Narakchaturdashi : ಸ್ವಭಾವದೋಷ, ಅಹಂಕಾರ ಮತ್ತು ವಿಕಾರರೂಪೀ ನರಕಾಸುರನ ಹಿಡಿತದಿಂದ ಬಿಡಿಸಿಕೊಳ್ಳಲು ಶ್ರೀಕೃಷ್ಣನಲ್ಲಿ ಮೊರೆಯಿಡೋಣ ಹಾಗೂ ದೇಹಸಹಿತ ಮನಸ್ಸಿನಿಂದಲೂ ಪರಿಶುದ್ಧರಾಗೋಣ !

ನವೆಂಬರ್‍‌ 12 ರಂದು ಇರುವ ನರಕಚತುರ್ದಶಿ ಮತ್ತು ಲಕ್ಷ್ಮಿಪೂಜೆಯ ನಿಮಿತ್ತ

ಆಶ್ವಯುಜ ಶುದ್ಧ ಚತುರ್ದಶಿಯನ್ನು ‘ನರಕ ಚತುರ್ದಶಿ’, ಎಂದು ಕರೆಯುತ್ತಾರೆ. ಈ ದಿನ ಭಗವಾನ ಶ್ರೀಕೃಷ್ಣನು ಕ್ರೂರಕರ್ಮಿ ನರಕಾಸುರನನ್ನು ವಧಿಸಿ ಅವನ ಸೆರೆಮನೆಯಲ್ಲಿನ ೧೬ ಸಾವಿರ ಸ್ತ್ರೀಯರನ್ನು ಮುಕ್ತಗೊಳಿಸಿದನು ಈ ಆನಂದಕ್ಕಾಗಿ ಜನರು ಮನೆಮನೆಗಳಲ್ಲಿ ದೀಪೋತ್ಸವವನ್ನು ಮಾಡಿದರು. ರಂಗೋಲಿಗಳನ್ನು ಬಿಡಿಸಿ ಆನಂದೋತ್ಸವವನ್ನು ಆಚರಿಸಿದರು.

ನರಕಾಸುರನನ್ನು ವಧಿಸಿದ ಪ್ರಯುಕ್ತವಾಗಿ ಆನಂದೋತ್ಸವನ್ನು ಆಚರಿಸಲು ನಾವು ‘ನರಕಚತುರ್ದಶಿ’ಯನ್ನು ಆಚರಿಸುತ್ತೇವೆ ನಿಜ; ಆದರೆ ನಮ್ಮಲ್ಲಿನ ದೋಷ-ಅಹಂರೂಪಿ ನರಕಾಸುರನಿಂದ ನಮಗೆ ನರಕಯಾತನೆ ಭೋಗಿಸಬೇಕಾಗುತ್ತದೆ. ಈ ದೋಷ-ಅಹಂರೂಪಿ ನರಕಾಸುರನು ನಮ್ಮ ಜೀವನದಲ್ಲಿನ ಆನಂದವನ್ನೇ ಕಸಿದುಕೊಳ್ಳುತ್ತಾನೆ. ಪ್ರಾಪ್ತವಾಗಿರುವ ದೇಹವು ಆರೋಗ್ಯಕರವಾಗಿದೆ; ಆದರೆ ಮನಸ್ಸು ಮಾತ್ರ ಅಶುದ್ಧವಾಗಿದ್ದರೆ, ಈಶ್ವರಪ್ರಾಪ್ತಿಯ ಧ್ಯೇಯವನ್ನು ಹೇಗೆ ತಲುಪಲು ಸಾಧ್ಯ ? ಆದ್ದರಿಂದಲೇ ದೇಹದೊಂದಿಗೆ ಮನಸ್ಸು ಸಹ ಶುದ್ಧ ಮತ್ತು ಆರೋಗ್ಯಕರವಾಗಿ ಮಾಡಲು ಸಾಕ್ಷಾತ್ ಆ ಶ್ರೀಕೃಷ್ಣ ಪರಮಾತ್ಮನು ಅವತರಿಸಲಿದ್ದಾನೆ. ಈ ನರಕ ಚತುರ್ದಶಿಯಂದು ನಮ್ಮ ಮನಸ್ಸನ್ನು ಸ್ವಭಾವದೋಷ, ಅಹಂಕಾರ ಮತ್ತು ವಿಕಾರ ರೂಪೀ ನರಕಾಸುರನ ಹಿಡಿತದಿಂದ ಬಿಡಿಸಲು ಶ್ರೀಕೃಷ್ಣ ಪರಮಾತ್ಮನನ್ನು ನೆನೆಯೋಣ. ದೇಹದ ಜೊತೆಗೆ ಮನಸ್ಸಿನಿಂದಲೂ ಪರಿಶುದ್ಧರಾಗಿ ನಾವು ಇದೇ ಜನ್ಮದಲ್ಲಿ ಭಗವಂತನನ್ನು ಪ್ರಾಪ್ತಿ ಮಾಡಿಕೊಳ್ಳೋಣ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಲಕ್ಷ್ಮೀ’ ಎಂಬ ಶಬ್ದದ ಅರ್ಥ

ಲಕ್ಷ್ಮೀ ಎಂಬ ಶಬ್ದದ ಅರ್ಥವೂ ತುಂಬಾ ಸುಂದರವಾಗಿದೆ. ಲಕ್ಷ + ಮಿ ಅಂದರೆ ಲಕ್ಷ್ಮೀ ! ಯಾರು ಲಕ್ಷದವರೆಗೆ ಅಂದರೆ ಧ್ಯೇಯದವರೆಗೆ ಕರೆದುಕೊಂಡು ಹೋಗುತ್ತಾರೆಯೋ, ಅವಳು ಲಕ್ಷ್ಮೀ ! ನಮ್ಮ ಧ್ಯೇಯವಾದ ‘ಈಶ್ವರಪ್ರಾಪ್ತಿ’ಯ ಕಡೆಗೆ ನಮ್ಮನ್ನು ತಲುಪಿಸುವುದಕ್ಕಾಗಿಯೇ ದೇವಿ ಮಹಾಲಕ್ಷ್ಮೀಯು ಈಗ ಅವತರಿಸಲಿದ್ದಾಳೆ. ನಾವೆಲ್ಲರೂ ಧ್ಯೇಯಪ್ರಾಪ್ತಿಗಾಗಿ ಅವಳನ್ನು ಬಹಳವಾಗಿ ನೆನೆಯೋಣ. ಅವಳನ್ನು ನಮ್ಮ ಹೃದಯದಲ್ಲಿ ಭಕ್ತಿಯಿಂದ ಪೂಜಿಸಿ ಅವಳ ಕೃಪಾಶೀರ್ವಾದವನ್ನು ಬೇಡೋಣ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೧೦.೧೧.೨೦೨೩)

ಮಹಾಲಕ್ಷ್ಮೀಯನ್ನು ಸ್ವಾಗತಿಸಲು ಮಾಡಲು ನಮ್ಮ ಭಕ್ತಿರೂಪಿ ದೀಪಗಳಿಂದ ಅಲಂಕರಿಸಿ ಅವಳನ್ನು ಪ್ರಸನ್ನಗೊಳಿಸೋಣ

ದೀಪಾವಳಿಯಲ್ಲಿ ಅಮವಾಸ್ಯೆಯ ದಿನ ಮುಸ್ಸಂಜೆಯ ಸಮಯದಲ್ಲಿ ಸದ್ಗೃಹಸ್ಥರ ಮನೆಯಲ್ಲಿ ಶ್ರೀ ಲಕ್ಷ್ಮಿದೇವಿಯ ಆಗಮನವು ಆಗುತ್ತದೆ. ಮನೆಯನ್ನು ಸಂಪೂರ್ಣ ಸ್ವಚ್ಛ, ಶುದ್ಧ ಮತ್ತು ಸುಂದರವಾಗಿ ಮಾಡಿ ದೀಪಾವಳಿ ಹಬ್ಬವನ್ನು ಆಚರಿಸುವುದರಿಂದ ಶ್ರೀ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಅಲ್ಲಿ ಶಾಶ್ವತವಾಗಿ ವಾಸ ಮಾಡುತ್ತಾಳೆ.

ಒಂದು ವೇಳೆ ಆ ಲಕ್ಷ್ಮಿಯು ನಮ್ಮ ಬಳಿ ಇಲ್ಲದಿದ್ದರೆ, ನಮಗೆ ಸತ್ತ್ವ, ಧೈರ್ಯ, ಶಕ್ತಿ, ಮತ್ತು ಬುದ್ಧಿ ಲಭಿಸುವುದಿಲ್ಲ, ಇದರ ಅರ್ಥ ಎಲ್ಲಿ ಲಕ್ಷ್ಮೀ ಇರುವಳೋ, ಅಲ್ಲಿ ಎಲ್ಲವೂ ಇದೆ. ಎಲ್ಲಿ ಲಕ್ಷ್ಮೀ ಇರುವುದಿಲ್ಲವೋ, ಅಲ್ಲಿ ಏನೂ ಇಲ್ಲ, ಏಕೆಂದರೆ ಶ್ರೀಲಕ್ಷ್ಮೀ ಎಂದರೆ ಧನಸಂಪತ್ತು, ಧಾನ್ಯಸಂಪತ್ತು, ಸುಖಸಂಪತ್ತು, ಗುಣಸಂಪತ್ತು ಮತ್ತು ಈಶಸಂಪತ್ತು ಅಂದರೆ ಈಶ್ವರನ ಕೃಪೆ ! ಲಕ್ಷ್ಮೀಯು ನಮ್ಮಲ್ಲಿ ಬಲ, ಮನೋಬಲ, ಊರ್ಜೆ, ಮತ್ತು ಬುದ್ಧಿ ರೂಪದಲ್ಲಿಯೂ ನಿವಾಸ ಮಾಡುತ್ತಾಳೆ. ಅವಳ ಮಹತ್ವವನ್ನು ತಿಳಿದುಕೊಂಡು ಅವಳ ಬಗ್ಗೆ ನಾವು ನಿರಂತರ ಕೃತಜ್ಞತೆಯಿಂದ ಇರೋಣ. ನಮ್ಮ ದೇಹ ಮತ್ತು ಮನಸ್ಸನ್ನು ಪರಿಶುದ್ಧಗೊಳಿಸಿ ಅಲ್ಲಿ ಈಶ್ವರೀ ಗುಣಗಳನ್ನು ನೆಳೆಸಲು ನಾವು ದೇವೀ ಮಹಾಲಕ್ಷ್ಮೀಯ ಬಳಿ ಯಾಚಿಸೋಣ. ನಾವು ನಮ್ಮಲ್ಲಿರುವ ಸದ್ಗುಣಗಳನ್ನು ಹೆಚ್ಚಿಸಿ ಆ ಸದ್ಗುಣಗಳ ರೂಪದಲ್ಲಿ ಅಂತರಂಗದಲ್ಲಿ ವಾಸಿಸುವ ಮಹಾಲಕ್ಷ್ಮೀಯ ಪೂಜೆಯನ್ನು ಮಡೋಣ. ಸಮಸ್ತು ಆಧ್ಯಾತ್ಮಿಕ ಗುಣಸಂಪತ್ತಿನಿಂದ
ಮಹಾಲಕ್ಷ್ಮೀಯನ್ನು ಸ್ವಾಗತಿಸಲು ಮಾಡಲು ನಮ್ಮ ಭಕ್ತಿರೂಪಿ ದೀಪಗಳಿಂದ ಅಲಂಕರಿಸಿ ಅವಳನ್ನು ಪ್ರಸನ್ನಗೊಳಿಸೋಣ.

ನಮ್ಮ ಅಂತರಂಗದಿಂದ ಸ್ವಭಾವದೋಷ ಮತ್ತು ಅಹಂರೂಪೀ ಅಲಕ್ಷ್ಮೀಯ ನಿರ್ಮೂಲನೆಗಾಗಿ ತಳಮಳದಿಂದ ಪ್ರಯತ್ನಿಸಿ ಹೃದಯಮಂದಿರದಲ್ಲಿ ಸದ್ಗುಣರೂಪೀ ಶ್ರೀ ಮಹಾಲಕ್ಷ್ಮೀಯನ್ನು ಸ್ಥಾಪಿಸೋಣ

ಆಶ್ವಯುಜ ಅಮಾವಾಸ್ಯೆಯಂದು ಲಕ್ಷ್ಮೀದೇವಿಯ ಆಗಮನಕ್ಕಾಗಿ ಅಲಕ್ಷ್ಮೀಯನ್ನು ನಿರ್ಮೂಲನಗೊಳಿಸಲಾಗುತ್ತದೆ. ನಮ್ಮಲ್ಲಿ ಗುಣಗಳು ನಿರ್ಮಾಣವಾದರು ಸಹ, ದೋಷಗಳು ನಷ್ಟವಾದರೆ ಮಾತ್ರ ಗುಣಗಳಿಗೆ ಮಹತ್ವವಿರುತ್ತದೆ. ನಮ್ಮಲ್ಲಿನ ರೋಗಗಳು, ನಮ್ಮ ದೋಷ-ಅಹಂ ಮತ್ತು ಆ ಪ್ರತಿಯೊಂದು ವಿಚಾರಗಳು ನಮ್ಮನ್ನು ಭಗವಂತನಿಂದ ದೂರ ಒಯ್ಯುತ್ತದೆ, ನಮ್ಮ ಅಂತರದಲ್ಲಿನ ಈ ವಿಕಾರರೂಪಿ ಅಲಕ್ಷ್ಮೀಯ ನಿರ್ಮೂಲನೆಗಾಗಿ ನಾವೆಲ್ಲರೂ ಅತ್ಯಂತ ತಳಮಳದಿಂದ ಪ್ರಯತ್ನಿಸೋಣ. ಅನಂತರವೇ ದೇವಿ ಮಹಾಲಕ್ಷ್ಮೀಯು ಕೇವಲ ನಮ್ಮ ಮನೆಯಲ್ಲಿ, ನಮ್ಮ ನಿವಾಸದಲ್ಲಿಯಲ್ಲ, ನಮ್ಮ ಮನೆಯಲ್ಲಿ ಮಾತ್ರವಲ್ಲ ನಮ್ಮ ಹೃದಯಮಂದಿರಕ್ಕೆ ಅವಳು ಬರಲಿದ್ದಾಳೆ. ನಮ್ಮ ಹೃದಯಮಂದಿರದಲ್ಲಿ ಸಾಕ್ಷಾತ್ ದೇವಿ ಮಹಾಲಕ್ಷ್ಮೀಯ ಪ್ರವೇಶವಾಗಲು ನಾವೆಲ್ಲರೂ ನಮ್ಮ ಭಕ್ತಿಯನ್ನು ಹೆಚ್ಚಿಸೋಣ ಮತ್ತು ಅವಳ ಶಕ್ತಿಯಿಂದ ದೋಷ-ಅಹಂನ್ನು ಜಯಿಸಿ ಅವಳ ಕೃಪೆಗೆ ಪಾತ್ರರಾಗೋಣ.
ಒಂದು ವೇಳೆ ನಮಗೆ ದೀಪಾವಳಿಯ ಆಂತರಿಕ ಆನಂದವನ್ನು ಪಡೆಯುವುದಿದ್ದರೆ, ‘ನಮ್ಮಲ್ಲಿನ ಯಾವ ಅವಗುಣರೂಪಿ ಅಲಕ್ಷ್ಮೀ ಇದ್ದಾಳೆಯೋ, ಅವಳನ್ನು ದೂರಗೊಳಿಸುವ ನಿರ್ಧಾರವನ್ನು ಮಾಡಿ ಸದ್ಗುಣರೂಪಿ ಲಕ್ಷ್ಮೀಯನ್ನು ಪಡೆಯಬೇಕು’, ಎಂದು ನಾವು ದೇವಿಯ ಬಳಿ ಪ್ರಾರ್ಥಿಸೋಣ

ಕುಬೇರಪೂಜೆ

ಸಾಧಕರೇ, ಶ್ರೀಗುರುಗಳು ನೀಡಿದ ಗುರುಕೃಪಾಯೋಗ ರೂಪೀ ಧನವನ್ನು ಹೃದಯದಲ್ಲಿ ಅತ್ಯಂತ ಭಾವಪೂರ್ಣವಾಗಿ ಜೋಪಾಸನೆ ಮಾಡಲು ಕುಬೇರ ದೇವರಲ್ಲಿ ಆರ್ತರಾಗಿ ಯಾಚಿಸೋಣ !

ಈ ದಿನ ಲಕ್ಷ್ಮೀಯೊಂದಿಗೆ ಕುಬೇರನ ಪೂಜೆಯನ್ನೂ ಮಾಡಲಾಗುತ್ತದೆ. ಲಕ್ಷ್ಮೀಯು ಧನದ ದೇವತೆಯಾಗಿದ್ದಾಳೆ, ಮತ್ತು ಕುಬೇರ ಸಂಪತ್ತನ್ನು ಸಂರಕ್ಷಿಸುವವನಾಗಿದ್ದಾನೆ. ಕೆಲವು ಜನರು ಧನಪ್ರಾಪ್ತಿಯ ಕಲೆಯನ್ನು ಸಾಧ್ಯಮಾಡಿಕೊಳ್ಳುತ್ತಾರೆ; ಆದರೆ ಅದನ್ನು ಸಂಗ್ರಹಿಸಿಡುವ ಕಲೆಯು ಗೊತ್ತಿಲ್ಲದ ಕಾರಣ ಅವರಿಂದ ಅನಾವಶ್ಯಕ ಖರ್ಚು ಆಗುತ್ತದೆ ಮತ್ತು ಧನವು ಶೇಷ ಉಳಿಯುವುದಿಲ್ಲ. ‘ಧನವನ್ನು ಹೇಗೆ ಸಂರಕ್ಷಿಸಬೇಕು ?’ ಎಂಬುದನ್ನು ಕುಬೇರ ದೇವತೆಯು ಕಲಿಸುತ್ತಾನೆ.

ಸಾಕ್ಷಾತ್ ಅವತಾರಿ ನಾರಾಯಣಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ! ಗುರುದೇವರು ನಮಗೆ ಲಭಿಸಿದ್ದಾರೆ, ಅಂದರೆ ಜೀವನದಲ್ಲಿನ ಉತ್ತಮೋತ್ತಮವಾದ ಎಲ್ಲವೂ ನಮಗೆ ಲಭಿಸಿದೆ. ಅವರ ಆಗಮನದಿಂದಲೇ ನಮ್ಮ ಜೀವನದಲ್ಲಿ ಆಧ್ಯಾತ್ಮಿಕ ಉನ್ನತಿಯಾಗಿದೆ. ಅವರು ನಮಗೆ ಮೋಕ್ಷಕ್ಕೆ ಕರೆದೊಯ್ಯುವ ‘ಗುರುಕೃಪಾಯೋಗ ಸಾಧನೆ’ಯನ್ನು ಕಲಿಸಿದರು. ಜೀವನೋದ್ಧಾರವನ್ನು ಮಾಡುವ ‘ಸ್ವಭಾವದೋಷ-ಅಹಂನಿರ್ಮೂಲನೆ ಪ್ರಕ್ರಿಯೆ’ಯನ್ನು ಕಲಿಸಿದರು. ನಮ್ಮ ಜೀವನದಲ್ಲಿನ ಪ್ರತಿಯೊಂದು ಕ್ಷಣವನ್ನು ಆನಂದಮಯವನ್ನಾಗಿ ಮಾಡಲು ಶ್ರೀಗುರುಗಳು ನಮಗೆ ಕೊಡದಿರುವಂತಹದ್ದು ಏನೂ ಇಲ್ಲ ! ಇವೆಲ್ಲವೂ ನಮಗೆ ತೀರಾ ಸುಲಭವಾಗಿಯೇ ಸಿಕ್ಕಿದೆ. ಆದರೆ ಈ ಎಲ್ಲವುಗಳನ್ನು ಸಂರಕ್ಷಿಸುವುದು, ಅವೆಲ್ಲವನ್ನು ಕೃತಜ್ಞತಾಭಾವದಿಂದ ಉಳಿಸಿಕೊಳ್ಳುವುದು, ಇದು ಸಹ ಬಹಳ ಆವಶ್ಯಕವಾಗಿದೆ. ನಮ್ಮ ಯಾವುದೇ ಅರ್ಹತೆ ಇಲ್ಲದಿರುವಾಗಲೂ ಗುರುದೇವರು ನಮಗೆ ಬಹಳಷ್ಟು ನೀಡಿದ್ದಾರೆ, ಬಹಳಷ್ಟು ಕೊಟ್ಟಿದ್ದಾರೆ. ಅವೆಲ್ಲವುಗಳ ಮೌಲ್ಯವನ್ನು ಅರಿತು ನಾವು ಯಾವಾಗಲೂ ಅವರ ಬಗ್ಗೆ ಕೃತಜ್ಞರಾಗಿರಬೇಕು. ಅಲ್ಪಸ್ವಲ್ಪ ಪ್ರಯತ್ನಗಳಿಂದ ಪ್ರಸನ್ನರಾಗಿ, ಇನ್ನೂ ಹೇಳಬೇಕೆಂದರೆ ಯಾವುದೇ ಪ್ರಯತ್ನ ಮಾಡದಿರುವಾಗಲೂ ಶ್ರೀಗುರುಗಳು ಬಹಳ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿರೂಪಿ ಅಮೂಲ್ಯ ಉಡುಗೊರೆಯನ್ನು ನೀಡಿದ್ದಾರೆ. ಗುರುಗಳ ಈ ಕೃಪೆಯ ಬೆಲೆಯನ್ನು ತಿಳಿಯೋಣ. ಶ್ರೀಗುರುಗಳು ನಮ್ಮ ಜೀವನದಲ್ಲಿ ನೀಡಿದ ವಿವಿಧ ಅಮೂಲ್ಯ ಮತ್ತು ದೈವೀ ಕ್ಷಣಮುತ್ತುಗಳನ್ನು ನಾವು ಹೃದಯದಲ್ಲಿ ಬಹಳ ಸಂರಕ್ಷಿಸಿಟ್ಟುಕೊಳ್ಳೋಣ. ಗುರುದೇವರು ನೀಡಿದ ಈ ಅಮೂಲ್ಯ ಕ್ಷಣಮುತ್ತುಗಳ ಉಡುಗೊರೆಯನ್ನು ಹೇಗೆ ಸಂರಕ್ಷಿಸಿಡುವುದು ? ಎಂಬುದನ್ನು ಕಲಿಸಲೆಂದೇ ಸಾಕ್ಷಾತ್ ಕುಬೇರ ದೇವತೆಯು ಅವತರಿಸಲಿದ್ದಾರೆ. ನಾವೆಲ್ಲರೂ ಕುಬೇರ ದೇವತೆಗೆ ಶರಣು ಹೋಗಿ ಅವರಲ್ಲಿ ಆರ್ತತೆಯಿಂದ ಬೇಡೋಣ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೧೦.೧೧.೨೦೨೩)