ಸಾಧನೆಯನ್ನು ಮಾಡುವ ಮತ್ತು ಮಾಡದ ಕುಟುಂಬದವರ ಜೊತೆ ಸಾಧಕರ ಹೊಂದಾಣಿಕೆ ಆಗದಿರುವುದರ ಕಾರಣಗಳು ಮತ್ತು ಅದರ ಮೇಲಿನ ಉಪಾಯ

ಸದ್ಗುರು ರಾಜೇಂದ್ರ ಶಿಂದೆ

‘ಕೆಲವು ಸಾಧಕರಿಗೆ ಸಾಧನೆಯ ಮಹತ್ವ ಮನವರಿಕೆ ಆದುದರಿಂದ ಅವರಿಗೆ ‘ಸಾಧನೆಯನ್ನು ಮಾಡದಿರುವ ತನ್ನ ಕುಟುಂಬದವರೂ ಸಾಧನೆಯನ್ನು ಮಾಡಬೇಕು’, ಎಂಬ ಅಪೇಕ್ಷೆ ಇರುತ್ತದೆ, ಹಾಗೆಯೇ ಸಾಧನೆಯನ್ನು ಮಾಡುತ್ತಿರುವುದರಿಂದ ‘ನನಗೆ ಇತರರಿಗಿಂತ ಹೆಚ್ಚು ತಿಳಿಯುತ್ತದೆ’, ಎಂಬ ಸೂಕ್ಷ್ಮ ಅಹಂ ಜಾಗೃತವಾಗಿರುವುದರಿಂದ ಕೆಲವು ಸಾಧಕರು ಕುಟುಂಬದವರೊಂದಿಗೆ ಅಹಂನಿಂದ ಮಾತನಾಡುತ್ತಾರೆ. ಇದರಿಂದ ಮನೆಯಲ್ಲಿ ವಾದವಿವಾದಗಳು ಉಂಟಾಗುತ್ತವೆ. ಈ ವಿಷಯದಲ್ಲಿ ‘ಸಾಧಕರು ಹೇಗೆ ದೃಷ್ಟಿಕೋನವನ್ನಿಟ್ಟುಕೊಳ್ಳಬೇಕು ?’, ಎಂಬುದು ಈ ಲೇಖನವನ್ನು ಓದಿದ ನಂತರ ಅವರ ಗಮನಕ್ಕೆ ಬರಬಹುದು.

೧. ಕುಟುಂಬದವರೊಂದಿಗೆ ಸಾಧಕರ ವಾದವಿವಾದಗಳಾಗುವುದರ ಕಾರಣಗಳು

೧ ಅ. ಕುಟುಂಬದಲ್ಲಿನ ಇತರ ಸದಸ್ಯರು ಸಾಧನೆ ಮಾಡ ಬೇಕೆಂಬ ಆಗ್ರಹದ ವಿಚಾರ : ಸಾಧಕನಿಗೆ ಸಾಧನೆಯ ಮಹತ್ವ ಮನವರಿಕೆ ಆದುದರಿಂದ ‘ಸಾಧನೆ ಆವಶ್ಯಕವಾಗಿದೆ’, ಎಂಬುದು ಅವರಿಗೆ ತಿಳಿದಿರುತ್ತದೆ. ಆದ್ದರಿಂದ ಕುಟುಂಬದ ಇತರ ಸದಸ್ಯರೂ ಸಾಧನೆ ಮಾಡಬೇಕೆಂದು, ಸಾಧಕರು ಪುನಃ ಪುನಃ ಅವರಿಗೆ ಒತ್ತಾಯದಿಂದ ಹೇಳುತ್ತಿರುತ್ತಾರೆ. ಆದ್ದರಿಂದ ಅವರಲ್ಲಿ ವಾದಗಳಾಗುತ್ತವೆ.

೧ ಆ. ಕುಟುಂಬದವರಿಗೆ ನಿತ್ಯ ಸಾಧನೆ ಮಾಡಲು ಸಾಧ್ಯವಾಗ ದಿದ್ದರೆ ‘ಅವರು ಆಗಾಗ ಸತ್ಸಂಗಕ್ಕೆ ಹೋಗಬೇಕು, ಸೇವೆಯನ್ನು ಮಾಡಬೇಕು’, ಎಂಬ ಅಪೇಕ್ಷೆ : ಕುಟುಂಬದವರು ಸಾಧನೆ ಯನ್ನು ಮಾಡದಿದ್ದರೆ, ‘ಅವರು ಸ್ವಲ್ಪ ಸಮಯ ನಾಮಜಪ ಮಾಡಬೇಕು, ಯಾವಾಗಲಾದರೂ ಸತ್ಸಂಗಕ್ಕೆ ಹೋಗಬೇಕು ಅಥವಾ ಸೇವೆಯನ್ನು ಮಾಡಬೇಕು, ಅರ್ಪಣೆಯನ್ನು ಕೊಡ ಬೇಕು, ‘ಸನಾತನ ಪ್ರಭಾತ’ ಸಂಚಿಕೆಯನ್ನು ಓದಬೇಕು, ಸನಾತನದ ಗ್ರಂಥಗಳನ್ನು ಓದಬೇಕು’ ಈ ರೀತಿ ಸಾಧಕರಲ್ಲಿ ಅಪೇಕ್ಷೆಗಳಿರುತ್ತವೆ. ಕುಟುಂಬದವರು ಹೀಗೆ ಮಾಡದಿದ್ದರೆ, ವಾದವಿವಾದಗಳು ಆಗುತ್ತವೆ.

೧ ಇ. ಚಿಂತೆಯಾಗುವುದು : ‘ಮುಂದೆ ಘೋರ ಆಪತ್ಕಾಲ ಬರಲಿದೆ. ಮೂರನೇ ಮಹಾಯುದ್ಧವಾಗಲಿದೆ. ಆ ಕಾಲದಲ್ಲಿ ಸಂಬಂಧಿಕರದ್ದು ಏನು ಆಗುವುದು ?’, ಎಂಬ ಚಿಂತೆಯಿಂದ ಅವರಿಗೆ ಪುನಃ ಪುನಃ ಹೇಳಲಾಗುತ್ತದೆ. ಅದು ಅವರಿಗೆ ಮನವರಿಕೆ ಆಗದಿದ್ದಾಗ ವಾದವಿವಾದಗಳು ಆಗುತ್ತವೆ.

೧ ಈ. ಕಲಿಸುವ ಭೂಮಿಕೆಯಲ್ಲಿ ಇರುವುದು : ಕೆಲವು ಸಾಧಕರಿಗೆ ‘ನಮಗೆ ಈಗ ಕುಟುಂಬದವರಿಗಿಂತ ಹೆಚ್ಚು ತಿಳಿಯುತ್ತದೆ’, ಎಂದೆನಿಸಿ ಪ್ರತಿಯೊಂದು ವಿಷಯದಲ್ಲಿ ‘ಹೀಗೆ ಮಾಡಿರಿ ಅಥವಾ ಹೀಗೆ ಮಾಡಬೇಡಿರಿ’ ಈ ರೀತಿ ಕಲಿಸುವ ಸ್ಥಿತಿಯಲ್ಲಿದ್ದು ಹೇಳುತ್ತಾರೆ. ಆದ್ದರಿಂದ ವಾದಗಳಾಗುತ್ತವೆ.

೧ ಉ. ಆಧ್ಯಾತ್ಮಿಕ ಮಟ್ಟ ಹೆಚ್ಚಿರುವ ಸಾಧಕರಿಗೆ ‘ತಾವು ಹೇಳುವುದನ್ನು ಕುಟುಂಬದವರು ಕೇಳಬೇಕು’, ಎಂದು ಅನಿಸುವುದು : ಕೆಲವೊಮ್ಮೆ ಯಾವುದಾದರೊಬ್ಬ ಸಾಧಕನ ಆಧ್ಯಾತ್ಮಿಕ ಮಟ್ಟ ಹೆಚ್ಚಿದ್ದರೆ, ಮನೆಯಲ್ಲಿನ ಯಾವುದಾದರೊಂದು ಪ್ರಸಂಗದಲ್ಲಿ ‘ಮನೆಯಲ್ಲಿನ ಇತರ ಸಾಧಕರು ಅಥವಾ ಕುಟುಂಬದವರು ತಾನು ಹೇಳುವುದನ್ನು ಕೇಳಬೇಕು’, ಎಂದು ಅನಿಸುತ್ತದೆ. ಇದರಿಂದ ಅನಾವಶ್ಯಕ ವಾದಗಳಾಗುತ್ತವೆ.

೨. ಉಪಾಯಯೋಜನೆ

೨ ಅ. ಸಾಧಕರು ಯೋಗ್ಯ-ಅಯೋಗ್ಯ ಇದರ ಬಗ್ಗೆ ವಾದ ವಿವಾದ ಮಾಡದೇ ತಮ್ಮ ಸಾಧನೆಯ ದೃಷ್ಟಿಯಿಂದ ಏನು ಅಪೇಕ್ಷಿತವಿದೆ, ಅದನ್ನು ಮಾಡಬೇಕು : ವ್ಯಾವಹಾರಿಕ ಪ್ರಸಂಗಗಳಲ್ಲಿ ಸಾಧಕರು ‘ಯೋಗ್ಯ-ಅಯೋಗ್ಯ’ ಇದರ ಬಗ್ಗೆ ವಾದ ಮಾಡಬಾರದು, ತಮ್ಮ ಸಾಧನೆಯ ದೃಷ್ಟಿಯಿಂದ ಏನು ಅಪೇಕ್ಷಿತವಿದೆಯೋ, ಅದನ್ನು ಮಾಡಬೇಕು, ಉದಾ. ‘ಕಡಿಮೆತನ ತೆಗೆದುಕೊಳ್ಳುವುದು, ಸಾಕ್ಷೀಭಾವದಿಂದ ನೋಡುವುದು, ಪರೇಚ್ಛೆಯಿಂದ ವರ್ತಿಸುವುದು, ಯಾವುದು ಘಟಿಸುತ್ತಿದೆಯೋ, ಅದು ಈಶ್ವರೇಚ್ಛೆಯಂತೆ ಘಟಿಸುತ್ತಿದೆ’, ಎಂಬ ಯೋಗ್ಯ ದೃಷ್ಟಿಕೋನವನ್ನು ತೆಗೆದುಕೊಂಡು ವಾದ ಮಾಡದೇ ಶಾಂತವಾಗಿರಬೇಕು. ಇದರಿಂದ ‘ನನಗೆ ಹೆಚ್ಚು ತಿಳಿಯುತ್ತದೆ’, ಎಂಬ ಅಹಂನ ಲಕ್ಷಣ ಕಡಿಮೆಯಾಗಲು ಸಹಾಯವಾಗುತ್ತದೆ.

೨ ಆ. ಸಾಧನೆಯಲ್ಲಿನ ಅಪರಾಧ : ‘ಯಾರಾದರೊಬ್ಬರಿಗೆ ನಾಮಸ್ಮರಣೆಯ ಅಥವಾ ಸಾಧನೆಯ ಆಸಕ್ತಿ ಇಲ್ಲದಿದ್ದಾಗ ಅವರಿಗೆ ಪದೇಪದೇ ಹೇಳುವುದು ಸಾಧನೆಯಲ್ಲಿನ ಅಪರಾಧ ವಾಗಿದೆ’, ಎಂಬುದನ್ನು ಸಾಧಕರು ಗಮನದಲ್ಲಿಡಬೇಕು.

೨ ಇ. ಕುಟುಂಬದವರಿಗೆ ಅವರ ಸ್ಥಿತಿಗನುಸಾರ ಮತ್ತು ಕೇಳುವವರಿದ್ದರೆ ಮಾತ್ರ ಹೇಳಬೇಕು : ‘ಬಹುತ ಸುಕೃತಾಚಿ ಜೋಡಿ ಮ್ಹಣೂನಿ ವಿಠ್ಠಲ ಆವಡಿ |’ ಎಂಬ ಮರಾಠಿ ವಚನಕ್ಕನುಸಾರ ‘ಹಿಂದಿನ ಜನ್ಮದ ಸಾಧನೆ (ಪುಣ್ಯ) ಇರದ ಹೊರತು ಸಾಧನೆಯ ಸೆಳೆತ ಮೂಡುವುದಿಲ್ಲ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಕುಟುಂಬದವರಿಗೆ ಅವರ ಸ್ಥಿತಿಗನುಸಾರ ದೇವರ ಪೂಜೆಯನ್ನು ಮಾಡುವುದು, ದೇವಸ್ಥಾನಕ್ಕೆ ಹೋಗುವುದು, ಉಪವಾಸ ಮಾಡುವುದು ಇಂತಹ ಕೃತಿಗಳನ್ನು ಹೆಚ್ಚೆಚ್ಚು ಭಾವಪೂರ್ಣ ಮತ್ತು ಪರಿಪೂರ್ಣ ಮಾಡಲು ಹೇಳಬೇಕು. ಕುಟುಂಬದವರು ಕೇಳುವವರಿದ್ದರೆ ಮಾತ್ರ ಹೇಳಲು ಪ್ರಯತ್ನಿಸಬೇಕು; ಇಲ್ಲದಿದ್ದರೆ ‘ಈಶ್ವರೇಚ್ಛೆ’, ಎಂದು ಹೇಳಿ ಬಿಡಬೇಕು ಅಥವಾ ಅಲ್ಲಿ ಸಾಕ್ಷಿಭಾವದಿಂದ ನೋಡಲು ಪ್ರಯತ್ನಿಸಬೇಕು.

೨ ಈ. ಸಾಧಕರು ಕುಟುಂಬದವರೊಂದಿಗೆ ಆದರ್ಶ ರೀತಿಯಲ್ಲಿ (ಸಾಧಕತ್ವದಿಂದ) ವರ್ತಿಸಬೇಕು ! : ಅನೇಕ ಸಾಧಕರ ಸಂದರ್ಭದಲ್ಲಿ ಏನು ಗಮನಕ್ಕೆ ಬಂದಿದೆ ಎಂದರೆ, ‘ಅವರು ಸಾಧನೆಯನ್ನು ಪ್ರಾರಂಭಿಸಿದ ನಂತರ ಅವರಲ್ಲಿ ಯಾವ ಒಳ್ಳೆಯ ಅಥವಾ ಸಕಾರಾತ್ಮಕ ಬದಲಾವಣೆ ಆಗಿರುತ್ತವೆಯೋ, ಉದಾ. ಸಿಟ್ಟು, ಸಿಡಿಮಿಡಿಗೊಳ್ಳುವುದು, ಅವ್ಯವಸ್ಥಿತ, ಅಪೇಕ್ಷೆ ಪಡುವುದು, ಆಲಸ್ಯ, ಇತ್ಯಾದಿ ಸ್ವಭಾವದೋಷಗಳು ಕಡಿಮೆ ಆಗುವುದು, ಹಾಗೆಯೇ ತಾವಾಗಿಯೇ ಕುಟುಂಬದವರಿಗೆ ಸಹಾಯ ಮಾಡುವುದು, ಮುಂದಾಳತ್ವವನ್ನು ವಹಿಸುವುದು, ಇತರರನ್ನು ತಿಳಿದುಕೊಳ್ಳುವುದು, ಪ್ರೇಮಭಾವ, ನಮ್ರತೆ ಇತ್ಯಾದಿ ಗುಣಗಳು ಹೆಚ್ಚಾಗುವುದು. ಇವುಗಳು ಗಮನಕ್ಕೆ ಬಂದಿದ್ದರೆ ಕುಟುಂಬದವರ ಮನಸ್ಸಿನಲ್ಲಿ ಸಾಧನೆಯ ಬಗ್ಗೆ ಜಿಜ್ಞಾಸೆ ಮೂಡುತ್ತದೆ ಮತ್ತು ಅವರು ಕ್ರಮೇಣ ಸಾಧನೆಯನ್ನು ಮಾಡತೊಡಗುತ್ತಾರೆ ಎಂಬುದು ಗಮನದಲ್ಲಿಟ್ಟುಕೊಂಡು ಸಾಧಕರು ಮನೆಯಲ್ಲಿ ಸಾಧಕತ್ವದಿಂದ ವರ್ತಿಸಬೇಕು.

೩. ದೇವರಿಗೆ ಪ್ರತಿಯೊಬ್ಬರ ಕಾಳಜಿ ಇರುವುದರಿಂದ ಅವನು ಆ ವ್ಯಕ್ತಿಯ ಸ್ಥಿತಿಗನುಸಾರ ಮಾರ್ಗದರ್ಶನ ಮಾಡಿ ಅವನನ್ನು ಸಾಧನೆಯಲ್ಲಿ ಮುಂದೆ ಒಯ್ಯುತ್ತಾನೆ

ನಮಗಿಂತ ದೇವರಿಗೆ ಪ್ರತಿಯೊಬ್ಬರ ಕಾಳಜಿ ಹೆಚ್ಚಿರುತ್ತದೆ. ‘ಸಾಧನೆಯ ಕಡೆಗೆ ಯಾರು ಮತ್ತು ಯಾವಾಗ ಬರಲಿದ್ದಾರೆ ?’, ಎಂಬುದರ ಸಮಯವನ್ನು ಭಗವಂತನೇ ನಿಶ್ಚಯಿಸಿರುತ್ತಾನೆ. ಅವರವರ ಸ್ಥಿತಿಗನುಸಾರ ಮಾರ್ಗದರ್ಶನವನ್ನು ಮಾಡಿ ದೇವರು ಪ್ರತಿಯೊಬ್ಬನಿಗೂ ಮುಂದೆ ಒಯ್ಯುತ್ತಿರುತ್ತಾನೆ, ಎಂಬುದನ್ನು ಸಾಧಕರು ಗಮನದಲ್ಲಿಡಬೇಕು.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ ! ಇದಂ ನ ಮಮ |’

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೩.೮.೨೦೨೩)