ಪಟಾಕಿಗಳ ಕೆಲವು ಅಪರಿಚಿತ (ತೆರೆಮರೆಯ) ವಿಷಯಗಳು !

‘ಪಟಾಕಿಗಳಿಂದ ಆಧ್ಯಾತ್ಮಿಕ ದೃಷ್ಟಿಯಿಂದ ರಜ-ತಮಾತ್ಮಕ ಮಾಲಿನ್ಯ ಹೆಚ್ಚಾಗುತ್ತದೆ, ಹಾಗೆಯೇ ಕೋಟ್ಯಂತರ ರೂಪಾಯಿಗಳು ಹಾಳಾಗುತ್ತವೆ. ಆದುದರಿಂದ ಪಟಾಕಿಗಳ ಬದಲು ಸಾಧನೆಯನ್ನು ಮಾಡುವ ಬಡಜನರಿಗೆ ಅಥವಾ ಸಾಧನೆ ಕಲಿಸುವ ಧಾರ್ಮಿಕ ಸಂಸ್ಥೆಗಳಿಗೆ ದಾನ ಮಾಡಿರಿ !’

ವೈದ್ಯ ಪರೀಕ್ಷಿತ ಶೆವಡೆ

೧. ವರ್ಷವಿಡೀ ಆಗುತ್ತಿರುವ ವಾಯುಮಾಲಿನ್ಯವನ್ನು ನಿರ್ಲಕ್ಷಿಸಿ ಕೇವಲ ದೀಪಾವಳಿಯ ಪಟಾಕಿಗಳನ್ನೇ ಗುರಿಮಾಡುವವರ ಹಿಂದೂದ್ವೇಷ !

ದೀಪಾವಳಿಯ ೫ ದಿನಗಳ ಕಾಲ ಪಟಾಕಿಗಳನ್ನು ಸಿಡಿಸುವುದರಿಂದ ಬಹಳಷ್ಟು ಮಾಲಿನ್ಯವಾಗುತ್ತದೆ, ಎಂಬ ಅಂಕಿಅಂಶಗಳು ಇಂದಿನ ವರೆಗೂ ಎಲ್ಲಿಯೂ ಸಿಕ್ಕಿಲ್ಲ. ತದ್ವಿರುದ್ಧ ವರ್ಷ ೨೦೧೯ ರಲ್ಲಿ ದೆಹಲಿಯ ‘ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್’ ನಡೆಸಿದ ಸಮೀಕ್ಷೆಯಲ್ಲಿ, ‘ಪಟಾಕಿಗಳಿಗಿಂತ ವಾಹನಗಳ ‘ಹಾರ್ನ್‌’ಗಳಿಂದ ಹೆಚ್ಚು ಧ್ವನಿಮಾಲಿನ್ಯ ಆಗುತ್ತದೆ, ಎಂಬುದು ಗಮನಕ್ಕೆ ಬಂದಿದೆ. ‘ೈಟಿ ಕಾನಪುರ’ ಇವರು ೨೦೧೭ ರಲ್ಲಿ ಮಾಡಿದ ಸಂಶೋಧನೆಗನುಸಾರ ದೆಹಲಿಯಂತಹ ನಗರಗಳಲ್ಲಿನ ಮಾಲಿನ್ಯಕ್ಕೆ ವಾಹನಗಳು, ಕಟ್ಟಡ ಕಾಮಗಾರಿ ಮತ್ತು ಔದ್ಯೋಗಿಕ ಕ್ಷೇತ್ರಗಳಿಂದಾಗುವ ವಾಯಮಾಲಿನ್ಯವೇ ಅತೀ ಹೆಚ್ಚು ಕಾರಣವಾಗಿವೆ. ಈ ಅಂಕಿಅಂಶಗಳನ್ನು ಪ್ರತಿಷ್ಠಿತ ಸಂಸ್ಥೆಯು ಪ್ರಸ್ತುತಪಡಿಸಿದ್ದರೂ ‘ಜಮಾತ-ಎ-ಪ್ರಗತಿಪರ’ ಇವರಿಂದ ಅದರತ್ತ ಅನುಕೂಲಕರವಾಗಿ ನಿರ್ಲಕ್ಷಿಸಲಾಗುತ್ತಿದೆ. ಇಷ್ಟೇ ಅಲ್ಲ, ಈ ಪಟಾಕಿಗಳು ಹೇಗೆ ಕೆಟ್ಟದಾಗಿವೆ ಎಂದು ತೋರಿಸಲು ‘ಹಿಂದೂ ಧರ್ಮದಲ್ಲಿ ಮೊದಲಿನಿಂದಲೂ ಪಟಾಕಿಗಳ ಬಳಕೆಯಾಗುತ್ತಿರಲಿಲ್ಲ’, ಎಂಬ ಸುಳ್ಳು ಮಾತುಗಳನ್ನು ಹೇಳಲಾಗುತ್ತದೆ.

೨. ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯವಿದ್ದುದರ ಇತಿಹಾಸ ವೈದಿಕ ಮತ್ತು ಪೌರಾಣಿಕ ಸಾಹಿತ್ಯಗಳಲ್ಲಿ ಸಾರಾಸಗಟಾಗಿ ಪಟಾಕಿಗಳ ಉಲ್ಲೇಖ ಸಿಗದಿದ್ದರೂ ಪಟಾಕಿಗಳನ್ನು ಸಿಡಿಸುವ ಕೆಲವು ಶಿಲ್ಪಗಳು ದಕ್ಷಿಣ ಭಾರತದ ಅನೇಕ ದೇವಸ್ಥಾನಗಳಲ್ಲಿ ಕಂಡು ಬರುತ್ತವೆ. ಸಾಹಿತ್ಯಗಳಲ್ಲಿನ ಪಟಾಕಿಗಳ ವಿಷಯವನ್ನು ಹುಡುಕಿದರೆ ಅದು ಸಹ ಎರಡೂವರೆ ಸಾವಿರ ವರ್ಷಗಳ ಹಿಂದೆ ಇರುವುದು ಕಂಡು ಬರುತ್ತದೆ.
ಅ. ಕೌಟಿಲ್ಯ ಅರ್ಥಶಾಸ್ತ್ರದಲ್ಲಿ ಚಾಣಕ್ಯರು ‘ಅಗ್ನಿ ಚೂರ್ಣ’ ಹೆಸರಿನಿಂದ ‘ಸಾಲ್ಟ್‌ಪೀಟರ್‌’, ಅಂದರೆ ಪೊಟ್ಯಾಶಿಯಮ್‌ ನೈಟ್ರೇಟ್‌ನ್ನು ಉಲ್ಲೇಖಿಸಿದ್ದಾರೆ. ‘ಈ ಸಂಯೋಗವು ಜ್ವಲನಶೀಲ ವಾಗಿದ್ದು ಯುದ್ಧಭೂಮಿಯಲ್ಲಿ ಶತ್ರುಗಳನ್ನು ಬೆದರಿಸಲು ಉಪಯುಕ್ತವಾಗಿದೆ’, ಎಂದು ಅವರ ಅಭಿಪ್ರಾಯವಿದೆ.
ಆ. ೬ ನೇ ಶತಕದಲ್ಲಿ ಕಾಶ್ಮೀರದಲ್ಲಿ ಬರೆಯಲಾದ ‘ನೀಲಮತ ಪುರಾಣ’ ಗ್ರಂಥದಲ್ಲಿ ದೀಪಾವಳಿಯಂದು ಪಟಾಕಿಗಳನ್ನು ಸಿಡಿಸಿ ನಮ್ಮ ಪಿತೃಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಎಂಬ ಉಲ್ಲೇಖವಿದೆ.
ಇ. ೧೪ ನೇ ಶತಕದಲ್ಲಿ ಇಟಾಲಿಯನ್‌ ಪ್ರವಾಸಿಗನಾದ ಲುಡೋ ವಿಕೊ ಡಿ ವರ್ಧಮಾ ಇವನು ವಿಜಯನಗರ ಸಾಮ್ರಾಜ್ಯದ ತನ್ನ ಪ್ರವಾಸದ ಬಗ್ಗೆ ಮುಂದಿನಂತೆ ಬರೆದಿದ್ದಾನೆ, ‘ಯಾವಾಗ ಆನೆಗಳು ಉನ್ಮತ್ತವಾಗುತ್ತವೆಯೋ ಮತ್ತು ನಿಯಂತ್ರಣಕ್ಕೆ ಬರುವುದಿಲ್ಲವೋ, ಆಗ ಅಲಂಕಾರಿಕ ಪಟಾಕಿಗಳಿಂದ ಪ್ರಕಾಶವನ್ನು ನಿರ್ಮಾಣ ಮಾಡಿ ಅವುಗಳನ್ನು ನಿಯಂತ್ರಣಕ್ಕೆ ತರುವ ಕೆಲಸವನ್ನು ಈ ಶಾಸ್ತ್ರದ ಜ್ಞಾನವಿರುವವರು ಮಾಡುವುದು ಕಂಡು ಬರುತ್ತದೆ.’
ಈ. ಇದೇ ಶತಕದಲ್ಲಿ ಗಜಪತಿ ಪ್ರತಾಪರುದ್ರದೇವ ಇವರು ರಚಿಸಿದ ‘ಕೌತುಕ ಚಿಂತಾಮಣಿ’ ಹೆಸರಿನ ಸಂಸ್ಕೃತ ಗ್ರಂಥದಲ್ಲಿ ದೀಪಾವಳಿಯಲ್ಲಿ ಸಿಡಿಸಲಾಗುವ ಪಟಾಕಿಗಳ ವರ್ಣನೆ ಮತ್ತು ಅವುಗಳ ಚಿತ್ರಗಳನ್ನೂ ಬಿಡಿಸಿರುವುದು ಕಂಡು ಬರುತ್ತದೆ. ಗಜಪತಿ ಇವರು ಓಡಿಶಾ ರಾಜಮನೆತನದ ಖ್ಯಾತ ಲೇಖಕರಾಗಿದ್ದರು.

೩. ಔರಂಗಜೇಬನು ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಿ ಹಿಂದೂಗಳ ಆನಂದ ಹಾಳು ಮಾಡುವುದು ಪಟಾಕಿಗಳನ್ನು ನಿಷೇಧಿಸುವ ರೋಚಕ ಸಂದರ್ಭವೂ ಸಾಹಿತ್ಯದಲ್ಲಿ ಕಂಡು ಬರುತ್ತದೆ. ಈ ಸಂದರ್ಭವು ಔರಂಗಜೇಬನ ಕಾಲಕ್ಕೆ ಸಂಬಂಧಿಸಿದೆ. ೨೨ ನವೆಂಬರ್‌ ೧೬೬೫ ಈ ದಿನದಂದು ಗುಜರಾತನ ಪ್ರಾಂತಾಧಿಕಾರಿಗಳಿಗೆ ನೀಡಿದ ಆದೇಶದಲ್ಲಿ ಔರಂಗಜೇಬನು, ‘ಅಹಮದಾಬಾದ್‌ನ ಯಾವುದೇ ನಗರದಲ್ಲಿ ಅಥವಾ ಪರಗಣಾಗಳಲ್ಲಿ (ವಿಶಿಷ್ಟ ರಾಜಕೀಯ ಭಾಗ) ಹಿಂದೂಗಳ ಅಂಧಶ್ರದ್ಧೆಯ ಸಂಪ್ರದಾಯವಾಗಿರುವ ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳ ಪ್ರದರ್ಶನ ಈ ವಿಷಯಗಳ ಬಳಕೆಯಾಗಬಾರದು. ಮಾರುಕಟ್ಟೆಗಳಲ್ಲಿ, ದೀಪಾವಳಿಯ ಕಾಲಾವಧಿಯಲ್ಲಿ ಯಾವುದೇ ರೀತಿಯ ದೀಪಾಲಂಕಾರ ಮಾಡಬಾರದು ಎಂದು ಡಂಗುರ ಸಾರಿಸಬೇಕು’ ಎಂದು ಹೇಳಿದ್ದನು.

೪. ಹಿಂದೂಗಳು ಸಾಮಾಜಿಕ ಹೊಣೆಗಾರಿಕೆಯಲ್ಲಿ ಸದಾ ಜಾಗರೂಕರಾಗಿದ್ದರೂ ಅವರಿಗೇ ಪರಿಸರದ ಉಪದೇಶವನ್ನು ನೀಡಲಾಗುತ್ತದೆ

ಸ್ವಲ್ಪದರಲ್ಲಿ ಹೇಳಬೇಕೆಂದರೆ, ದೀಪಾವಳಿಗೆ ಅಥವಾ ಇತರ ಯಾವುದೇ ಆನಂದದ ಪ್ರಸಂಗದಲ್ಲಿ ಪಟಾಕಿಗಳನ್ನು ಸಿಡಿಸುವ ಸಂಪ್ರದಾಯ ಕಳೆದ ೫೦-೧೦೦ ವರ್ಷಗಳದ್ದಲ್ಲ, ಅದಕ್ಕೆ ಕಡಿಮೆಪಕ್ಷ ಎರಡೂವರೆ ಸಾವಿರ ವರ್ಷಗಳ ಇತಿಹಾಸ ವಿದೆ. ಅದರಲ್ಲಿಯೂ ಹಬ್ಬ-ಉತ್ಸವಗಳಲ್ಲಿ ಕಾಲಕ್ಕನುಸಾರ ಎಷ್ಟೋ ಬದಲಾವಣೆಗಳು ಆಗುತ್ತಿರುತ್ತವೆ. ಆ ಪ್ರತಿಯೊಂದು ಬದಲಾವಣೆಗಾಗಿ ವೇದ ಅಥವಾ ಪುರಾಣಗಳಲ್ಲಿ ಸಂದರ್ಭ ಗಳು ಇರಲೇಬೇಕು ಎಂದೇನಿಲ್ಲ. ಉದಾಹರಣೆಯನ್ನು ನೀಡಬೇಕಾದರೆ, ಮನೆಮನೆಗಳಲ್ಲಿ ಗಣಪತಿಯನ್ನು ತರುವುದು ಅಥವಾ ಅದಕ್ಕಿಂತಲೂ ಮುಂದೆ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವ ಸದ್ಯದ ಕಾಲದಲ್ಲಿ ಕಂಡು ಬರುವ ಸ್ವರೂಪ ವೈದಿಕ ಮತ್ತು ಪೌರಾಣಿಕ ಸಾಹಿತ್ಯಗಳಲ್ಲಿ ಕಂಡು ಬರುವುದಿಲ್ಲ; ಆದರೆ ಇದರ ಅರ್ಥ ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸಬಾರದು, ಎಂದಾಗುವುದಿಲ್ಲ. ಹಿಂದೂಗಳು ಯಾವಾಗಲೂ ಎಲ್ಲ ವಿಷಯಗಳಲ್ಲಿ ಹೊಂದಿ ಕೊಳ್ಳುತ್ತಾರೆ. ಆದರೂ ಪ್ರತಿಬಾರಿ ಪರಿಸರ ರಕ್ಷಣೆಯ ಡೋಸ್‌ನ್ನು ಹಿಂದೂಗಳಿಗೇ ನೀಡುವುದು ಬಹಳ ಅಯೋಗ್ಯವಾಗಿದೆ.

೫. ಪಟಾಕಿಗಳನ್ನು ಪೂರ್ಣ ನಿಷೇಧಿಸದೇ ಸ್ವಯಂಶಿಸ್ತು ಮತ್ತು ಸಂಯಮವನ್ನು ಅವಲಂಬಿಸುವುದು ಆವಶ್ಯಕ !

ಪಟಾಕಿಗಳ ವಿಪರೀತ ಬಳಕೆ ಸರಿಯಲ್ಲ ಎಂಬುದು ಸತ್ಯವಾದರೂ, ಅದರ ಪೂರ್ಣ ನಿಷೇಧವೂ ಸರಿಯಲ್ಲ. ಪಟಾಕಿಗಳ ವ್ಯಾಪಾರವು ಬಹುದೊಡ್ಡ ಹಣಕಾಸಿನ ವ್ಯವಹಾರ ವಾಗಿದೆ. ಈ ವ್ಯವಹಾರದ ಹೆಚ್ಚಿನ ಭಾಗವನ್ನು ತಮಿಳುನಾಡು ರಾಜ್ಯ ದಿಂದ ನಿರ್ವಹಿಸಲಾಗುತ್ತದೆ. ಈ ವ್ಯವಸಾಯದ ಮೇಲೆ ಶಿವಕಾಶಿ ಪರಿಸರದಲ್ಲಿನ ಸುಮಾರು ೮ ಲಕ್ಷ ಜನರ ಉದರನಿರ್ವಹಣೆ ಅವಲಂಬಿಸಿದೆ. ದೀಪಾವಳಿ ಅವರಿಗಾಗಿ ವರ್ಷದಾದ್ಯಂತದ ಗಳಿಕೆಯ ಕಾಲವಾಗಿರುತ್ತದೆ. ದಂತಗೋಪುರಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿದ್ದು ಮತ್ತು ದುಬಾರಿ ವಾಹನಗಳಲ್ಲಿ ತಿರುಗಾಡಿ ಮಾಲಿನ್ಯವನ್ನು ಹೆಚ್ಚಿಸುವ ‘ಜಮಾತ್‌-ಎ-ಪ್ರಗತಿಪರರು’ ಇವರಿಗೆ ಬಡವರ ಈ ವ್ಯಥೆ ಕಾಣಿಸಲಿಕ್ಕಿಲ್ಲ. ಪರಿಸರ, ಆರೋಗ್ಯ ಅಥವಾ ಉದರನಿರ್ವಹಣೆ ? ಈ ಎಲ್ಲ ವಿಷಯಗಳು ಸಮಾನವಾಗಿ ಮಹತ್ವದ್ದಾಗಿವೆ. ಇದಕ್ಕಾಗಿಯೇ ಪಟಾಕಿಗಳನ್ನು ಪೂರ್ಣ ನಿಷೇಧಿಸದೇ ಸ್ವಯಂಶಿಸ್ತು ಮತ್ತು ಸಂಯಮವನ್ನು ಅವಲಂಬಿಸಬೇಕು. ದೀಪಾವಳಿಯ ಸಮಯದಲ್ಲಿ ಮತ್ತು ಪಟಾಕಿಗಳ ಪ್ರಕಾರಗಳ ಬಳಕೆಯನ್ನು ಮಿತಿಗೊಳಿಸುವ ಬಗ್ಗೆ ಕಳಕಳಿಯಿಂದ ವಿನಂತಿಸಿಕೊಂಡರೂ ಸಾಕಾಗುತ್ತದೆ. ಹಿಂದೂ ಸಮಾಜ ನಿಜವಾಗಲೂ ಪ್ರಜ್ಞಾವಂತ ಸಮಾಜವಾಗಿದೆ.’

– ವೈದ್ಯ ಪರೀಕ್ಷಿತ ಶೆವಡೆ (ಹಿಂದಿನ ಪ್ರಕಟಣೆ : ತರುಣ ಭಾರತ) (ಆಧಾರ : ‘ಫೇಸ್‌ಬುಕ್‌ ಪುಟ’)