ಸಾಧಕರೇ, ಗುರುಕೃಪೆಯಿಂದ ಲಭಿಸುವ ಸೇವೆಯ ಪ್ರತಿಯೊಂದು ಅವಕಾಶದಿಂದ ಸಾಧನೆಯ ದೃಷ್ಟಿಯಲ್ಲಿ ಲಾಭ ಪಡೆದುಕೊಂಡು ಜೀವನವನ್ನು ಸಾರ್ಥಕಗೊಳಿಸಿ !

ಯಾವಾಗ ಸಾಧಕನಿಗೆ ಗುರುಕಾರ್ಯದಲ್ಲಿ ಭಾಗವಹಿಸಿ ಸೇವೆ ಮಾಡುವ ಸುವರ್ಣಾವಕಾಶ ಲಭಿಸುತ್ತದೋ, ಆಗ ಅದರ ಹಿಂದೆ ಅನೇಕ ಕಾರಣಗಳಿರಬಹುದು. ಅದನ್ನು ಮುಂದೆ ಕೊಡಲಾಗಿದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಆ ಸಾಧಕನಲ್ಲಿ ಆ ಸೇವೆ ಮಾಡುವ ಕೌಶಲ್ಯ ಹಾಗೂ ಸೇವೆಯ ಬಗ್ಗೆ ತಳಮಳ ಇರುವುದು.

೨. ಸಾಧಕನಲ್ಲಿ ಈ ಜನ್ಮದ ಹಾಗೂ ಪೂರ್ವಜನ್ಮದ ಸಾಧನೆ ಇರುವುದು.

೩. ಸಾಧಕನ ತಾಯಿ-ತಂದೆ, ಪೂರ್ವಜರು ಹಾಗೂ ಕುಲದಲ್ಲಿ ಅನೇಕ ಜನರು ಮಾಡಿದ ಸಾಧನೆಯಿಂದಾಗಿ ಸಾಧಕನಿಗೆ ಸೇವೆಯ ಅವಕಾಶ ಸಿಗುವುದು.

೪. ಎಲ್ಲಕ್ಕಿಂತ ಮಹತ್ವದ್ದೆಂದರೆ ಗುರುಕೃಪೆ ಇರುವುದು ‘ಕಲಿಯುಗದಲ್ಲಿ ಗುರುಗಳ ಈಶ್ವರೀ ಕಾರ್ಯದಲ್ಲಿ ಸೇವೆ ಮಾಡುವ ಅವಕಾಶ ಲಭಿಸುವುದು’, ಅತ್ಯಂತ ದುರ್ಲಭ ಹಾಗೂ ಭಾಗ್ಯವಾಗಿದೆ. ಆದ್ದರಿಂದ ಯಾವುದೇ ಸೇವೆ ಮಾಡುವ ಅವಕಾಶ ಸಿಕ್ಕಿದರೆ, ಹಿಂದಿನ-ಮುಂದಿನ ಯಾವುದೇ ವಿಚಾರ ಮಾಡದೆ ಆ ಸೇವೆಯನ್ನು ಪೂರ್ಣ ಗೊಳಿಸಲು ಸಮರ್ಪಣಾಭಾವದಿಂದ ಪ್ರಯತ್ನಿಸಬೇಕು. ಒಂದು ಸೇವೆ ಮಾಡುವಾಗ ಇನ್ನೊಂದು ಸೇವೆ ಬಂದರೆ, ಜವಾಬ್ದಾರ ಸಾಧಕರಿಗೆ ವಿಚಾರಿಸಿ ಪ್ರಾಧಾನ್ಯತೆಗನುಸಾರ ಸೇವೆಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ನಾವು ನಮ್ಮ ಅಯೋಗ್ಯ ಕ್ರಿಯಮಾಣದಿಂದ ಯಾವುದೇ ಸೇವೆಯನ್ನು ಬಿಟ್ಟುಬಿಟ್ಟರೆ, ‘ಅದು ಪುನಃ ಯಾವಾಗ ಸಿಗುವುದೆಂದು’ ಹೇಳಲು ಸಾಧ್ಯವಿಲ್ಲ. ಒಂದು ಮಾತು ಕೇಳಿದ್ದೆ, ‘ಸಂತ ತುಕಾರಾಮ ಮಹಾರಾಜರ
ಜನ್ಮ ಯಾವ ಕುಲದಲ್ಲಿ ಆಗಿತ್ತೊ, ಆ ಕುಲದಲ್ಲಿನ ೨೧ ಪೀಳಿಗೆಗಳಲ್ಲಿ ಆಗಿ ಹೋಗಿರುವ ಪೂರ್ವಜರ ಒಟ್ಟು ಸಾಧನೆಯ ಫಲ, ಅಂದರೆ ಸಂತ ತುಕಾರಾಮ ಮಹಾರಾಜ ರಂತಹ ಮಹಾನ ಸಂತರ ಜನ್ಮ ಆ ಕುಲದಲ್ಲಿ ಆಗುವುದು.’ ಇದರಿಂದ ‘ನಮಗೆ ಲಭಿಸಿದ ಸೇವೆಯ ಹಿಂದೆ ಅದೆಷ್ಟೋ ಜನರ ಸಾಧನೆ ಕಾರಣವಾಗಿರುತ್ತದೆ, ಎಂಬುದು ಕಲಿಯಲು ಸಿಗುತ್ತದೆ. ಹೀಗಿರುವಾಗ ನಾವು ತಪ್ಪಾಗಿ ಅಥವಾ ಉದ್ದೇಶಪೂರ್ವಕ ಯಾವುದೇ ಸೇವೆಯನ್ನು ನಿರಾಕರಿಸಿದರೂ ನಮಗೆ ಯಾವ ಪೂರ್ವಜರ ಕಠೋರ ಸಾಧನೆಯಿಂದ ಆ ಸೇವೆ ಲಭಿಸಿದೆಯೊ, ಆ ಎಲ್ಲರ ಸಾಧನೆಯ ಬಗ್ಗೆ ವಿಚಾರ ಮಾಡದೆ ಅದಕ್ಕೆ ತಣ್ಣೀರೆರಚಿದಂತಾಗುವುದು.’

ಸಾಧಕನು ‘ಪ್ರತಿಯೊಂದು ಸೇವೆಯೂ ನನಗೆ ದೇವರ ಕೃಪೆಯಿಂದಲೇ ಲಭಿಸಿದೆ. ಈ ಸೇವೆ ಮಾಡುವ ಭಾಗ್ಯ ವನ್ನು ದೇವರೇ ನನಗೆ ಕೊಟ್ಟಿದ್ದಾರೆ. ಆದ್ದರಿಂದ ನಾನು ಭಾವಪೂರ್ಣ ಹಾಗೂ ಪರಿಪೂರ್ಣ ಸೇವೆ ಮಾಡ ಬೇಕಾಗಿದೆ’, ಎನ್ನುವ ಅರಿವನ್ನು ನಿರಂತರ ಇಟ್ಟುಕೊಳ್ಳಬೇಕು. ಒಮ್ಮೆ ಒಬ್ಬ ಸಾಧಕನಿಗೆ ಓರ್ವ ಸಂತರು ಒಂದು ಸೇವೆ ಹೇಳಿದ್ದರು. ಏನೋ ಕಾರಣದಿಂದ ಆ ಸಾಧಕನು ಆ ಸೇವೆಯನ್ನು ಮಾಡಲಿಲ್ಲ. ಅದರ ಪರಿಣಾಮ ಏನಾಯಿತೆಂದರೆ, ಆ ಸಾಧಕನಿಗೆ ಮುಂದೆ ೨ ವರ್ಷ ಯಾವುದೇ ಸೇವೆ ಸಿಗಲಿಲ್ಲ ಹಾಗೂ ಈ ಅವಧಿಯಲ್ಲಿ ಅವನು ಸಾಧನೆ ಯಿಂದಲೂ ದೂರವಾದನು. ಇದೆಲ್ಲವೂ ತನ್ನಿಂತಾನೇ ಘಟಿಸಿತು. ಇದು ಆ ಸಾಧಕನಿಗೆ ಅನಂತರ ಅರಿವಾಯಿತು.ಆಗ ಇದರ ಹಿಂದಿನ ಶಾಸ್ತ್ರವನ್ನು ಹೇಳುವಾಗ ಆ ಸಂತರು ಹೇಳಿದರು, ”ನಿಮಗೆ ಸೇವೆ ಕೊಡಬಾರದೆಂಬ ಯಾವುದೇ ವಿಚಾರ ನನ್ನ ಮನಸ್ಸಿನಲ್ಲಿರಲಿಲ್ಲ. ನಾನು ಅದನ್ನು ಮರೆತು ಹೋಗಿದ್ದೆನು; ಆದರೆ ಅದು ಭಗವಂತನ ಸ್ಮರಣೆಯಲ್ಲಿರುತ್ತದೆ. ನೀವು ಮಾಡಿದ ಪುಣ್ಯ ಹಾಗೂ ನಿಮ್ಮ ಸಾಧನೆಯಿಂದ ನಿಮಗೆ ಆ ಸಮಯದಲ್ಲಿ ಸೇವೆಯ ಅವಕಾಶ ಹುಡುಕಿಕೊಂಡು ಬಂದಿತ್ತು; ಆದರೆ ಅಯೋಗ್ಯ ಕ್ರಿಯಮಾಣ ಹಾಗೂ ಮಾಯೆಯ ಆಕರ್ಷಣೆಯಿಂದ ನಿಮ್ಮಿಂದ ಆ ಸೇವೆ ಆಗದಿರುವುದರಿಂದ ದೇವರು ಶಿಕ್ಷೆಯೆಂದು ‘ನಿಮಗೆ ಮುಂದೆ ೨ ವರ್ಷ ಸಂತರಿಂದ ಯಾವುದೇ ಸೇವೆ ಸಿಗದಂತಹ’ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು. ಅನಂತರ ನಿಮ್ಮ ಸಾಧನೆಯಲ್ಲಿ ಪ್ರಗತಿಯಾದ ಕಾರಣ ದೇವರ ಕೃಪೆಯಿಂದ ಆ ತಪ್ಪು ನಿಮಗೆ ಅರಿವಾಯಿತು. ಆದ್ದರಿಂದ ನೋಡುವಾಗ ಸೇವೆ ದೊಡ್ಡದು-ಸಣ್ಣದೆಂದು ಕಾಣಿಸಿದರೂ ಅದರ ಹಿಂದಿನ ಶಾಸ್ತ್ರ ಅರಿವಾಗದಿದ್ದರೆ, ಸಾಧನೆಯಲ್ಲಿ ದೊಡ್ಡ ಹಾನಿಯಾಗಬಹುದು; ಆದ್ದರಿಂದಲೆ ಪ.ಪೂ. ಭಕ್ತರಾಜ ಮಹಾರಾಜರ ‘ಕಂಡದ್ದು ಕರ್ತವ್ಯ’, ಎಂಬ ವಚನವನ್ನು ನೆನಪಿನಲ್ಲಿಟ್ಟು ಸೇವೆಯ ಅವಕಾಶವನ್ನು ಸಾಧನೆಗಾಗಿ ಸಮಯ ಇರುವಾಗಲೇ ಉಪಯೋಗಿಸಿಕೊಳ್ಳುವುದು ಮಹತ್ವದ್ದಾಗಿದೆ. ಪ್ರತಿಯೊಬ್ಬ ಸಾಧಕನೂ ಭಾವಪೂರ್ಣ ಸೇವೆ ಮಾಡಿ ಸಿಕ್ಕಿದ ಅವಕಾಶದ ಲಾಭಪಡೆದುಕೊಳ್ಳಬೇಕು, ಹಾಗೆ ಮಾಡಿದರೆ ಮಾತ್ರ ಅವನ ಉದ್ಧಾರವಾಗುವುದು; ಇಲ್ಲದಿದ್ದರೆ, ‘ಜೀವಮಾನದಲ್ಲಿ ಪುನಃ ಆ ಅವಕಾಶ ಸಿಗುವುದೋ ಇಲ್ಲವೋ ?, ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಈಗ ಆಪತ್ಕಾಲ ಆರಂಭವಾಗಿದೆ.”

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೧.೫.೨೦೨೦)