‘ಸಾಧಕರು ಆಶ್ರಮದಲ್ಲಿ ಹಿಂದೂ ರಾಷ್ಟ್ರದ ಅನುಭೂತಿ ಹೇಗೆ ಪಡೆಯಬೇಕು ?’, ಈ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಶ್ರೀ. ರಾಮ ಹೊನಪ

‘ಒಮ್ಮೆ ಸತ್ಸಂಗದಲ್ಲಿ ಒಬ್ಬ ಸಾಧಕನು ಪರಾತ್ಪರ ಗುರು ಡಾಕ್ಟರರಿಗೆ ಮುಂದಿನಂತೆ ಪ್ರಶ್ನೆ ಯನ್ನು ಕೇಳಿದನು, ”ದೈನಿಕ ‘ಸನಾತನ ಪ್ರಭಾತ’ದಲ್ಲಿ ಒಮ್ಮೆ ನಿಮ್ಮ ಒಂದು ಲೇಖನ ಮುದ್ರಣವಾಗಿತ್ತು. ಅದರಲ್ಲಿ ನೀವು, ‘ಹಿಂದೂ ರಾಷ್ಟ್ರದ ಸ್ಥಾಪನೆಯು ಮೊದಲು ರಾಮನಾಥಿ(ಗೋವಾ)ಯ ಸನಾತನದ ಆಶ್ರಮದಲ್ಲಿ ಆಗಲಿದೆ. ತದನಂತರ ಗೋವಾದಲ್ಲಿ ಮತ್ತು ನಂತರ ಇತರ ರಾಜ್ಯಗಳಲ್ಲಿ ಆಗುವುದು’ ಎಂದು ಬರೆದಿದ್ದೀರಿ. ರಾಮನಾಥಿ ಆಶ್ರಮದಲ್ಲಿ ಸೇವೆ ಮಾಡುವಾಗ ನಮ್ಮೆಲ್ಲ ಸಾಧಕರಿಂದ ಏನಾದರೂ ತಪ್ಪುಗಳಾಗುತ್ತಿರುತ್ತವೆ. ಈ ಕಾರಣದಿಂದ ‘ಇಲ್ಲಿ ಹಿಂದೂ ರಾಷ್ಟ್ರ ಇದೆ’, ಎಂದು ನನಗೆ ಅನಿಸುವುದಿಲ್ಲ; ಆದರೆ ಪರವೂರಿನಿಂದ ಆಶ್ರಮಕ್ಕೆ ಬರುವ ಅತಿಥಿಗಳಿಗೆ ‘ಈ ಆಶ್ರಮದಲ್ಲಿ ಹಿಂದೂ ರಾಷ್ಟ್ರವಿದೆ’, ಎಂದು ಎನಿಸುತ್ತದೆ. ಈ ವಿಷಯದಲ್ಲಿ ಯೋಗ್ಯ ವಿಚಾರ ಹೇಗಿರಬೇಕು ?’’ ಎಂದು ಕೇಳಿದಾಗ, ಪರಾತ್ಪರ ಗುರು ಡಾಕ್ಟರರು, ”ನೀವು ಹಿಂದೂ ರಾಷ್ಟ್ರದ ವಿಚಾರವನ್ನು ಮನಸ್ಸು ಮತ್ತು ಬುದ್ಧಿಯ ಸ್ತರದಲ್ಲಿ ಮಾಡುತ್ತಿದ್ದೀರಿ. ಆದರೆ ಹೊರಗಿನ ಅತಿಥಿಗಳು ಈ ಆಶ್ರಮದಲ್ಲಿ ಆಧ್ಯಾತ್ಮಿಕ ಸ್ತರದ ಆನಂದದ ಅನುಭೂತಿಯನ್ನು ಅನುಭವಿಸುತ್ತಾರೆ. ಆ ಅತಿಥಿಗಳ ಆಧ್ಯಾತ್ಮಿಕ ಮಟ್ಟ ಹೆಚ್ಚಿದೆ’’ ಎಂದು ಹೇಳಿದರು.

ಈ ಪ್ರಸಂಗದಲ್ಲಿ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರ ಮೂಡಿತು, ‘ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನ ರಾಮರಾಜ್ಯವಿತ್ತು, ಆಗಲೂ ಜನರಿಂದ ಏನಾದರೂ ತಪ್ಪುಗಳು ಆಗುತ್ತಿರಬಹುದು; ಆದರೆ ಅವರು ನಿರಂತರವಾಗಿ ಪ್ರಭು ಶ್ರೀರಾಮನ ಸ್ಮರಣೆಯಲ್ಲಿದ್ದು, ರಾಮನನ್ನು ಅನುಭವಿಸುತ್ತಾ ಆನಂದದ ಜೀವನವನ್ನು ಜೀವಿಸುತ್ತಿದ್ದರು. ಅದೇ ರೀತಿ ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರು ಡಾಕ್ಟರರು, ಸದ್ಗುರುಗಳು ಮತ್ತು ಸಂತರು ಇವರ ಅಸ್ತಿತ್ವವಿದೆ. ಇದರಿಂದಾಗಿ ಆಶ್ರಮದ ವಾಸ್ತು ಚೈತನ್ಯಮಯವಾಗಿದೆ. ಇಲ್ಲಿ ವಾಸಿಸುವ ಸಾಧಕರು ಪರಾತ್ಪರ ಗುರು ಡಾಕ್ಟರರು ಮತ್ತು ಶ್ರೀಕೃಷ್ಣನ ಸ್ಮರಣೆಯಲ್ಲಿದ್ದು, ಸಾಧನೆಯ ಆನಂದವನ್ನು ಪಡೆಯುತ್ತಿದ್ದಾರೆ. ‘ಆಶ್ರಮದಲ್ಲಿನ ಈಶ್ವರೀ ಆನಂದವನ್ನು ಅನುಭವಿಸುವುದು’, ಎಂದರೆ ಹಿಂದೂ ರಾಷ್ಟ್ರವನ್ನು ಅನುಭವಿಸುವಂತೆಯೇ ಇದೆ.’

(ಇದು ಹಿಂದೂ ರಾಷ್ಟ್ರದ ವ್ಯಷ್ಟಿ ಅನುಭೂತಿಯಾಯಿತು. ಈ ಅನುಭೂತಿ ಸಮಷ್ಟಿ ಸ್ತರದಲ್ಲಿಯೂ ಎಲ್ಲರಿಗೂ ಬರಬೇಕು, ಈ ದೃಷ್ಟಿಯಿಂದ ಸನಾತನದ ಎಲ್ಲ ಆಶ್ರಮಗಳಲ್ಲಿರುವ ಸಾಧಕರು ಸಾಧನೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ. – ಪರಾತ್ಪರ ಗುರು ಡಾ. ಆಠವಲೆ)

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.