ಹಿಂದೂ ಧರ್ಮ ಎಂದರೇನು ? ಇದರ ಬಗ್ಗೆ ವಿವೇಚನೆ ಮಾಡುವ ಲೇಖನ
ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಒಂದು ಕಾರ್ಯಾಗಾರ ದಲ್ಲಿ ಹಿಂದುತ್ವದ ಬಗ್ಗೆ ಚರ್ಚೆ ನಡೆದಿತ್ತು. ಚಹಾದ ಸಮಯದಲ್ಲಿ ನಾನು ಕೆಲವು ವಿದ್ಯಾರ್ಥಿಗಳಿಗೆ, ”ಹಿಂದೂ ಧರ್ಮ ಅಂದರೇನು ? ಎಂದು ನೀವು ನನಗೆ ಹೇಳಬಹುದೇ ?”, ಎಂದು ಪ್ರಶ್ನಿಸಿದೆ. ಈ ಪ್ರಶ್ನೆಗೆ ಎಲ್ಲರೂ ಶಾಂತರಾಗಿದ್ದರು. ಸ್ವಲ್ಪ ಸಮಯದ ನಂತರ ಒಬ್ಬ ಹುಡುಗಿಯು, ’ಹಿಂದೂಗಳು ಅನೇಕ ದೇವತೆಗಳನ್ನು ಪೂಜಿಸುತ್ತಾರೆ’, ಎಂದಳು. ಆಗ ನಾನು ಅವಳಿಗೆ, ”ಈ ಅನೇಕ ದೇವತೆಗಳನ್ನು ಯಾರು ನಿರ್ಮಿಸಿದರು ?”, ಎಂದು ಕೇಳಿದಾಗ ಮಾತ್ರ ಎಲ್ಲವೂ ಶಾಂತವಾಯಿತು. ಯಾರೂ ಏನೂ ಮಾತನಾಡಲಿಲ್ಲ. ನಂತರ ನಾನು, ”ನೀವು ಎಂದಾದರೂ ’ಬ್ರಹ್ಮ’ ಈ ಶಬ್ದವನ್ನು ಕೇಳಿದ್ದೀರಾ ? ಸೃಷ್ಟಿಯ ಸೃಜನಕರ್ತ ಬ್ರಹ್ಮನು ದೇವರೆಂದರೆ ಅಂತಿಮ ಸತ್ಯ, ಅಂದರೆ ಬ್ರಹ್ಮನು ಸೃಷ್ಟಿಯ ಪ್ರಕಟೀಕರಣದ ಮೂಲ, ಅಂದರೆ ಅದರ ತಿರುಳಾಗಿದ್ದಾನೆ. ಈ ಬಗ್ಗೆ ನಿಮಗೆ ಮಾಹಿತಿ ಇದೆಯೇ ?” ಎಂದು ಕೇಳಿದೆ. ಅವರಲ್ಲಿ ಯಾರಿಗೂ ಬ್ರಹ್ಮನ ಬಗ್ಗೆ ಮಾಹಿತಿ ಇರಲಿಲ್ಲ. ನನಗೆ ನಂಬಲು ಆಗಲೇ ಇಲ್ಲ. ’ಪ್ರಾಚೀನ ಋಷಿಗಳು ಕಂಡು ಹಿಡಿದ ವೇದಗಳ ಸ್ವರೂಪದಲ್ಲಿನ ಉಚ್ಚ ತತ್ತ್ವಜ್ಞಾನ ಮುಂಬರುವ ಭಾರತೀಯ ಪೀಳಿಗೆಗಳವರೆಗೆ ಏಕೆ ತಲುಪಿಲ್ಲ ?’, ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು.
೧. ’ಅದ್ವೈತ, ಅಂದರೆ ಈಶ್ವರ ಮತ್ತು ನಾನು ಒಂದೇ ಆಗಿದ್ದೇವೆ’, ಎಂಬ ಅತ್ಯುಚ್ಚ ಸ್ತರದ ಹಿಂದೂಗಳ ತತ್ತ್ವಜ್ಞಾನ !
ಜರ್ಮನ್ ತತ್ತ್ವಜ್ಞಾನಿಗಳು ಮತ್ತು ವಿಜ್ಞಾನಿ ಗಳು ಈ ತತ್ತ್ವಜ್ಞಾನವನ್ನು ಬಹಳ ಹಾಡಿ ಹೊಗಳಿದ್ದಾರೆ. ಇಷ್ಟೇ ಅಲ್ಲ, ನೂರಾರು ವರ್ಷ ಗಳ ಹಿಂದೆ ಈ ತತ್ತ್ವಜ್ಞಾನವು ಯುರೋಪ್‌ನ್ನು ತಲುಪಿತು. ಈ ಘಟನೆಯ ನಂತರ ಯಾವಾಗ ನಾನು ಯುವ ಭಾರತೀಯ ಹುಡುಗ-ಹುಡುಗಿಯರನ್ನು ಭೇಟಿಯಾಗುತ್ತಿದ್ದೆನೋ ಮತ್ತು ಅವರೊಂದಿಗೆ ಮಾತನಾಡುವ ಅವಕಾಶ ಸಿಗುತ್ತಿತ್ತೋ, ಆಗ ನಾನು ಅವರಿಗೆ ’ನೀವು ನನಗೆ ಹಿಂದೂ ಧರ್ಮದ ಬಗ್ಗೆ ತಿಳಿಸಿ ಹೇಳಬಹುದೇ ?’, ಎಂದು ಕೇಳುತ್ತಿದ್ದೆನು. ಇಲ್ಲಿಯವರೆಗೆ ನನಗೆ ಯಾರೂ ಭಾರತೀಯ ಜ್ಞಾನದ ತಳಹದಿ ಯಾವುದು ? ಎಂದು ಹೇಳಲಿಲ್ಲ. ’ಜಗತ್ತಿನ ವಿವಿಧ ಸಂಸ್ಕೃತಿಗಳ ವಿಚಾರ ಮಾಡಿದರೆ ಭಾರತೀಯ ಪರಂಪರೆಯ ಸ್ಥಾನವು ಎಲ್ಲಕ್ಕಿಂತ ಮೇಲ್ಮಟ್ಟದಲ್ಲಿದೆ, ಇದು ಭಾರತೀಯರಿಗೆ ಗೊತ್ತಿಲ್ಲ’, ಎಂದು ನನಗೆ ಅನಿಸುತ್ತದೆ. ಈ ತತ್ತ್ವಜ್ಞಾನವು ವಿಚಾರ ಮತ್ತು ಶಬ್ದಗಳ ಆಚೆಯದ್ದಾಗಿದೆ ಅಂದರೆ ಅದ್ವೈತÀ ಮಟ್ಟದ, ಅಂದರೆ ನಾನು ಮತ್ತು ಈಶ್ವರ ಒಂದೇ ಆಗಿದ್ದೇವೆ. ಈ ತತ್ತ್ವಜ್ಞಾನದಿಂದಾಗಿ ಭಾರತೀಯ ಪರಂಪರೆಯು ಅನಂತರ ಬಂದ ಪರಂಪರೆಗಳ ಬಳಿಕವೂ ಉಳಿದುಕೊಂಡಿದೆ. ’ಭಾರತೀಯರಿಗೆ ಅವರ ಋಷಿಗಳ ಸರ್ವಶ್ರೇಷ್ಠ ತತ್ತ್ವಜ್ಞಾನವು ವಿಸ್ಮರಣೆಯಾಗಿ ನಂತರ ಬಂದ ಪರಂಪರೆಗಳ ಬಗ್ಗೆ (ಋಷಿಗಳು ಹೇಳಿದ್ದಲ್ಲ), ಹೊಸ ಸಂಪ್ರದಾಯಗಳ ಬಳಿ ಸೃಷ್ಟಿಯ ನಿರ್ಮಿತಿಯ ವಿಷಯದಲ್ಲಿ ಯೋಗ್ಯ ಸ್ಪಷ್ಟೀಕರಣವಿದೆ’, ಎಂಬ ಆಭಾಸವನ್ನು ನಿರ್ಮಾಣ ಮಾಡಲಾಗಿದೆ. ಸೃಷ್ಟಿಕರ್ತನು ಅನೇಕರಿರಲು ಸಾಧ್ಯವಿಲ್ಲ. ಆ ಸೃಷ್ಟಿಕರ್ತನು ಒಂದೇ ಸರ್ವೋಚ್ಚ ಶಕ್ತಿಯಾಗಿರಬೇಕು.
೨. ಹಿಂದೂ ಧರ್ಮವೇ ಸತ್ಯದೆÀಡೆಗೆ ಹೋಗುವುದಾಗಿದೆ !
’ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳು ಏಕೇಶ್ವರವಾದವನ್ನು ಪಾಲಿಸುತ್ತವೆ’ ಮತ್ತು ಅವು ಇದರ ಮೇಲೆ ಒತ್ತು ನೀಡುತ್ತವೆ. ತದ್ವಿರುದ್ಧ ’ಹಿಂದೂಗಳು ಅನೇಕ ದೇವತೆಗಳ ಪೂಜೆಯನ್ನು ಮಾಡುತ್ತಾರೆ. ಆದುದರಿಂದ ಅವರ ಬಳಿ ಆಯ್ಕೆ ಮಾಡಲು ಇನ್ನು ಒಳ್ಳೆಯ ಪರ್ಯಾಯಗಳಿವೆ ಮತ್ತು ಅವರು ಸತ್ಯದ ಸಮೀಪಕ್ಕೆ ಹೋಗುತ್ತಾರೆ’; ಆದರೆ ಹೆಚ್ಚಿನ ಹಿಂದೂಗಳಿಗೆ ತಮ್ಮ ಪರಂಪರೆಯ ಬಗ್ಗೆ ಅಜ್ಞಾನವಿದ್ದುದರಿಂದ ಅವರು ಹಿಂದೂ ಧರ್ಮದಿಂದ ದೂರ ಹೋಗುತ್ತಿದ್ದಾರೆ. ನಿಜ ಹೇಳಬೇಕೆಂದರೆ ’ನಾವು ಅನೇಕ ದೇವತೆಗಳನ್ನು ಪೂಜಿಸುತ್ತೇವೆ, ಇದರಲ್ಲಿ ತಪ್ಪೇನಿದೆ ? ಇದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ’, ಎಂದು ಹಿಂದೂಗಳು ಎಲ್ಲರಿಗೆ ಹೇಳಬೇಕು. ವಾಸ್ತವದಲ್ಲಿ ಅನೇಕ ದೇವತೆಗಳನ್ನು ಪೂಜಿಸುವುದು ತಪ್ಪಲ್ಲ. ತದ್ವಿರುದ್ಧ ಅದುವೇ ಯೋಗ್ಯವಾಗಿದೆ. ’ಜಗತ್ತಿನಲ್ಲಿ ಬಹಳಷ್ಟು ಪ್ರಮಾಣದಲ್ಲಿ ವೈವಿಧ್ಯ ಇರುವುದರಿಂದ ಜಗತ್ತಿನ ಕಾರುಬಾರನ್ನು ನಡೆಸುವ ವಿವಿಧ ಖಾತೆಗಳನ್ನು ವಿವಿಧ ದೇವತೆಗಳು ನಡೆಸುತ್ತಾರೆ, ಆದರೆ ಈ ಎಲ್ಲ ದೇವತೆಗಳು ಓರ್ವ ಬ್ರಹ್ಮನಲ್ಲಿ ಸಮಾವೇಶಗೊಂಡಿದ್ದಾರೆ. ಇದು ಹಿಂದೂಗಳಿಗೆ ಗೊತ್ತಿಲ್ಲ, ಆದ್ದರಿಂದ ಅವರಿಗೆ ಇತರ ಎರಡೂ ಧರ್ಮಗಳು (ಮುಸಲ್ಮಾನ ಮತ್ತು ಕ್ರೈಸ್ತ) ಸರಿ ಹೇಳುತ್ತಿವೆ’, ಎಂದು ಅನಿಸುತ್ತದೆ. ವಾಸ್ತವದಲ್ಲಿ ಸ್ರೋತವು ಒಂದೇ ಇರಬೇಕು. ಒಂದು ವೇಳೆ ಹಿಂದೂಗಳಿಗೆ ತಮ್ಮ ಪರಂಪರೆಯ ಬಗ್ಗೆ ಜ್ಞಾನವಿದ್ದರೆ, ಕ್ರೈಸ್ತ ಅಥವಾ ಇಸ್ಲಾಮ್‌ಗಿಂತ ಹಿಂದೂ ಧರ್ಮವು ಚೆನ್ನಾಗಿದೆ; ಏಕೆಂದರೆ ಅದು ಸತ್ಯದೆಡೆಗೆ ಹೋಗುತ್ತದೆ, ಎಂದು ಹಿಂದೂಗಳು ತೋರಿಸಬಹುದು.
೩. ಹಿಂದೂ ಧರ್ಮ ಶ್ರೇಷ್ಠವಿದೆ, ಎಂದು ಯಾವ ರೀತಿ ಹೇಳಬಹುದು ?
ಕ್ರೈಸ್ತ ಮತ್ತು ಮುಸಲ್ಮಾನ ಪಂಥಗಳು, ಸೃಷ್ಟಿಯ ನಿರ್ಮಾಪಕ ಸೃಷ್ಟಿಯಿಂದ ಬೇರೆಯಾಗಿದ್ದಾನೆ ಎಂದು ಹೇಳುತ್ತವೆ ಮತ್ತು ಆ ಧರ್ಮದಲ್ಲಿ ಯಾರೂ ’ನಾನು ದೇವರೊಂದಿಗೆ ಏಕರೂಪನಾದೆನು’, ಎಂದು ಹೇಳುವುದಿಲ್ಲ. (ಕ್ರೈಸ್ತ ಪಂಥದಲ್ಲಿ ಜೀಸಸ್ ಒಂದು ಅಪವಾದವಾಗಿದ್ದು, ಅವನಿಗೆ ದೇವರ ಸ್ಥಾನಮಾನವನ್ನು ನೀಡಲಾಗಿದೆ.) ಮತ್ತೆ ಈ ಎರಡು ಪಂಥಗಳ ದೇವರಿಗೆ ಇಷ್ಟಾನಿಷ್ಟಗಳಿವೆ. ’ಯಾರು ನನ್ನನ್ನು ನಂಬುವುದಿಲ್ಲವೋ, ಅವರು ನನಗೆ ಇಷ್ಟವಾಗುವುದಿಲ್ಲ’, ಎಂದು ಈ ದೇವರು ಓರ್ವ ವ್ಯಕ್ತಿಗೆ ಹೇಳಿದನು ಮತ್ತು ಅದನ್ನು ಪುಸ್ತಕದಲ್ಲಿ ಕೊಡಲಾಗಿದೆ. ಕ್ರೈಸ್ತರ ದೇವರು ’ಜೀಸಸ್ ಕ್ರೈಸ್ಟ್’ ಮತ್ತು ಅವರ ಗ್ರಂಥದ ಹೆಸರು ’ಬೈಬಲ್.’ ಇಸ್ಲಾಮ್ ಬಗ್ಗೆ ಹೇಳಬೇಕೆಂದರೆ, ’ಪ್ರವಾದಿ ಮಹಮದ್’ ಅವರ ದೇವರು ಮತ್ತು ಅವರ ಗ್ರಂಥ ’ಕುರಾನ್.’ ಈ ಪಂಥದಲ್ಲಿ ’ಯಾರು ತಮ್ಮ ದೇವರನ್ನು ನಂಬುವುದಿಲ್ಲವೋ, ಅವರು ದೇವರಿಗೆ ಇಷ್ಟವಾಗುವುದಿಲ್ಲ ಮತ್ತು ದೇವರ ಮೇಲೆ ವಿಶ್ವಾಸವಿಡದವರನ್ನು ಆ ದೇವರು ಅವರ ಮೃತ್ಯುವಿನ ನಂತರ ನರಕಕ್ಕೆ ಕಳುಹಿಸುತ್ತಾನೆ’, ಎಂದು ಹೇಳಲಾಗಿದೆ. ಇದು ಯೋಗ್ಯ ಅನಿಸುವುದಿಲ್ಲ.
ಈಗ ಇದರ ತುಲನೆಯಲ್ಲಿ ಹಿಂದೂ ಧರ್ಮದಲ್ಲಿ ಏನು ಹೇಳಲಾಗಿದೆ ? ಎಂಬುದನ್ನು ಹೋಲಿಸಿ ನೋಡೋಣ. ಹಿಂದೂ ಧರ್ಮದಲ್ಲಿ, ”ಜಗತ್ತಿನಲ್ಲಿ ನಿರ್ಮಾಣವಾದ ಪ್ರತಿಯೊಂದು ವಸ್ತುವಿನ ನಿರ್ಮಿತಿಗೆ ಬ್ರಹ್ಮನೇ ಕಾರಣ ನಾಗಿದ್ದಾನೆ, ಅವನು ಆನಂದದಾಯಿ, ಅನಂತ ಮತ್ತು ಶುದ್ಧ (ವಿಚಾರ ಮತ್ತು ಅರಿವು ಇವುಗಳ ಆಚೆಗೆ) ನಾಗಿದ್ದಾನೆ. ಬ್ರಹ್ಮನಿಂದ ಶಕ್ತಿ ಉತ್ಪತ್ತಿಯಾಗಿ ಜಗತ್ತಿನಲ್ಲಿ ವೈವಿಧ್ಯ ನಿರ್ಮಾಣವಾಯಿತು. ಇದು ಸಮುದ್ರದ ಮೇಲಿನ ಅಲೆಗಳಂತಿದೆ. ಸಮುದ್ರದ ಮೇಲಿನ ಅಲೆಗಳೆಂದರೆ ಅವನ ಶಕ್ತಿಗಳು ಮತ್ತು ಈ ಎಲ್ಲ ಅಲೆಗಳು ಒಟ್ಟಾಗಿರುವುದೆಂದರೆ ಸಮುದ್ರ. ಈ ಅಲೆಗಳು ಕಡಿಮೆಯಾದಾಗ, ಏನೂ ವ್ಯರ್ಥವಾಗುವುದಿಲ್ಲ; ಇದು ಸತ್ಯದ ಹತ್ತಿರವಿದೆ ಎಂಬುದು ನಮಗೆ ಹೇಗೆ ತಿಳಿಯುವುದು ? ದೇವರು ಎಲ್ಲಿಯೋ ಆಕಾಶದಲ್ಲಿ ಬೇರೆಯಾಗಿದ್ದಾನೆ ಮತ್ತು ಜಗತ್ತು ಅವನಿಂದ ಸ್ವತಂತ್ರವಾಗಿದೆ, ಇದು ಸಾಧ್ಯವಿದೆಯೇ ? ಈಗ ವಿಜ್ಞಾನವೂ ’ಯಾವುದೂ ಬೇರೆಯಾಗಿಲ್ಲ. ಎಲ್ಲವೂ ಒಂದೇ ಮತ್ತು ಪರಸ್ಪರ ಜೋಡಿಸಲ್ಪಟ್ಟಿದೆ’, ಎಂಬ ನಿಷ್ಕರ್ಷಕ್ಕೆ ಬಂದಿದೆ.”
೪. ’ನಾವು ಯಾರಾಗಿದ್ದೇವೆ ?’, ಇದನ್ನು ತಿಳಿದು ಅದನ್ನು ಈಡೇರಿಸುವುದೇ, ಮನುಷ್ಯನ ಧ್ಯೇಯ !
ಋಷಿಗಳು ನೀಡಿದ ಜ್ಞಾನ, ಅದು ಕೇವಲ ಮಾಹಿತಿಯಲ್ಲ, ಅದು ಪ್ರತ್ಯಕ್ಷದಲ್ಲಿ ಇದೆ. ಅದರ ಅನುಭವವನ್ನು ಪಡೆಯ ಬಹುದು ಮತ್ತು ಅದನ್ನು ಪ್ರತ್ಯಕ್ಷ ಪಡೆಯಬೇಕು. ತನ್ನ ಬಗೆಗಿನ ಅರಿವು ಮತ್ತು ಆನಂದವೆನಿಸುವುದು, ಇವು ಎಲ್ಲೋ ಬೇರೆ ಆಕಾಶದಲ್ಲಿ ಇಲ್ಲ, ಅವು ನಮ್ಮ ಜೀವನದ ಸಾರವಾಗಿವೆ. ’ಋಷಿಗಳು ಅದರ ಅನುಭವವನ್ನು ಪಡೆದರು ಮತ್ತು ನಾವು ಅದನ್ನು ಹೇಗೆ ಅನುಭವಿಸಬಹುದು ?’, ಈ ಬಗ್ಗೆ ನಮಗೆ ಜ್ಞಾನವನ್ನು ನೀಡಿದರು. ಒಂದು ಮುಖ್ಯ ವಿಚಾರವೆಂದರೆ ನಮ್ಮ ವಿಚಾರಗಳನ್ನು ಶಾಂತ ಮಾಡುವುದು. ಇದರ ಹಿಂದಿನ ಕಾರಣ ಸರಳವಾಗಿದೆ’, ಏಕೆಂದರೆ ವಿಚಾರಗಳ ಆಚೆಗಿನ ಶುದ್ಧ ಅರಿವು ಅಂದರೆ ಸತ್-ಚಿತ್-ಆನಂದ. ಯಾವಾಗ ನಾವು ವಿಚಾರಗಳನ್ನು ನಿಲ್ಲಿಸುತ್ತೇವೆಯೋ, ಆಗ ನಾವು ಅವನೊಂದಿಗೆ ಜೋಡಿಸಲ್ಪಡುತ್ತೇವೆ. ’ನಾವು ಯಾರು ಆಗಿದ್ದೇವೆ ?’, ಎಂಬುದನ್ನು ಅರಿತುಕೊಳ್ಳುವುದು ಮತ್ತು ಅದನ್ನು ಈಡೇರಿಸುವುದು’, ಇದು ನಮ್ಮ ಜೀವನದ ಧ್ಯೇಯವಾಗಿದೆ. ಈ ದೊಡ್ಡ ಜಗತ್ತಿನಲ್ಲಿ ನಾವು ಓರ್ವ ಚಿಕ್ಕ ವ್ಯಕ್ತಿಯಾಗಿರದೇ ಎಲ್ಲರಲ್ಲಿರುವ ಆನಂದದಾಯಕ ಅರಿವೇ ನಾವಾಗಿದ್ದೇವೆ. ’ಮೃತ್ಯುವಿನ ವರೆಗೆ ಕಾದು ನಂತರ ಸ್ವರ್ಗಕ್ಕೆ ಹೋಗುವ ಇಚ್ಛೆಯನ್ನಿಟ್ಟುಕೊಳ್ಳುವುದು ಇದು ನಮ್ಮ ಜೀವನದ ಧ್ಯೇಯವಲ್ಲ. ನಮ್ಮ ಸಂಪೂರ್ಣ ಜೀವನದಲ್ಲಿ ನಾವು ಕೇವಲ ಪುಸ್ತಕಗಳಲ್ಲಿನ ಶಾಬ್ದಿಕ ಮಾಹಿತಿಯ ಮೇಲೆ ನಂಬಿಕೆ ಇಡುತ್ತೇವೆ. ನಿಜವಾದ ಸತ್ಯ ಪುಸ್ತಕಗಳಲ್ಲಿ ಅಥವಾ ಗ್ರಂಥಗಳಲ್ಲಿ ಅಲ್ಲ, ಅದು ನಮ್ಮಲ್ಲಿಯೇ ಇದೆ.
– ಮಾರಿಯಾ ವರ್ಥ್, ಜರ್ಮನ್ ಲೇಖಕಿ ಮತ್ತು ಹಿಂದೂ ಧರ್ಮದ ಅಧ್ಯಯನಕಾರರು(ಮಾರಿಯಾ ವರ್ಥ್ ಇವರ ಬ್ಲಾಗ್‌ನ ಆಧಾರ)