ಗಾಝಾದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಅಡಗಿರುವ ಹಮಾಸದ ಇಬ್ಬರು ಕಮಾಂಡರ್ ಹತರು ! – ಇಸ್ರೇಲ್ ದಾವೆ

ತೆಲ್ ಅವಿವ(ಇಸ್ರೇಲ್) ಗಾಝಾ ಪಟ್ಟಿಯಲ್ಲಿನ ಅತಿ ದೊಡ್ಡ ಜಬಲಿಯ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಿಂದಾದ ದಾಳಿಯಲ್ಲಿ ೧೯೫ ಕ್ಕಿಂತಲೂ ಹೆಚ್ಚಿನ ಪ್ಯಾಲೆಸ್ತೇನಿ ನಾಗರಿಕರು ಹತರಾಗಿದ್ದಾರೆ , ಹಾಗೂ ೧೨೦ ಜನರು ಕಟ್ಟಡದ ಅಡಿಯಲ್ಲಿ ಸಿಲುಕಿದ್ದಾರೆ ಎಂದು, ಹಮಾಸ ದಾವೆ ಮಾಡಿದೆ. ಇಸ್ರೇಲ್ ನ ಹೇಳಿಕೆ ಏನೆಂದರೆ ಈ ದಾಳಿಯಲ್ಲಿ ಹಮಾಸದ ಇಬ್ಬರು ಕಮಾಂಡರ್ ಗಳು ಹತರಾಗಿದ್ದಾರೆ. ಈ ಶಿಬಿರಗಳಲ್ಲಿ ಹಮಾಸದ ಭಯೋತ್ಪಾದಕರು ಅಡಗಿ ಕುಳಿತಿದ್ದರು.

ವಿಶ್ವಸಂಸ್ಥೆಯ ಮಾನವಾಧಿಕಾರ ಅಧಿಕಾರಿಗಳು ನಿರಾಶ್ರಿತರ ಶಿಬಿರದ ಮೇಲಿನ ದಾಳಿಯು ಯುದ್ಧ ಅಪರಾಧ ಆಗಬಲ್ಲದು ಎಂದು ಹೇಳಿದ್ದಾರೆ. ವಿದೇಶಿ ಪ್ರಜೆಗಳು ಸೇರಿದಂತೆ ೫೦೦ ಜನರು ಗಾಝಾ ಪಟ್ಟಿಯನ್ನು ತೊರೆದಿದ್ದಾರೆ. ಗಾಝಾ ಪಟ್ಟಿಯಿಂದ ೩೨೦ ವಿದೇಶಿ ಪ್ರಜೆಗಳ ಸಹಿತ ೫೦೦ ಜನರು ಈಜಿಪ್ತ್ ಅನ್ನು ಪ್ರವೇಶಿಸಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡವರು ಸಹ ಒಳಗೊಂಡಿದ್ದಾರೆ. ಹಾಗೆ ವಿದೇಶಿ ಪ್ರಜೆಗಳಲ್ಲಿ ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಲ್ಗೇರಿಯ, ಚೆಕ್ ಗಣರಾಜ್ಯ, ಫಿನ್ಲ್ಯಾಂಡ್, ಇಂಡೋನೇಷಿಯಾ, ಇಟಲಿ, ಜಪಾನ್, ಜಾರ್ಡನ್, ಬ್ರಿಟನ್ ಮತ್ತು ಅಮೆರಿಕ ದೇಶದ ನಾಗರಿಕರಿದ್ದಾರೆ.