Israeli Embassy Hamas videos : ದೆಹಲಿಯಲ್ಲಿ ಇಸ್ರೇಲಿ ರಾಯಭಾರಿ ಕಚೇರಿಯಲ್ಲಿ ಭಾರತೀಯ ಪತ್ರಕರ್ತರಿಗೆ ಹಮಾಸ ನಡೆಸಿದ ದೌರ್ಜನ್ಯದ ವಿಡಿಯೋ ತೋರಿಸಲಾಯಿತು !

ಜಗತ್ತಿನಲ್ಲಿನ ೧೫ ದೇಶಗಳಿಗೆ ವಿಡಿಯೋ ತೋರಿಸಲಾಗುವುದು !

ತೆಲ್ ಅವಿವ (ಇಸ್ರೇಲ್) – ರಾಜಧಾನಿ ದೆಹಲಿಯಲ್ಲಿನ ಇಸ್ರೇಲಿ ರಾಯಭಾರಿ ಕಚೇರಿಯಿಂದ ಭಾರತೀಯ ಪತ್ರಕರ್ತರಿಗಾಗಿ ಒಂದು ಬೈಠಕ್ ಆಯೋಜಿಸಲಾಗಿತ್ತು. ಇದರಲ್ಲಿ ಅಕ್ಟೋಬರ್ ೭ ರಂದು ಹಮಾಸದಿಂದ ಇಸ್ರೇಲ್ ನಲ್ಲಿ ಜ್ಯೂ ಜನರ ಮೇಲೆ ನಡೆಸಲಾದ ದೌರ್ಜನ್ಯದ ವಿಡಿಯೋ ತೋರಿಸಲಾಯಿತು. ಗಾಝಾದಲ್ಲಿನ ಹಮಾಸದ ೨ ಸಾವಿರ ಭಯೋತ್ಪಾದಕರು ಯಾವ ರೀತಿ ಇಸ್ರೈಲ್ ಮೇಲೆ ದಾಳಿ ನಡೆಸಿದರು, ಇದನ್ನು ಸಹ ಈ ವಿಡಿಯೋದ ಮೂಲಕ ತೋರಿಸಲಾಯಿತು.

೧. ಈ ವಿಡಿಯೋದಲ್ಲಿ ಸೈನಿಕರ ದೇಹಕ್ಕೆ ಅಳವಡಿಸಿರುವ ಕ್ಯಾಮೆರಾ ಫೂಟೇಜ್, ಗೋ ಪ್ರೊ ವಿಡಿಯೋ, ಸಿಸಿಟಿವಿ ಫೂಟೇಜ್, ಡ್ಯಾಶ್ ಬೋರ್ಡ್ ಕ್ಯಾಮರಾ, ಹಾಗೂ ಹಮಾಸದ ಭಯೋತ್ಪಾದಕರು ಮತ್ತು ಸಂತ್ರಸ್ತ ಇಸ್ರೇಲಿ ನಾಗರೀಕರ ಮೊಬೈಲ್ ಮೂಲಕ ತಯಾರಿಸಲಾದ ವಿಡಿಯೋಗಳು ಒಳಗೊಂಡಿದ್ದವು.

೨. ಇದರಲ್ಲಿನ ಒಂದು ವಿಡಿಯೋದಲ್ಲಿ, ಹಮಾಸದ ಓರ್ವ ಭಯೋತ್ಪಾದಕನು ತಾನು ಕೊಂದಿರುವ ಇಸ್ರೈಲ್ ನಾಗರಿಕನ ಶವದ ಛಾಯಾಚಿತ್ರಗಳನ್ನು ಮತ್ತು ವಿಡಿಯೋವನ್ನು ತನ್ನ ಕುಟುಂಬದವರಿಗೆ ವಾಟ್ಸಾಪ್ ಮೂಲಕ ಕಳಿಸಿದನು. ವಿಡಿಯೋದಲ್ಲಿ ಅವನು ತನ್ನ ತಾಯಿಗೆ, ಅಮ್ಮ ನಿನ್ನ ಮಗನು ಇಂದು ಅನೇಕ ಜ್ಯೂ ಜನರನ್ನು ಕೊಂದಿದ್ದಾನೆ. ನಿನ್ನ ಮಗ ಹೀರೋ ಆಗಿದ್ದಾನೆ, ಎಮದು ಹೇಳುತ್ತಿರುವುದು ಕಾಣಿಸುತ್ತದೆ.

೩. ಇನ್ನೊಂದು ವಿಡಿಯೋದಲ್ಲಿ ಎದುರಿನಿಂದ ಹೋಗುತ್ತಿರುವ ನಾಯಿಯ ಮೇಲೆ ಭಯೋತ್ಪಾದಕರು ಅನೇಕ ಗುಂಡುಗಳನ್ನು ಹಾರಿಸುವುದು ಕಾಣುತ್ತಿದೆ. ಆಂಬುಲೆನ್ಸ್ ಟೈಯರ್ ಮೇಲೆ ಗುಂಡು ಹಾರಿಸಿ ಆಂಬುಲೆನ್ಸ್ ಸೇವೆ ನಿಲ್ಲಿಸಿರುವುದು ಕೂಡ ಈ ವಿಡಿಯೋದಲ್ಲಿ ಕಾಣುತ್ತಿದೆ. (ಇಸ್ರೇಲಿ ಸೈನ್ಯವು ಗಾಝಾದಲ್ಲಿ ಭಯೋತ್ಪಾದಕರು ಅಡಗಿರುವ ಆಸ್ಪತ್ರೆಯ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸುವ ಕಾಂಗ್ರೆಸ್ಸಿಗರು ಇದರ ಬಗ್ಗೆ ಈಗ ಏನಾದರೂ ಹೇಳುವರೇನು ? – ಸಂಪಾದಕರು)

೪. ಜಗತ್ತಿನಾದ್ಯಂತ ೧೫ ದೇಶಗಳಲ್ಲಿ ಈ ರೀತಿಯ ವಿಡಿಯೋ ತೋರಿಸಲಾಗುವುದೆಂದು ಇಸ್ರೇಲಿ ಅಧಿಕಾರಿಗಳು ಹೇಳಿದರು. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಈ ಮೊದಲೇ ಈ ವಿಡಿಯೋಗಳನ್ನು ತೋರಿಸಲಾಗಿತ್ತು ನವೆಂಬರ್ ೨ ರಂದು ಫ್ರಾನ್ಸ್ ನಲ್ಲಿ ಇದರ ಪ್ರಸಾರ ಮಾಡಲಾಗುವುದು.