Freedom Of Expression Khalistan : ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ಸಹಿಸುವುದು ಬಹಳ ತಪ್ಪು !

ಖಲಿಸ್ತಾನದ ಕೃತ್ಯಗಳ ಬಗ್ಗೆ ವಿದೇಶಾಂಗ ಸಚಿವರಿಂದ ಬ್ರಿಟನ್ ಸರಕಾರದ ಜೊತೆಗೆ ನಡೆದ ಚರ್ಚೆಯಲ್ಲಿ ಹೇಳಿಕೆ

ಲಂಡನ್ (ಇಂಗ್ಲೆಂಡ್) – ಬ್ರಿಟನ್‌ನ ೫ ದಿನದ ಪ್ರವಾಸ ಮುಗಿಸಿ ಭಾರತಕ್ಕೆ ಹಿಂತಿರುಗುವ ಮೊದಲು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ಭಾಷಣ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇದು ಒಂದು ಧೃಢವಾದ ಜವಾಬ್ದಾರಿಯ ಜೊತೆಗೆ ಉಪಯೋಗಿಸಬೇಕು. ಈ ಸ್ವಾತಂತ್ರ್ಯದ ದುರುಪಯೋಗ ವಿಶೇಷವಾಗಿ ರಾಜಕೀಯ ಉದ್ದೇಶದಿಂದ ದುರುಪಯೋಗವನ್ನು ಸಹಿಸುವುದು ಬಹಳ ತಪ್ಪಾಗಿದೆ. ಅವರು ಈ ಅಭಿಪ್ರಾಯ ಬ್ರಿಟಿಷ ನಾಯಕರೆದುರು ಮಂಡಿಸುವ ಸಮಯದಲ್ಲಿ ಹೇಳಿದರು.

ಡಾ. ಜೈ ಶಂಕರ್ ಮಾತು ಮುಂದುವರೆಸುತ್ತಾ,

೧. ಬ್ರಿಟನ್‌ನ ಕ್ಯಾಬಿನೆಟ್ ಸಚಿವರು ಮತ್ತು ವಿರೋಧಿ ಪಕ್ಷದ ನಾಯಕರು ಇವರ ಜೊತೆಗೆ ನನ್ನ ವೈಷ್ವಿಕ ಮತ್ತು ದ್ವಿಪಕ್ಷಿಯ ಅಂಶಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.

೨. ಬ್ರಿಟನ್‌ನ ಗೃಹ ಸಚಿವ ಜೇಮ್ಸ್ ಕ್ಲೇವರಲಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಟೀಮ ಬ್ಯಾರೋ ಇವರ ಜೊತೆ ಸಭೆ ನಡೆದಿದೆ. ಆ ಸಮಯದಲ್ಲಿ ಖಲಿಸ್ತಾನಿಗಳನ್ನು ಬೆಂಬಲಿಸುತ್ತಿರುವ ಕೃತ್ಯದ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳ ರಕ್ಷಣೆಯ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ.

೩. ಬ್ರಿಟನ್‌ನ ನೂತನವಾಗಿ ನೇಮಕಗೊಂಡಿರುವ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರನ್ ಇವರ ಜೊತೆಗೆ ರಷ್ಯಾ ಉಕ್ರೇನ್ ಮತ್ತು ಇಸ್ರೇಲ್ ಹಮಾಸ್ ಇವರಲ್ಲಿನ ಸಂಘರ್ಷದ ಬಗ್ಗೆ ಕೂಡ ಚರ್ಚೆ ನಡೆಯಿತು.

೪. ಒಟ್ಟಾರೆ ನನ್ನ ಬ್ರಿಟನ್ ಪ್ರವಾಸ ಯೋಗ್ಯ ಸಮಯದಲ್ಲಿ ನಡೆದಿದೆ ಇದರ ಬಹಳ ಆವಶ್ಯಕತೆ ಇತ್ತು. ಇಂತಹ ಪ್ರವಾಸದಿಂದಲೇ ಎರಡು ದೇಶಗಳಲ್ಲಿನ ವಾಸ್ತವ ಸಾಮರಸ್ಯಕ್ಕೆ ಒಳ್ಳೆಯ ಚಾಲನೆ ದೊರೆತಿದೆ. ಈ ಪ್ರವಾಸ ನಮ್ಮ ಸಂಬಂಧದಲ್ಲಿನ ಆತ್ಮೀಯತೆಯ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.