೫೦ ವರ್ಷಗಳ ಹಿಂದೆ ಕಳುವಾಗಿರುವ ೮ ನೆ ಶತಮಾನದ ದೇವತೆಗಳ ೨ ವಿಗ್ರಹಗಳು ಲಂಡನ್ ನಿಂದ ಭಾರತಕ್ಕೆ ಹಸ್ತಾಂತರ 

ಲಂಡನ್ (ಬ್ರಿಟನ್) – ಭಾರತದಿಂದ ಕಳುವು ಮಾಡಲಾಗಿರುವ ಎಂಟನೇ ಶತಮಾನದಲ್ಲಿನ ೨ ವಿಗ್ರಹಗಳು ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್ .ಜೈ ಶಂಕರ್ ಇವರ ಉಪಸ್ಥಿತಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ೧೯೭೦ ಮತ್ತು ೧೯೮೦ ರಲ್ಲಿ ಉತ್ತರ ಪ್ರದೇಶದ ಲೋಖರಿಯ ಒಂದು ದೇವಸ್ಥಾನದಿಂದ ಶ್ರೀ ಯೋಗಿನಿ ಚಾಮುಂಡಾ ಮತ್ತು ಶ್ರೀಯೋಗಿನಿ ಗೋಮುಖಿ ಈ ಮೂರ್ತಿಗಳು ಕಳುವಾಗಿದ್ದವು. ಈ ದೇವಸ್ಥಾನದಲ್ಲಿ ಯೋಗಿನಿಗಳ ೨೦ ಮೂರ್ತಿಗಳಿದ್ದವು. ಕಳುವಾಗಿರುವ ಈ ೨ ಮೂರ್ತಿಗಳು ಭಾರತೀಯ ಉಚ್ಚಾಯುಕ್ತವು ‘ಇಂಡಿಯಾ ಫ್ರೈಡ್ ಪ್ರಾಜೆಕ್ಟ್’ ಮತ್ತು ‘ಆರ್ಟ್ ರಿಕವರಿ ಇಂಟರ್ನ್ಯಾಷನಲ್’ ಇವರ ಸಹಯೋಗದಿಂದ ಹುಡುಕಿ ತೆಗೆದಿದ್ದಾರೆ. ಈ ಮೂರ್ತಿ ಕಳುವು ಮಾಡಿರುವವರು ಕಳ್ಳ ಸಾಗಾಣಿಕೆಯ ಮೂಲಕ ಯುರೋಪ್‌ನಲ್ಲಿ ಮಾರಿದ್ದರು. ಅವರು ಅನೇಕ ಮೂರ್ತಿಗಳನ್ನು ಕಳವು ಮಾಡಿದ್ದರು. ಕೆಲವು ಮೂರ್ತಿಗಳನ್ನು ಧ್ವಂಸ ಮಾಡಿದರು ಹಾಗೂ ಕೆಲವುಗಳನ್ನು ಮಾರಿದ್ದರು. ‘ಆರ್ಟ್ ರಿಕವರಿ ಇಂಟರ್ನ್ಯಾಷನಲ್’ನ ಕ್ರಿಸ್ ಮ್ಯಾರಿನೇಲೋ ಇವರು, ನಾವು ಮಿಲನ್, ಬ್ರಸೆಲ್ಸ್ ಮತ್ತು ಲಂಡನ್ ನಲ್ಲಿ ಈ ರೀತಿಯ ಸಂಸ್ಕೃತಿಕ ಸ್ವತ್ತು ಹಿಂತಿರುಗಿ ಪಡೆಯುವಲ್ಲಿ ಯಶಸ್ವಿ ಆಗಿರುವುದರು ಐದನೇ ಘಟನೆಯಾಗಿದೆ ಎಂದು ಹೇಳಿದರು.