ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅಕ್ಕನವರಲ್ಲಿ ದೇವತ್ವದ ಎಲ್ಲ ಗುಣಗಳಿವೆ ! – ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿ ಒಂದೇ ಸಮಯದಲ್ಲಿ ದೇವಿಸ್ವರೂಪ ಅವತಾರತ್ವದ ಎಲ್ಲಾ ಲಕ್ಷಣಗಳಿವೆ. ಅವರು ತಲೆಯಿಂದ ಕಾಲಿನವರೆಗೆ ತುಂಬಾ ಪ್ರಕಾಶಮಾನವಾಗಿ ಕಾಣುತ್ತಾರೆ. ಅವರ ಕಾಂತಿಯು ಅತ್ಯಂತ ತೇಜಸ್ವಿಯಾಗಿದೆ; ಏಕೆಂದರೆ ಅದರಲ್ಲಿ ದೇವತ್ವವಿದೆ. ಚರ್ಮವು ಅತ್ಯಂತ ಪಾರದರ್ಶಕ ಮತ್ತು ಮೃದುವಾಗಿದೆ; ಏಕೆಂದರೆ ಆ ದೇಹದಲ್ಲಿ ಸಾಧಕರ ಬಗೆಗಿನ ಈಶ್ವರೀ ಪ್ರೀತಿ ಮತ್ತು ಕರುಣೆ ಅಡಗಿದೆ. ಕೂದಲಿನ ಸ್ಪರ್ಶವೂ ಮೃದುವಾಗಿದೆ; ಏಕೆಂದರೆ ಅದರಲ್ಲಿ ಈಶ್ವರೀ ಚೈತನ್ಯದ ಪ್ರವಾಹವಿದೆ. ಅವರ ಕಣ್ಣುಗಳು ಜಲದಿಂದ ತುಂಬಿರುವಂತೆ ಕಾಣುತ್ತವೆ; ಏಕೆಂದರೆ ಅದರಲ್ಲಿ ವಾತ್ಸಲ್ಯದ ಆರ್ದ್ರತೆ ಇದೆ. ಅವರ ಚರಣಗಳ, ಕೈಗಳ ಉಗುರುಗಳು ಹೊಳಪಿನಿಂದ ಕೂಡಿದ್ದು ಮತ್ತು ಹಳದಿ ಬಣ್ಣಕ್ಕೆ ತಿರುಗಿವೆ; ಏಕೆಂದರೆ ಅದರಿಂದ ನಿರಂತರವಾಗಿ ಸಮಷ್ಟಿಯ ಕಲ್ಯಾಣಕ್ಕಾಗಿ ಚೈತನ್ಯದ ಗಂಗೋತ್ರಿ ಕಾರ್ಯನಿರತವಾಗಿರುತ್ತದೆ. ತ್ವಚೆಯ ರಚನೆಯು ಸಹ ಪಾರ ದರ್ಶಕವಾಗಿದೆ; ಏಕೆಂದರೆ ಮಾಯೆಯ ಲವವೇಶವೂ ಈಗ ದೇಹದಲ್ಲಿ ಉಳಿದಿಲ್ಲ. ಈಗ ಕೇವಲ ಗುರುಕೃಪೆಯ ಧಾರೆಯೊಂದೇ ಉಳಿದಿದೆ. ಅವರ ಧ್ವನಿಯು ಜೇನಿನಂತೆ ಮತ್ತು ಬಾಲಕಿಯ ಧ್ವನಿಯಂತೆ ಮುಗ್ಧವಾಗಿದೆ; ಏಕೆಂದರೆ ಆ ಧ್ವನಿಯಲ್ಲಿ ಈಶ್ವರನ ಬಗೆಗಿನ ಭಾವ ಮಾತ್ರ ಇದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರ ಮಸ್ತಕದ ಮೇಲಿರುವ ಬ್ರಹ್ಮರಂಧ್ರದ ಬಿಂದು ಬರಿಗಣ್ಣಿನಿಂದ ಕೂಡ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದ ಬಿಳಿಯ ಪ್ರಕಾಶ ಹೊರಸೂಸುತ್ತದೆ. ಇದರ ಅನುಭೂತಿಯನ್ನು ಅನೇಕ ಸಾಧಕರು ಪಡೆದಿದ್ದಾರೆ. ಯಾವಾಗ ಬುದ್ಧಿಯು ಹೆಚ್ಚು ಸಾತ್ತ್ವಿಕವಾಗಿ ಮತ್ತು ನಿಷ್ಕಾಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆಯೋ, ಆ ಸಮಯದಲ್ಲಿ ಬ್ರಹ್ಮರಂಧ್ರವು ಸತತ ಪ್ರಕಾಶದಿಂದ ದೈದೀಪ್ಯಮಾನವಾಗಿ ಕಾಣುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರ ಜೀವನದಲ್ಲಿ ಪ್ರತಿಯೊಂದು ಕರ್ಮವು ನಿಷ್ಕಾಮ ಮತ್ತು ಭಕ್ತಿಮಯವಾಗಿರುವುದರಿಂದ ಅವರ ಜೀವನವು ಸಹಜಭಾವದಿಂದ ಪರಿಪೂರ್ಣವಾಗಿದೆ ಮತ್ತು ಆದ್ದರಿಂದಲೇ ಅವರು ನಿರಂತರವಾಗಿ ವರ್ತಮಾನ ದಲ್ಲಿ ಮಾಯೆಯಲ್ಲಿ ಜೀವಿಸುತ್ತಿರುವಾಗಲೂ ಇಲ್ಲದಂತೆ ಇರುತ್ತಾರೆ. ಶ್ರೀ ಗುರುದೇವರು ಅವರ ಜೀವನದ ಪ್ರಾಣ ವಾಗಿರುವುದರಿಂದ, ಅವರಿಗೆ ಜೀವನದಲ್ಲಿ ಸ್ವಂತದ ಸಲುವಾಗಿ ಮಾಡಲು ಏನೂ ಉಳಿದಿಲ್ಲ. ಇದೇ ಸಮರ್ಪಿತ ಜೀವನ ! ಶ್ರೀ ಗುರುದೇವರು ಅವರನ್ನು ಸಾಧಕಿ, ಸಂತ, ಸದ್ಗುರು ಹೀಗೆ ಹಂತ ಹಂತವಾಗಿ ಕರೆದೊಯ್ದು, ಅವರನ್ನು ದೇವಿತತ್ತ್ವದ ವರೆಗೆ ಸುಲಲಿತವಾಗಿ ಕರೆದುತಂದಿದ್ದಾರೆ.

ಅಧ್ಯಾತ್ಮದಲ್ಲಿ ಪ್ರಗತಿ ಹೊಂದುತ್ತಿರುವಾಗ, ಒಬ್ಬನ ದೇಹದಲ್ಲಿ ದೇವತ್ವದ ಕೆಲವೊಂದು ಲಕ್ಷಣಗಳು ಕಂಡು ಬರುತ್ತಿವೆ; ಆದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರಲ್ಲಿ ದೇವತ್ವದ ಎಲ್ಲಾ ಗುಣಗಳು ಇರುವುದರಿಂದ ಮಹರ್ಷಿಗಳು ಅವರನ್ನು ದೇವಿಯ ಅವತಾರವೆಂದು ಗೌರವಿಸಿದ್ದಾರೆ, ಎಂಬುದರಲ್ಲಿ ಸಂಶಯವೇ ಇಲ್ಲ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೧೧.೧೦.೨೦೨೩)