ಹಿಂದುಗಳಿಂದ ಬರುವ ಸೋಮವಾರ ತಾಜಮಹಲ ಪರಿಸರದಲ್ಲಿ ಶಿವ ಆರತಿ ಮಾಡಲು ಘೋಷಣೆ !
ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ತಾಜಮಹಲ ಪರಿಸರದಲ್ಲಿ ನವಂಬರ್ ೧೬ ರಂದು ಬಂಗಾಲದಿಂದ ಬಂದಿದ್ದ ಓರ್ವ ಮುಸಲ್ಮಾನ ಪ್ರವಾಸಿಗನು ನಮಾಜ ಪಠಣೆ ಮಾಡಿದನು. ಆ ಸಮಯದಲ್ಲಿ ಅಲ್ಲಿ ಭದ್ರತೆಗಾಗಿ ನೇಮಕಗೊಂಡಿರುವ ಪೊಲೀಸರು ಅವನನ್ನು ಅಲ್ಲಿಂದ ಕಳುಹಿಸಿದ ನಂತರ ಮುಸಲ್ಮಾನನು ಕ್ಷಮೆ ಕೇಳಿದನು. ಆದ್ದರಿಂದ ಪೊಲೀಸರು ಅವನನ್ನು ಬಿಟ್ಟು ಕಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ವಿವಾದ ನಿರ್ಮಾಣವಾಯಿತು. ಹಿಂದೂ ಮಹಾಸಭೆಯ ರಾಷ್ಟ್ರೀಯ ವಕ್ತಾರರಾದ ಸಂಜಯ ಜಾಟ ಇವರು, ಮುಸಲ್ಮಾನರಿಗಾಗಿ ಸರ್ವೋಚ್ಚ ನ್ಯಾಯಾಲಯದ ನಿಯಮ ಭಂಗಗೊಳಿಸಲಾಗುತ್ತಿದೆ. ಕೇವಲ ಕ್ಷಮೆ ಕೇಳಿದರೆ ಅವನನ್ನು ಬಿಟ್ಟು ಬಿಡಲಾಗುತ್ತದೆ. ಹಾಗಾದರೆ ಇಲ್ಲಿ ಹಿಂದುಗಳಿಂದ ಧಾರ್ಮಿಕ ಕೃತಿ ಮಾಡಿದ್ದರೆ, ಆಗ ಅವನ ವಿರುದ್ಧ ದೂರು ದಾಖಲಿಸಲಾಗುತ್ತಿತ್ತು. ಇದರಿಂದ ಪೊಲೀಸ್ ಮತ್ತು ಮುಸಲ್ಮಾನ ಪ್ರವಾಸಿಗರು ಇವರ ವಿರುದ್ಧ ದೂರು ದಾಖಲಿಸಬೇಕು. ಅದಕ್ಕಾಗಿ ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವವರಿದ್ದೇವೆ. ಅದಲ್ಲದೆ ನವಂಬರ್ ೨೦ ರಂದು ನಮ್ಮ ಸದಸ್ಯರು ಅಲ್ಲಿ ಶಿವ ಆರತಿ ಕೂಡ ಮಾಡುವರು ಮತ್ತು ನಂತರ ಕ್ಷಮೆ ಕೂಡ ಕೇಳುವರು ಎಂದು ಅವರು ಘೋಷಿಸಿದರು.
೧. ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ಅಧಿಕಾರಿ ರಾಜಕುಮಾರ ಪಟೇಲ ಇವರು, ಇಲ್ಲಿ ನಮಾಜ್ ಪಠಣಗೆ ನಿಷೇಧವಿದೆ. ಇದರ ಸಂದರ್ಭದಲ್ಲಿ ಸೂಚನೆ ಬರೆಯಲಾಗಿದೆ. ಇದರ ಮಾಹಿತಿ ಇಲ್ಲದಿರುವುದರಿಂದ ಕೆಲವು ಪ್ರವಾಸಿಗರು ಇಲ್ಲಿ ನಮಾಜ ಪಠನೆ ಮಾಡುತ್ತಾರೆ, ಆಗ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
೨. ಹಿಂದುತ್ವನಿಷ್ಠ ಸಂಘಟನೆಗಳಿಂದ ತಾಜಮಹಲಗೆ ‘ತೇಜೋಮಹಾಲಯ’ ಎಂದು ಹೇಳಿ ಶಿವ ದೇವಸ್ಥಾನ ಇರುವುದೆಂದು ಹೇಳಲಾಗುತ್ತಿದೆ. ಆದ್ದರಿಂದ ಅವರಿಂದ ಇಲ್ಲಿ ಆರತಿ ಮಾಡುವ ಹಾಗೂ ಕೇಸರಿ ಧ್ವಜ ಒಯ್ಯುವ ಪ್ರಯತ್ನ ಅನೇಕ ಬಾರಿ ಮಾಡಲಾಗಿದೆ. ಆಗ ಅವರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುತ್ತದೆ. ಸಂಜಯ ಜಾಟ ಇವರ ಮೇಲೆ ಕೂಡ ಈ ಸಂದರ್ಭದಲ್ಲಿ ಕೆಲವು ದೂರು ದಾಖಲಾಗಿವೆ.
ಸಂಪಾದಕೀಯ ನಿಲುವುತಾಜಮಹಲ ಇದು ಹಿಂದುಗಳ ಪರಂಪರೆಯಾಗಿದೆ, ಎಂಬುದು ಪುರಾತತ್ವ ಇಲಾಖೆ ಏಕೆ ಘೋಷಿಸುವುದಿಲ್ಲ ? ಕೇಂದ್ರ ಸರಕಾರವು ಈ ಕುರಿತು ನೇತೃತ್ವ ವಹಿಸಿ ತಾಜಮಹಲದ ಸತ್ಯ ಜಗತ್ತಿಗೆ ಹೇಳಬೇಕು ! |