ಹಿಂದೂಗಳ ಒತ್ತಡದಿಂದಾಗಿ ಆಭರಣಗಳ ಜಾಹೀರಾತಿನಲ್ಲಿ ಬದಲಾವಣೆ !
ಮುಂಬಯಿ, ನವೆಂಬರ್ 13 (ಸುದ್ದಿ) – ಹಿಂದೂಗಳ ಹಬ್ಬಗಳ ನಿಮಿತ್ತ ಆಭರಣಗಳ ಜಾಹೀರಾತುಗಳಲ್ಲಿ ಹಿಂದೂ ಸಂಸ್ಕೃತಿಯಂತೆ ಕುಂಕುಮ ಹಚ್ಚಿರುವ ಮಹಿಳೆಯರನ್ನು ತೋರಿಸದ ಅನೇಕ ಆಭರಣ ವ್ಯಾಪಾರಿಗಳು ಈ ವರ್ಷ ಸುಧಾರಣೆ ಮಾಡಿ ದೀಪಾವಳಿಯ ತಮ್ಮ ಆಭರಣಗಳ ಜಾಹೀರಾತುಗಳಲ್ಲಿ ಕುಂಕುಮ ಹಚ್ಚಿರುವ ಮಹಿಳೆಯರನ್ನು ತೋರಿಸಿದ್ದಾರೆ. ಕಳೆದ ವರ್ಷದವರೆಗೆ, ಹೆಚ್ಚಿನ ಆಭರಣ ವ್ಯಾಪಾರಿಗಳು ಆಭರಣಗಳ ಜಾಹೀರಾತುಗಳಲ್ಲಿ ಕುಂಕುಮವನ್ನು ಹಚ್ಚಿಕೊಂಡಿರದ ಮಹಿಳೆಯರನ್ನು ತೋರಿಸುತ್ತಿದ್ದರು. ಇದರಲ್ಲಿ ತನಿಷ್ಕ್, ಮಲಬಾರ್ ಗೋಲ್ಡ್, ಪು.ನಾ.ಗಾಡಗಿಳ. ಪಿ.ಸಿ. ಚಂದ್ರಾ ಮುಂತಾದ ಆಭರಣ ವ್ಯಾಪಾರಿಗಳ ಸೇರಿವೆ.
ಕಳೆದ ವರ್ಷದವರೆಗೆ, ಈ ಆಭರಣ ವ್ಯಾಪಾರಿಗಳು ಹಿಂದೂಗಳ ಹಬ್ಬದ ನಿಮಿತ್ತ ಜಾಹೀರಾತು ನೀಡಿದರೂ ಮಹಿಳೆಯರ ಹಣೆಯಲ್ಲಿ ಕುಂಕುಮವನ್ನು ತೋರಿಸದೇ ಇದ್ದ ಕಾರಣ ಪ್ರಸಿದ್ಧ ಹಿಂದೂ ಲೇಖಕಿ ಶೆಫಾಲಿ ವೈದ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ‘#NoBindiNoBusiness’ ಎಂದು ಕರೆ ನೀಡಿದ್ದರು, ಅಂದರೆ ಯಾವ ಕಂಪನಿಗಳು ಜಾಹೀರಾತುಗಳಲ್ಲಿ ಮಹಿಳೆಯರ ಹಣೆಯ ಮೇಲೆ ಟಿಕಲಿ/ಕುಂಕುಮವನ್ನು ತೋರಿಸುವುದಿಲ್ಲವೋ, ಅವರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಬೇಕು. `ಮಲಬಾರ ಗೋಲ್ಡ ಅಂಡ ಡೈಮಂಡ ಜ್ಯುವೆಲರ್ಸ’ ಕಂಪನಿಯ 2022 ರ ಅಕ್ಷಯ ತೃತೀಯ ಜಾಹೀರಾತಿನಲ್ಲಿ ಮಹಿಳೆಯರ ಹಣೆಯ ಮೇಲೆ ಕುಂಕುಮವನ್ನು ತೋರಿಸಿರಲಿಲ್ಲ. ಇದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಕೂಡ ‘#NoBindi_NoBusiness’ ಮತ್ತು ‘#Boycott_MalabarGold’ ಎಂದು ಕರೆ ನೀಡಿತ್ತು. ತದನಂತರ ಈ ಜಾಹೀರಾತನ್ನು ‘ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಜ್ಯುವೆಲ್ಲರ್ಸ್’ ಹಿಂಪಡೆದಿತ್ತು. ಹಿಂದೂಗಳ ಸಮಯೋಚಿತ ಪ್ರತಿಭಟನೆಯಿಂದಾಗಿ ಆರ್ಥಿಕ ಹೊಡೆತದ ಭಯದಿಂದಾಗಿ ಈ ವರ್ಷದ ದೀಪಾವಳಿಯ ಅನೇಕ ಜಾಹೀರಾತುಗಳಲ್ಲಿ ಮಹಿಳೆಯರು ಆಭರಣಗಳು ಮತ್ತು ಹಣೆಯ ಮೇಲೆ ಕುಂಕುಮಗಳನ್ನು ತೋರಿಸಿದ್ದಾರೆ.