ಹಿಂದೂ ಧರ್ಮವೇ ನನಗೆ ಸ್ವಾತಂತ್ರ್ಯ ನೀಡಿದೆ, ಅಲ್ಲದೇ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿತು ! – ರಿಪಬ್ಲಿಕನ್ ಪಕ್ಷದ ಹಿಂದೂ ಅಭ್ಯರ್ಥಿ ವಿವೇಕ ರಾಮಸ್ವಾಮಿ

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಿಂದೂ ಅಭ್ಯರ್ಥಿ ವಿವೇಕ ರಾಮಸ್ವಾಮಿಯವರ ಹೇಳಿಕೆ !

ವಿವೇಕ ರಾಮಸ್ವಾಮಿ

ವಾಷಿಂಗ್ಟನ್ (ಅಮೇರಿಕಾ) – ಹಿಂದೂ ಧರ್ಮ ನನಗೆ ನನ್ನ ನೈತಿಕ ಹೊಣೆಗಾರಿಕೆಗಳನ್ನು ಅರ್ಥಮಾಡಿಕೊಳ್ಳಲು ಸ್ವಾತಂತ್ರ್ಯವನ್ನು ನೀಡಿದೆ. ಹಿಂದೂ ಧರ್ಮವೇ ನನಗೆ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಪ್ರೇರಣೆ ನೀಡಿದೆ ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಿಂದೂ ಅಭ್ಯರ್ಥಿ ವಿವೇಕ ರಾಮಸ್ವಾಮಿ ಹೇಳಿದ್ದಾರೆ. ನವೆಂಬರ್ 18 ರಂದು ‘ದಿ ಡೈಲಿ ಸಿಗ್ನಲ್ ಪ್ಲಾಟ್‌ಫಾರ್ಮ್’ ಆಯೋಜಿಸಿದ್ದ ‘ದಿ ಫ್ಯಾಮಿಲಿ ಲೀಡರ ಫೋರಂ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ರಾಮಸ್ವಾಮಿ ತಮ್ಮ ಮಾತನ್ನು ಮುಂದುವರಿಸಿ,

1. ನಾನೊಬ್ಬ ಹಿಂದೂ ಆಗಿದ್ದೇನೆ. ದೇವರು ಸತ್ಯ ಎಂದು ನಾನು ನಂಬುತ್ತೇನೆ. ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಜನ್ಮ ನೀಡಿದ್ದಾನೆ. ಆ ಉದ್ದೇಶವನ್ನು ಸಾಕಾರಗೊಳಿಸುವುದು ನನ್ನ ನೈತಿಕ ಕರ್ತವ್ಯವಾಗಿದೆ.

2. ಪ್ರತಿಯೊಬ್ಬರಲ್ಲೂ ದೇವರು ನೆಲೆಸಿದ್ದಾನೆ, ಇದು ನಮ್ಮ ಧರ್ಮದ ಮೂಲವಾಗಿದೆ. ಇದರಿಂದಾಗಿ ನಾವೆಲ್ಲರೂ ಸಮಾನರಾಗಿದ್ದೇವೆ.

3. ಈ ವೇಳೆ ರಾಮಸ್ವಾಮಿ ಅವರು ಹಿಂದೂ ಧರ್ಮ ಮತ್ತು ಕ್ರೈಸ್ತ ಧರ್ಮದ ನಡುವಿನ ಸಾಮ್ಯತೆಗಳ ಬಗ್ಗೆಯೂ ಪ್ರತಿಕ್ರಿಯಿಸಿದರು. ನಾನು ಕ್ರೈಸ್ತ ಧರ್ಮವನ್ನು ಬೆಂಬಲಿಸುವ ರಾಷ್ಟ್ರಾಧ್ಯಕ್ಷನಾಗಬೇಕು ಎಂದು ನಿಮಗೆ ಅನಿಸುತ್ತಿದೆಯೇ ? ಇದು ಖಂಡಿತವಾಗಿಯೂ ಸಾಧ್ಯವಿಲ್ಲ. ಅಮೇರಿಕಾದ ರಾಷ್ಟ್ರಾಧ್ಯಕ್ಷರು ಹಾಗೆ ಮಾಡಬೇಕು ಎಂದು ನನಗೆ ಅನಿಸುವುದಿಲ್ಲ. ನಾನು ಅಮೇರಿಕಾದ ಮೌಲ್ಯಗಳ ಪರವಾಗಿ ನಿಲ್ಲುವುದು ನನ್ನ ಕರ್ತವ್ಯವಾಗಿದೆ ಮತ್ತು ನಾನು ಹಾಗೆಯೇ ಮಾಡುತ್ತೇನೆ ಎಂದು ರಾಮಸ್ವಾಮಿ ಹೇಳಿದರು.

ಹಿಂದೂ ಧರ್ಮದಲ್ಲಿ ವಿಚ್ಛೇದನಕ್ಕೆ ಅವಕಾಶವಿಲ್ಲ ! – ರಾಮಸ್ವಾಮಿ

ವಿವಾಹ ವ್ಯವಸ್ಥೆಯನ್ನು ಹೆಬ್ಬಾಗಿಲಿಗೆ ತೂಗುಹಾಕಿ ‘ಹುಕ್ ಅಪ್ ಕಲ್ಚರ್’ ನಂತಹ ಭಯಾನಕ ಪದ್ಧತಿಗಳು ರೂಢಿಯಾಗಿರುವ ಅಮೇರಿಕಾಗೆ ವಿವೇಕ ರಾಮಸ್ವಾಮಿಯಂತಹ ಹಿಂದೂ ನಾಯಕರಿಂದಲೇ ಪಾತಾಳದಿಂದ ಮೇಲೆತ್ತಲು ಮಾತ್ರ ಸಾಧ್ಯ, ಇದು ಸತ್ಯವಾಗಿದೆ !

(ಹುಕ ಅಪ ಕಲ್ಚರ್ ಎಂದರೆ ಕೇವಲ ಒಂದು ದಿನದ ಮಟ್ಟಿಗೆ ಲೈಂಗಿಕ ಅಥವಾ ದೈಹಿಕ ಸಂಬಂಧವನ್ನು ಬೆಳೆಸುವ ವಿಕೃತೆಯಾಗಿದೆ ! ಇದರ ಅಡಿಯಲ್ಲಿ ಮಾನಸಿಕ ಪ್ರೇಮಭಾವನೆಗಳಿಗೆ ಯಾವುದೇ ಸ್ಥಾನವಿರುವುದಿಲ್ಲ.)

ಈ ವೇಳೆ ರಾಮಸ್ವಾಮಿಯವರು ಮಾತನಾಡುತ್ತಾ, ”ವಿವಾಹವು ಪವಿತ್ರವಾಗಿದೆ. ವಿವಾಹಕ್ಕೂ ಮುನ್ನ ನಾವು ತಾಳ್ಮೆಯಿಂದ ಇರಬೇಕು. ಕೆಟ್ಟ ವಿಚಾರಗಳಿಂದ ನಾವು ಜಾಗರೂಕರಾಗಿರಬೇಕು. ವಿವಾಹವು ಪುರುಷ ಮತ್ತು ಮಹಿಳೆಯರ ನಡುವೆ ನಡೆಯುತ್ತದೆ. ಹಿಂದೂ ಧರ್ಮದಲ್ಲಿ ವಿಚ್ಛೇದನಕ್ಕೆ ಅವಕಾಶವಿಲ್ಲ. ಪುರುಷ ಮತ್ತು ಮಹಿಳೆ ದೇವರ ಸಾಕ್ಷಿಯಿಂದ ವಿವಾಹಬದ್ಧರಾಗುತ್ತಾರೆ. ಕುಟುಂಬದ ಸುಖ ಮತ್ತು ಸಮೃದ್ಧಿಗಾಗಿ ಇಬ್ಬರೂ ದೇವರ ಮುಂದೆ ಪ್ರಮಾಣ ತೆಗೆದುಕೊಳ್ಳುತ್ತಾರೆ. ನನ್ನ ವಿಶೇಷ ಪೋಷಣೆಯಿಂದಲೇ ನನ್ನ ಮನಸ್ಸಿನಲ್ಲಿ ಕುಟುಂಬ, ಮದುವೆ, ತಾಯಿ-ತಂದೆಯ ಬಗ್ಗೆ ಗೌರವವನ್ನು ನಿರ್ಮಾಣವಾಯಿತು. ನನ್ನ ತಾಯಿ-ತಂದೆಯವರೇ ನನಗೆ ಕುಟುಂಬವೇ ನಮ್ಮ ಜೀವನಕ್ಕೆ ಆಧಾರ” ಎಂದು ಕಲಿಸಿದವರು.

ಸಂಪಾದಕರ ನಿಲುವು

ರಾಮಸ್ವಾಮಿಯವರ ಹಿಂದೂ ಧರ್ಮದ ಹಿರಿಮೆಯನ್ನು ಸಾರುವ ಇಂತಹ ಹೇಳಿಕೆಗಳಿಂದಾಗಿ ಅವರನ್ನು ಈಗ ಕೆಲವು ಅಮೇರಿಕನ ಹಿಂದೂ ದ್ವೇಷಿಗಳು ‘ಸೈತಾನ ಹಿಂದೂ’ ಎಂದು ಹೀಯಾಳಿಸಿದರೆ ಮತ್ತು ಭಾರತದ ಹಿಂದೂ ದ್ರೋಹಿಗಳು ಅದರ `ಸೋ’’ ಕೂಡಿಸಿದರೆ ಆಶ್ಚರ್ಯ ಪಡಬಾರದು !