ನ್ಯೂಯಾರ್ಕ್ ನಲ್ಲಿ ಹೆಚ್ಚುತ್ತಿರುವ ಸಿಕ್ಖರ ಮೇಲಿನ ದಾಳಿಯ ಬಗ್ಗೆ ಮಹಾಪೌರ ಎರಿಕ್ ಆಡಮ್ಸ್ ರವರ ಹೇಳಿಕೆ !
ನ್ಯೂಯಾರ್ಕ್ (ಅಮೇರಿಕಾ) – ನ್ಯೂಯಾರ್ಕ್ ನಗರದ ಮಹಾಪೌರರಾದ ಎರಿಕ್ ಆಡಮ್ಸ್ ರವರು ಸಿಕ್ಖರ ಮೇಲಾಗುತ್ತಿರುವ ದಾಳಿಯಿಂದಾಗಿ ದೇಶದ ಪ್ರತಿಮೆಯು ಕಳಂಕಿತವಾಗುತ್ತಿದೆ ಎಂದು ಹೇಳಿದರು. ಆಡಮ್ಸ್ ರವರು ಮಾತನಾಡುತ್ತ, ಸಿಕ್ಖರ ಪಗಡಿ ಅಂದರೆ ಭಯೋತ್ಪಾದನೆ ಅಲ್ಲ, ಅದು ಅವರ ವಿಶ್ವಾಸದ ಪ್ರತೀಕವಾಗಿದೆ. ಪಗಡಿ ಅಂದರೆ ಕುಟುಂಬ, ಜನಾಂಗ, ನಗರ ಎಂಬ ಅರ್ಥದಲ್ಲಿ ಎಲ್ಲರೂ ಒಟ್ಟಾಗಿ ಬರುವುದಾಗಿದೆ. ಸಿಕ್ಖ ಜನಾಂಗವನ್ನು ರಕ್ಷಿಸಬೇಕು ಹಾಗೂ ಸಿಕ್ಖ ಧರ್ಮದ ಬಗ್ಗೆ ಜಾಗೃತರಾಗುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಆಡಮ್ಸ್ ಸಿಕ್ಖರು ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತ, ನೀವು ಭಯೋತ್ಪಾದಕರಲ್ಲ, ರಕ್ಷಕರಾಗಿದ್ದೀರಿ. ಇದನ್ನು ಸಂಪೂರ್ಣ ನಗರಕ್ಕೆ ಹೇಳುವುದು ಆವಶ್ಯಕವಾಗಿದೆ. ಇತ್ತೀಚಿಗೆ ನಗರದಲ್ಲಿನ ಸಿಕ್ಖರ ಮೇಲಿನ ದಾಳಿಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಕ್ಟೋಬರ್ ೧೫ ರಂದು ನಗರದಲ್ಲಿನ ರಿಚ್ಮಂಡ್ ಹಿಲ್ ನಲ್ಲಿರುವ ಗುರುದ್ವಾರಕ್ಕೆ ಹೋಗುತ್ತಿರುವಾಗ ಓರ್ವ ೧೯ ವರ್ಷದ ಸಿಖ್ ಹುಡುಗನ ಮೇಲೆ ದಾಳಿ ಮಾಡಲಾಯಿತು. ಕೆಲವು ದಿನಗಳ ಹಿಂದೆ ೬೬ ವರ್ಷದ ಜಸಮೇರ ಸಿಂಹರವರ ಚತುಷ್ಚಕ್ರವು ಇನ್ನೊಂದು ಚತುಷ್ಚಕ್ರವನ್ನು ಗುದ್ದಿತ್ತು. ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದರು, ಎಂದು ಹೇಳಿದರು.