥವಾ ಬೇಗನೇ ಆಗಬೇಕು’ ಎಂದು ಎಲ್ಲರಿಗೂ ಅನಿಸುತ್ತಿರುತ್ತದೆ.

೧. ’ಸಂಯಮ ಕಡಿಮೆಯಾಗಿದೆ’ ಎಂಬುದನ್ನು ತೋರಿಸುವ ಉದಾಹರಣೆಗಳು

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

ಅ. ಚಿಕ್ಕ ಮಗು ಯಾವುದಾದರೂಂದು ಯೋಜನೆಯನ್ನು ಮಾಡುವಾಗ ಅದನ್ನು ತಕ್ಷಣವೇ ಪೂರ್ಣಗೊಳಿಸಲು ಆಗದಿದ್ದರೆ ಅಥವಾ ಹಾಳಾದರೆ ಆ ಮಗು ಸಿಡಿಮಿಡಿಗೊಳ್ಳುತ್ತದೆ.

ಆ. ಬಹುತೇಕ ಜನರು ಹಣವನ್ನು ಶ್ರಮವಿಲ್ಲದೇ ಶೀಘ್ರಗತಿ ಯಲ್ಲಿ ಹೇಗೆ ಗಳಿಸಬಹುದು ? ಎಂದು ಚಡಪಡಿಸುತ್ತಿರುತ್ತಾರೆ. ಇದರ ಪರಿಣಾಮದಿಂದ ಕೆಟ್ಟ ಮಾರ್ಗದಿಂದ ಹಣವನ್ನು ಗಳಿಸಲು ಪ್ರಾರಂಭಿಸುತ್ತಾರೆ. ಇದರಿಂದಲೇ ಮುಂದೆ ಅವರು ಅಪರಾಧ, ವ್ಯಸನ ಇತ್ಯಾದಿಗಳಲ್ಲಿ ಸಿಲುಕುತ್ತಾರೆ.

ಇ. ವಿದ್ಯಾರ್ಥಿಗಳಲ್ಲಿ ತ್ವರಿತ ಯಶಸ್ಸು ಗಳಿಸುವುದರ ಸ್ಪರ್ಧೆ ಉಂಟಾಗಿದೆ. ಯಾವುದಾದರೊಂದು ವಿಷಯದಲ್ಲಿ ನಾವು ಕುಶಲರಾಗಲು ತಾಳ್ಮೆಯಿಂದ ಮತ್ತು ಶಿಸ್ತುಬದ್ಧರೀತಿಯಲ್ಲಿ ಪ್ರಯತ್ನಿಸುತ್ತಿರಬೇಕು ಎಂಬುದು ಅವರಿಗೆ ತಿಳಿಯುವುದಿಲ್ಲ. ಯಶಸ್ಸು ಸಿಗದಿದ್ದರೆ, ನಿರಾಶೆ, ಸಿಡಿಮಿಡಿ ಹೆಚ್ಚಾಗುತ್ತದೆ ಮತ್ತು ಕೆಲವರಿಗೆ ಆತ್ಮಹತ್ಯೆಯ ವಿಚಾರಗಳೂ ಬರುತ್ತವೆ ಮತ್ತು ಪರಿಸ್ಥಿತಿ ಗಂಭೀರವಾಗುತ್ತದೆ.

ಈ. ಗೃಹಿಣಿಯರಿಗೆ ಸಮಯ ಇರುವುದಿಲ್ಲ; ಆದುದರಿಂದ ಅವರು ಬೇಗನೇ ತಯಾರಾಗುವ ಪದಾರ್ಥಗಳನ್ನು ಮಾಡುವುದರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇತ್ತೀಚೆಗೆ ಮೊಬೈಲನಲ್ಲಿ ಒಂದು ’ಕ್ಲಿಕ್’ ಮಾಡಿದರೆ, ತಕ್ಷಣವೇ ಬೇಕಾಗಿರುವ ಆಹಾರ ಪದಾರ್ಥಗಳು ನಮ್ಮ ಮನೆಯನ್ನು ತಲುಪುತ್ತವೆ. ಅದರ ಪ್ರಮಾಣವೂ ಈಗ ಸಾಕಷ್ಟು ಹೆಚ್ಚಾಗಿದೆ. ಆಹಾರವನ್ನು ತ್ವರಿತವಾಗಿ ಬಿಸಿ ಮಾಡಲು ‘ಮೈಕ್ರೋ ವೇವ್‌’ಗಳನ್ನು ಬಳಸುವುದು, ಶರಬತ್ತು(ಪಾನಕ) ತಯಾರಿಸಲು ಮಾರುಕಟ್ಟೆಯಲ್ಲಿ ಸಿಗುವ ಸಿರಪ್‌ಗಳನ್ನು ಉಪಯೋಗಿಸುವುದು, ಪಲ್ಯವನ್ನು ಬೇಗನೆ ತಯಾರಿಸಲು ಸಿದ್ಧ ಮಸಾಲೆಗಳನ್ನು ಉಪಯೋಗಿಸುವುದು ಅವುಗಳಲ್ಲಿ ‘ಸಂರಕ್ಷಕಗಳನ್ನು (ಪ್ರಿಝರ್ವೇಟೀವ)’ (ಹಾಳಾಗ ದಂತೆ ತಡೆಯಲು ಬಳಸುವ ರಾಸಾಯನಿಕಗಳು) ಬಹಳಷ್ಟು ಪ್ರಮಾಣದಲ್ಲಿ ಬಳಸಲಾಗುತ್ತದೆ, ‘ಫ್ರೋಝನ್’ ಪದಾರ್ಥಗಳನ್ನು (ಫ್ರೀಜನಲ್ಲಿಟ್ಟು ಗಟ್ಟಿ ಮಾಡಿದ ಪದಾರ್ಥ ಗಳು) ಫ್ರಿಜ್‌ನಿಂದ ಹೊರತೆಗೆದು ಸಿದ್ಧ ಪಡಿಸುವುದಿರುತ್ತದೆ. ಕೇವಲ ಬೇಗನೆ ಪದಾರ್ಥಗಳನ್ನು ತಯಾರಿಸಬೇಕೆಂದು ಇಂತಹ ಒಂದಲ್ಲ ಅನೇಕ ತಪ್ಪುಗಳನ್ನು ಮಾಡುತ್ತಾರೆ.

ಉ. ರೋಗಿಗಳ ವಿಷಯದಲ್ಲಿ ಗಮನಕ್ಕೆ ಬರುವುದೆಂದರೆ, ತಲೆ ತುಂಬಾ ನೋಯುತ್ತಿದ್ದರೆ, ಅದರ ಮೂಲ ಕಾರಣವನ್ನು ಕಂಡು ಹಿಡಿಯದೇ ತಕ್ಷಣವೇ ತಮ್ಮ ಮನಸ್ಸಿನಂತೆಯೇ ಮೆಡಿಕಲ್‌ ಸ್ಟೋರ್‌ಗೆ ಹೋಗಿ ಮಾತ್ರೆ ತಂದು ತೆಗೆದು ಕೊಳ್ಳುತ್ತಾರೆ. (ಇದರಲ್ಲಿಯೂ ತಲೆನೋವಿನ ಮೂಲ ಕಾರಣವನ್ನು ಹುಡುಕುವುದಿಲ್ಲ. ಇಲ್ಲಿಯೂ ’ಸಮಯದ ಅಭಾವ’ದ ದೂರನ್ನು ಹೇಳಲಾಗುತ್ತದೆ)

ಊ. ಚಿಕ್ಕ ಮಗು ಕೃಶವಾಗಿದ್ದರೆ, ಅದು ಬೇಗನೇ ದಪ್ಪಗಾಗಲು ಮಕ್ಕಳ ಮೇಲೆ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ.

ಎ. ವ್ಯಕ್ತಿಯು ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ, ಅದು ಶೀಘ್ರವಾಗಿ ಕಡಿಮೆಯಾಗಲು ತಪ್ಪು ಪರ್ಯಾಯಗಳನ್ನು ಆರಿಸುತ್ತಾರೆ. ತಕ್ಷಣವೇ ಪರಿಣಾಮ ಕಂಡು ಬರದಿದ್ದರೆ, ಏನೂ ಉಪಯೋಗವಿಲ್ಲ ? ಎಂದು ನಿರಾಶೆ ಪಡುತ್ತಾರೆ.

ಏ. ಅಧ್ಯಾತ್ಮದ ಮಾರ್ಗದಲ್ಲಿನ ವ್ಯಕ್ತಿಯಿದ್ದರೆ, ಸಾಧನೆಯಲ್ಲಿ ಸ್ವಲ್ಪ ಪ್ರಯತ್ನ ಮಾಡಿದ ಕೂಡಲೇ, ’ತನಗೆ ಅದರ ಫಲ ಕೂಡಲೇ ಸಿಗಬೇಕು’ ಎಂಬ ಅಪೇಕ್ಷೆಯನ್ನು ಇಟ್ಟುಕೊಳ್ಳುತ್ತಾನೆ, ಹಾಗೆ ಆಗದಿದ್ದರೆ, ನಿರಾಶೆ ಬರುತ್ತದೆ. ಇವು ಕೆಲವು ನಿರ್ದಿಷ್ಟ ಉದಾಹರಣೆಗಳಾಗಿವೆ. ಇಂತಹ ಒಂದಲ್ಲ ಹಲವು ಉದಾಹರಣೆಗಳು ನಮಗೆ ನೋಡಲು ಸಿಗಬಹುದು. ನಾವು ಅವುಗಳ ಮೂಲಕ್ಕೆ ಹೋದಾಗ, ನಮಗೆ ಮನಸ್ಸಿನ ಸಂಯಮ ಕಣ್ಮರೆಯಾಗುತ್ತಿದೆ ಎಂಬುದು ಕಂಡು ಬರುತ್ತದೆ.

೨. ಮನಸ್ಸಿನ ಸಂಯಮ ಕುಸಿದಾಗ ಉದ್ಭವಿಸುವ ಮನಸ್ಸಿನ ರೋಗಗಳು

ಅ. ಸಿಡುಕುತನ (ಕಿರಿಕಿರಿ ಆಗುವುದು)

ಆ. ಕೋಪ ಬರುವುದು

ಇ. ಮನಸ್ಸಿನ ಅಸ್ವಸ್ಥತೆ

ಈ. ಅತಿವಿಚಾರ ಮಾಡುವುದು

ಉ. ಅಪೇಕ್ಷೆಗಳು ಹೆಚ್ಚಾಗುವುದು

ಊ. ನಿರಾಶೆ ಬರುವುದು

೩. ಮನಸ್ಸಿನ ಸಂಯಮವನ್ನು ಹೆಚ್ಚಿಸಲು ಮಾಡಬೇಕಾದ ಪ್ರಯತ್ನಗಳು

ಮನಸ್ಸಿನ ಸಂಯಮವನ್ನು ಹೆಚ್ಚಿಸಲು, ಮೊದಲು ನಾವು ನಮ್ಮ ಸ್ವಂತ ಬುದ್ಧಿಗೆ ಕಟ್ಟುನಿಟ್ಟಾಗಿ ಪ್ರಯತ್ನಿಸುವ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಉದಾ : ಮಗು ಜನ್ಮಕ್ಕೆ ಬರಲು ಸಂಪೂರ್ಣ ೯ ತಿಂಗಳುಗಳ ಸಮಯವನ್ನು ಕೊಡಬೇಕಾಗುತ್ತದೆ. ಮಗುವಿನ ಬೆಳವಣಿಗೆ ಸರಿಯಾಗಿ ಆಗಲು ನಿಸರ್ಗದ ನಿಯಮವೆಂದು ನಾವು ಆ ಕಾಲಾವಧಿಯನ್ನು ಬುದ್ಧಿಯಿಂದ ತಿಳಿದುಕೊಂಡಿರುತ್ತೇವೆ. ಆದುದರಿಂದ ಅಲ್ಲಿ ನಾವು ಸಂಯಮವನ್ನು ಇಟ್ಟು ಕೊಳ್ಳುತ್ತೇವೆ. ನಾವು ಮಗು ಬೇಗನೆ ಹುಟ್ಟಬೇಕೆಂದು ಏನೂ ಮಾಡುವುದಿಲ್ಲ. ಏಕೆಂದರೆ ನಮಗೆ ಹೀಗೆ ಗಡಿಬಿಡಿ ಮಾಡುವುದರಿಂದ ಮಗುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ ಎಂಬುದು ತಿಳಿದಿರುತ್ತದೆ ಮತ್ತು ನಮಗೆ ಅದರ ಪರಿಣಾಮದ ಅರಿವಿರುತ್ತದೆ. ಈ ಉದಾಹರಣೆಯಿಂದ, ನಮಗೆ ಗಮನಕ್ಕೆ ಬರುವು ದೇನೆಂದರೆ ನಮ್ಮ ಬುದ್ಧಿಗೆ ಯಾವುದಾದರೊಂದು ವಿಷಯದ ಯೋಗ್ಯ ಜ್ಞಾನ ಆಗಿದ್ದರೆ, ನಮ್ಮಿಂದ ಅಂತಹ ಯೋಗ್ಯ ಕೃತಿ ತನ್ನಿಂದತಾನೇ ಆಗುತ್ತದೆ ಮತ್ತು ಅಲ್ಲಿ ನಮ್ಮ ಸಂಯಮವೂ ಇರುತ್ತದೆ; ಏಕೆಂದರೆ ಬುದ್ಧಿಗೆ ಆ ಪರಿಣಾಮದ ಅರಿವು ಆಗಿರುತ್ತದೆ. ಅಂದರೆ ಇಚ್ಛೆ, ಕ್ರಿಯೆ ಮತ್ತು ಜ್ಞಾನ ಈ ತ್ರಿಸೂತ್ರಗಳ ಸಹಾಯದಿಂದ ನಾವು ನಮ್ಮ ಮನಸ್ಸಿನ ಸಂಯಮವನ್ನು ಹೆಚ್ಚಿಸಬಹುದು. ಇದನ್ನು ನಾವು ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ, ಅಂದರೆ ನಮಗೆ ಅಧಿಕ ಸ್ಪಷ್ಟತೆ ಬರುವುದು.

೩ ಅ. ಇಚ್ಛಾಶಕ್ತಿಗೆ ಕ್ರಿಯಾಶಕ್ತಿಯ ಜೊತೆ ಬೇಕು : ಒಬ್ಬ ವಿದ್ಯಾರ್ಥಿಗೆ ಆಧುನಿಕ ವೈದ್ಯನಾಗಬೇಕೆಂಬ ಇಚ್ಛೆ ಆಯಿತು, ಇದು ಅವನ ಇಚ್ಛಾಶಕ್ತಿ ಆಯಿತು. ಈಗ ಕೇವಲ ಇಚ್ಛೆ ಇದ್ದರೆ ಉಪಯೋಗವಿಲ್ಲ. ಆಧುನಿಕ ವೈದ್ಯನಾಗಲು ತಾನು ಈಗಿನಿಂದಲೇ ಯಾವ ವಿಷಯಗಳನ್ನು ಮನಸ್ಸಿನಿಂದ ಕಲಿಯಬೇಕು ? ತನಗೆ ಕಲಿಯಲು ಎಷ್ಟು ವರ್ಷಗಳನ್ನು ಕೊಡಬೇಕಾಗುತ್ತದೆ ? ಅಷ್ಟು ಶ್ರಮ ತೆಗೆದುಕೊಳ್ಳಲು ಸ್ವಂತ ಶಾರೀರಿಕ ಕ್ಷಮತೆ ಇದೆಯೋ ಅಥವಾ ಇಲ್ಲವೋ ? ಅಷ್ಟು ಅಭ್ಯಾಸ ಮಾಡುವ ಸ್ವಂತ ಮನಸ್ಸಿನ ಸಿದ್ಧತೆಯಿದೆಯೋ ಅಥವಾ ಇಲ್ಲವೋ ? ಈ ಸಂದರ್ಭದಲ್ಲಿ ಎಲ್ಲ ಜ್ಞಾನವನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ಎಲ್ಲ ವಿಷಯಗಳು ಕ್ರೋಢೀಕೃತಗೊಂಡು, ಆ ಹುಡುಗನ ಬುದ್ಧಿಗೆ ’ಇವೆಲ್ಲವನ್ನು ತಾನು ಮಾಡಬಹುದು’ ಎಂದು ಮನವರಿಕೆಯಾದಾಗ, ಆ ಮಗುವಿನ ಕ್ರಿಯಾಶಕ್ತಿ ಮಹತ್ವದ್ದಾಗುತ್ತದೆ. ಅಂದರೆ, ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇವೆಲ್ಲವುಗಳ ಜೊತೆ ಸಮರ್ಪಕವಾಗಿ ಸಂಯೋಜನೆಯಾದರೆ ಯಶಸ್ಸು ಖಂಡಿತವಾಗಿ ದೊರಕುತ್ತದೆ.

೩ ಆ. ಬುದ್ಧಿಯಿಂದ ಮನಸ್ಸಿಗೆ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರೆ ಸಂಯಮ ಉಳಿಯುತ್ತದೆ : ನಮಗೆ ಆಗುವ ಅನಾರೋಗ್ಯದ ಉದಾಹರಣೆಯನ್ನು ನೋಡೋಣ. ರೋಗಿಗೆ ರೋಗದಿಂದ ಗುಣಹೊಂದುವ ಇಚ್ಛೆಯಿರುತ್ತದೆ. ಆಗ ತನಗೆ ಆಗಿರುವ ಅನಾರೋಗ್ಯದ ವಿಷಯದ ಸಂಪೂರ್ಣ ಮಾಹಿತಿಯನ್ನು ವೈದ್ಯರಿಂದ ಪಡೆಯಬೇಕು, ಅಂದರೆ ಅನಾರೋಗ್ಯದ ಗಂಭೀರತೆ, ಅದಕ್ಕೆ ಯಾವ ಕಾಳಜಿ ಅಥವಾ ಪಥ್ಯಗಳನ್ನು ಪಾಲಿಸಬೇಕು ? ಯಾವ ವಿಷಯಗಳಿಂದ ದೂರವಿರಬೇಕು ? ಇತ್ಯಾದಿ ತಿಳಿದುಕೊಂಡ ಬಳಿಕ ಅದರಂತೆ ಕಟ್ಟುನಿಟ್ಟಾಗಿ ಪ್ರಯತ್ನಿಸುತ್ತಿದ್ದರೆ, ನಾವು ಅದರಿಂದ ಸುಲಭವಾಗಿ ಹೊರಬರಬಹುದು. ಯಾವುದಾದರೊಂದು ರೋಗ ವಾಸಿಯಾಗಲು ಸಾಕಷ್ಟು ಸಮಯಾವಕಾಶ ನೀಡಬೇಕು, ಮತ್ತು ನಾವು ಪಥ್ಯದ ಕಾಳಜಿಯನ್ನು ತೆಗೆದುಕೊಂಡರೆ ‘ರೋಗ ವಾಸಿಯಾಗುತ್ತದೆ’ ಎಂದು ಬುದ್ಧಿಗೆ ಮನವರಿಕೆ ಮಾಡಿಕೊಟ್ಟರೆ, ನಮ್ಮ ಮನಸ್ಸಿನ ಸಂಯಮ ಉಳಿಯುತ್ತದೆ. ಇದರೊಂದಿಗೆ ರೋಗದಿಂದ ಶೀಘ್ರ ಗುಣಮುಖರಾಗುವ ಆತುರದಲ್ಲಿ ಮೆಡಿಕಲ್‌ ಶಾಪ್‌ಗೆ ಹೋಗಿ ತಮ್ಮ ಸ್ವಂತ ಮನಸ್ಸಿನಂತೆ ಔಷಧಿಗಳನ್ನು ತೆಗೆದುಕೊಳ್ಳದೇ ವೈದ್ಯರಿಂದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಈ ರೀತಿಯಲ್ಲಿ, ವಿವಿಧ ಸುಖಸೌಲಭ್ಯಗಳು ನಮ್ಮ ಜೀವನವನ್ನು ಆರಾಮದಾಯಕವಾಗಿಸಿದರೂ, ನಮ್ಮ ಸ್ವಂತ ದೇಹ ಮತ್ತು ಮನಸ್ಸಿನ ಸಂಯಮವನ್ನು ಕಾಪಾಡಲು ಯಾವ ಮತ್ತು ಎಷ್ಟು ಸುಖಸೌಲಭ್ಯಗಳನ್ನು ನಾವು ಉಪಯೋಗಿಸಬೇಕು ಎಂದು ವಿಚಾರ ಮಾಡುವುದು ಸ್ವಂತ ಶರೀರ ಮತ್ತು ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. – ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ (೨೩.೧೦.೨೦೨೩)