ಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳಿಗೆ ಪೊಲೀಸರಿಂದ ನೋಟಿಸ್ ಜಾರಿ !
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಲಕ್ಷ್ಮಣಪುರಿ ಪೊಲೀಸರು ಹಲಾಲ್ ಪ್ರಮಾಣಪತ್ರ ನೀಡುವ 4 ಇಸ್ಲಾಮಿಕ್ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ಇದೀಗ ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸರು ಈ ಸಂಸ್ಥೆಗಳಿಗೆ ಅವರ ಪ್ರಯೋಗಾಲಯದ ಪರೀಕ್ಷಣಾ ವರದಿಗಳು ಮತ್ತು ಈ ಸಂದರ್ಭದಲ್ಲಿನ ಇತರ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಿದ್ದಾರೆ. ಸೈಬರ್ ಸೆಲ್ ವಿಭಾಗವನ್ನು ಸಹ ಸಕ್ರಿಯಗೊಳಿಸಲಾಗಿದೆ. ಭಾಜಪ ಯುವ ಮೋರ್ಚಾದ ಮಾಜಿ ಪ್ರಾದೇಶಿಕ ಉಪಾಧ್ಯಕ್ಷ ಶೈಲೇಂದ್ರ ಶರ್ಮಾ ಅವರು ಹಲಾಲ್ ಪ್ರಮಾಣಪತ್ರದ ವಿರುದ್ಧ ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ.
ಅಂಗಡಿಕಾರರ ಬಳಿಗೆ ಹೋಗಿ ಹಲಾಲ್ ಪ್ರಮಾಣಪತ್ರಗಳ ವಸ್ತುಗಳನ್ನು ಪರಿಶೀಲನೆ ಆರಂಭ !
ಪೊಲೀಸರು ರಾಜ್ಯದ ಕೆಲವು ಜಿಲ್ಲೆಗಳಲ್ಲಿ `ಹಲಾಲ ಪ್ರಮಾಣೀಕೃತ’ ಎಂದು ಬರೆದಿರುವ ಟೂತ್‌ಪೇಸ್ಟ್, ಟೂತ್ ಬ್ರಷ್, ಸಾಬೂನು, ಎಣ್ಣೆ, ಕೇಕ್, ಬಿಸ್ಕತ್ತು, ಚಹಾಪುಡಿ, ಸಕ್ಕರೆ ಮುಂತಾದ ಉತ್ಪನ್ನಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಈ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಜಾಲತಾಣಗಳಲ್ಲಿ ಅಂತಹ ವಸ್ತುಗಳನ್ನು ಖರೀದಿಸುವವರ ಮೇಲೆ ಸೈಬರ್ ಸೆಲ್ ನಿಗಾವಹಿಸಿದೆ. ಸೈಬರ್ ಸೆಲ್ ಗೆ ಖರೀದಿ-ಮಾರಾಟ ಮಾಡುವವರಿಂದ ಮಾಹಿತಿಗಳನ್ನು ಸಂಗ್ರಹಿಸುವಂತೆ ಆದೇಶ ನೀಡಿದೆ. ಪೊಲೀಸ ಉಪಾಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಉಪೇಂದ್ರ ಕುಮಾರ ಅಗ್ರವಾಲ ಇವರು ಮಾತನಾಡಿ, ಈ ಸಂಸ್ಥೆಗಳ ಹಣಕಾಸಿನ ವ್ಯವಹಾರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪರಿಶೀಲನೆಯಲ್ಲಿ ಮಾಹಿತಿ ದೊರಕಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಸುಗಂಧ ದ್ರವ್ಯಗಳು ಮತ್ತು ಧಾನ್ಯ ಉತ್ಪಾದನೆಗಳು ಅತ್ಯಧಿಕ ಮಾರಾಟ !
ಲಕ್ಷ್ಮಣಪುರಿ ಹಜರತಗಂಜ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ ವಿಕ್ರಮ ಸಿಂಗ ಇವರು ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಸುಗಂಧ ದ್ರವ್ಯಗಳು ಮತ್ತು ಧಾನ್ಯ ಉತ್ಪಾದನೆಗಳ ಹೆಚ್ಚಿನ ಮಾರಾಟವನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತಿದೆಯೆನ್ನುವ ಮಾಹಿತಿ ತಿಳಿದುಬಂದಿದೆ ಇದಕ್ಕಾಗಿ ಸೈಬರ್ ಸೆಲ್ ಕೂಡ ವಿಚಾರಣೆ ಮಾಡುತ್ತಿದೆ. ಈ ವಸ್ತುಗಳನ್ನು ಮಾರಾಟ ಮಾಡುವ ವಿತರಕರು ಮತ್ತು ಅಂಗಡಿಕಾರರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತದನಂತರ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಆಹಾರ ಸುರಕ್ಷತೆ ಮತ್ತು ಆಡಳಿತ ಇಲಾಖೆಯ ತಂಡಗಳಿಂದಲೂ ಅಂಗಡಿಗಳ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಆಹಾರ ಪದಾರ್ಥಗಳ ಯಾವುದೇ ಪರೀಕ್ಷಣೆಯನ್ನು ನಡೆಸದೇ ಪ್ರಮಾಣಪತ್ರವನ್ನು ನೀಡುತ್ತಿವೆ, ಎಂಬುದು ಇದರಿಂದ ಸ್ಪಷ್ಟವಾಗಲಿದೆ ! |