Hospitals in Pakistan : ಆರ್ಥಿಕವಾಗಿ ಸೊಂಟ ಮುರಿದುಕೊಂಡಿರುವ (ಜರ್ಜರಿತವಾಗಿರುವ) ಪಾಕಿಸ್ತಾನದಲ್ಲಿನ ೬ ಆಸ್ಪತ್ರೆಗಳು ಮುಚ್ಚುವ ಸ್ಥಿತಿಯಲ್ಲಿ !

  • ICU ವಿಭಾಗ ಮುಚ್ಚುವ ಹಾದಿಯಲ್ಲಿ !

  • ಸಿಬ್ಬಂದಿಗಳ ವೇತನ ತಡೆ !

ಇಸ್ಲಾಮಾಬಾದ (ಪಾಕಿಸ್ತಾನ) – ಆರ್ಥಿಕ ಸೊಂಟ ಮುರಿದುಕೊಂಡಿರುವ ಪಾಕಿಸ್ತಾನದಲ್ಲಿನ ಆಸ್ಪತ್ರೆಗಳ ದುರಾವಸ್ಥೆ ಆಗಿದೆ. ದೇಶದಲ್ಲಿನ ೫ ಸರಕಾರಿ ಆಸ್ಪತ್ರೆಗಳು ಹಾಗೂ ಲಾಹೋರದಲ್ಲಿನ ಶೇಖ ಜಾಯದ ಆಸ್ಪತ್ರೆ ಮುಚ್ಚುವ ಸ್ಥಿತಿಯಲ್ಲಿವೆ. ಆಸ್ಪತ್ರೆಯ ಸುವ್ಯವಸ್ಥಿತ ಸಂಚಾಲನಕ್ಕಾಗಿ ನಿವ್ವಳ ೧೧ ಅಬ್ಜ ಪಾಕಿಸ್ತಾನಿ ರೂಪಾಯಿಯ ಅವಶ್ಯಕತೆ ಇದ್ದು ಹಣಕಾಸು ಇಲಾಖೆಯ ಈ ಬೇಡಿಕೆ ಫೆಡರಲ್ ಆರೋಗ್ಯ ಸಚಿವಾಲಯವು ತಿರಸ್ಕರಿಸಿದೆ. ಇದರಿಂದ ಅನೇಕ ಸಿಬ್ಬಂದಿಗಳ ವೇತನ ಕೂಡ ನಿಲ್ಲಿಸಲಾಗಿದೆ.

ಆಸ್ಪತ್ರೆಗಳ ದುರಾವಸ್ಥೆ ಈ ರೀತಿ ಇದೆ !

  • ವೇತನ ನೀಡದೇ ಇರುವುದರಿಂದ ‘ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ನ ನರ್ಸ್ ಗಳಿಂದ ಒಂದು ವಾರದಿಂದ ಪ್ರತಿಭಟನೆ !
  • ‘ಟೆಸ್ಟಿಂಗ್ ಕಿಟ್’ ಖಾಲಿ ಆಗುತ್ತಿರುವುದರಿಂದ ಆಸ್ಪತ್ರೆಯಲ್ಲಿನ ಪ್ರಯೋಗ ಶಾಲೆ ಕೂಡ ಬೇಗನೆ ಮುಚ್ಚ ಬೇಕಾಗುವುದು !
  • ‘ಫಿಲ್ಮ್’ ಇಲ್ಲದೆ ‘ರೇಡಿಯೋಲಜಿ’ ಪರೀಕ್ಷೆ ಕೂಡ ಬೇಗನೆ ನಿಂತು ಹೋಗುವುದು !
  • ಆಸ್ಪತ್ರೆಯಿಂದ ಔಷಧ ಕಂಪನಿಗಳಿಗೆ ಹಣ ಪಾವತಿಸದೇ ಇರುವುದರಿಂದ ಬಂದಿರುವ ರೋಗಿಗಳಿಗೆ ಔಷಧಿ ಕೂಡ ದೊರೆಯದ ಹಾಗೆ ಆಗಿದೆ.
  • ಸದ್ಯದಲ್ಲಿಯೇ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗವೂ ಬಂದ್ ಆಗುವ ಸಾಧ್ಯತೆ ಇದೆ !

ವರ್ಷದಾದ್ಯಂತ ಗಗನಕ್ಕೆರಿರುವ ಪಾಕಿಸ್ತಾನದಲ್ಲಿನ ಬೆಲೆ ಏರಿಕೆ !

‘ಡಾನ್’ ಈ ಪಾಕಿಸ್ತಾನಿ ವಾರ್ತಾ ಪತ್ರಿಕೆಯಲ್ಲಿ ‘ಪಾಕಿಸ್ತಾನದ ಅಂಕಿಅಂಶಗಳ ಇಲಾಖೆಯಿಂದ’ ನೀಡಿರುವ ಅಂಕಿ ಅಂಶಗಳ ವರದಿ ನೀಡುತ್ತಾ, ಕಳೆದ ವರ್ಷಗಳಲ್ಲಿ ಗ್ಯಾಸ್ ನ ಶುಲ್ಕದಲ್ಲಿ ನಿವ್ವಳ ಶೇಖಡ ೧ ಸಾವಿರದ ೧೦೦ ರಷ್ಟು ಹೆಚ್ಚಳವಾಗಿದೆ. ಇದರ ಜೊತೆಗೆ ಸಿಗರೇಟ್ ಶೇಕಡಾ ೯೪.೫, ಗೋಧಿ ಹಿಟ್ಟು ಶೇಕಡಾ ೮೬.೪, ಖಾರದ ಪುಡಿ ಶೇಕಡಾ ೮೧.೭, ಅರ್ಧ ಬಾಸುಮತಿ ಅಕ್ಕಿ ಶೇಕಡ ೭೬.೭ ಹಾಗೂ ಬೆಳ್ಳುಳ್ಳಿ ಕಳೆದ ವರ್ಷ ಶೇಕಡಾ ೬೩.೬ ರಷ್ಟು ಬೆಲೆ ಏರಿಕೆಯಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿನ ಪಾಕಿಸ್ತಾನ ಪ್ರೇಮಿಗಳಿಗೆ ಈಗಲಾದರೂ ಭಾರತದ ಮಹತ್ವ ತಿಳಿಯುವುದೆಂದು ಅಪೇಕ್ಷೆ !