ಈಶ್ವರನ ಅನೇಕ ಗುಣಗಳು ವರ್ಣನಾತೀತ ಇವೆ, ಹಾಗೆಯೇ ಬಿಂದಾ ಅಕ್ಕನವರಲ್ಲಿಯೂ ವರ್ಣನಾತೀತ ಅನೇಕ ಗುಣಗಳಿವೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಕ್ಟೋಬರ್‌ ೧೪ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಹುಟ್ಟುಹಬ್ಬ ಇತ್ತು ಆ ನಿಮಿತ್ತ …

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಿಗೆ ಶರಣಾಗತಿಯಿಂದ ವಂದಿಸುತ್ತಿರುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ವರ್ಷ ೨೦೨೨)

ಒಬ್ಬ ವ್ಯಕ್ತಿಯ ಗುಣಗಳ ಬಗ್ಗೆ ಏನಾದರೂ ಬರೆಯುವುದು ಇದ್ದರೆ, ಅವರಲ್ಲಿರುವ ಗುಣಗಳು ಇತರರಲ್ಲಿಯೂ ಇದೆ ಎಂದು ನಮ್ಮ ಗಮನಕ್ಕೆ ಬಂದರೆ, ಆ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಮೊದಲು ಬರೆದಿರುವ ಮಾಹಿತಿ ಯಂತೆ ಬರೆಯಲು ಸಾಧ್ಯವಾಗುತ್ತದೆ. ಆದರೆ ಸೌ. ಬಿಂದಾಅಕ್ಕನವರು (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ) ಎಷ್ಟು ಅದ್ವಿತೀಯರಾಗಿದ್ದಾರೆಂದರೆ, ಅವರ ಬಗ್ಗೆ ಬರೆಯುವಾಗ ಬೇರೆ ಲೇಖನಗಳಂತೆ ಅವರ ಲೇಖನವನ್ನು ಬರೆಯಲು ಸಾಧ್ಯವಾಗುವುದಿಲ್ಲ. ಅಷ್ಟು ಅಲ್ಲದೇ, ಅವರಲ್ಲಿ ಎಷ್ಟು ಅದ್ವಿತೀಯ ಗುಣಗಳಿವೆಯೆಂದರೆ ಅವೂ ಭಾಷೆಯ ಆಚೆಗಿರುವುದರಿಂದ ಅವುಗಳನ್ನು ಬರೆಯಲೂ ಸಾಧ್ಯವಿಲ್ಲ.

ಅಲೌಕಿಕ, ಶಬ್ದಾತೀತ ಇಂತಹ ಅನೇಕ ಗುಣಗಳು ಅವರಲ್ಲಿರುವುದರಿಂದ ಅವರ ಒಂದು ವೈಶಿಷ್ಟ್ಯವೆಂದರೆ, ಯಾವ ರೀತಿ ಈಶ್ವರನಲ್ಲಿ ಅನೇಕ ಗುಣಗಳು ವರ್ಣನಾತೀತವಾಗಿವೆಯೋ, ಹಾಗೆಯೇ ಸೌ. ಬಿಂದಾಅಕ್ಕನವರಲ್ಲಿಯೂ ವರ್ಣನಾತೀತವಾದ ಅನೇಕ ಗುಣಗಳಿವೆ. ಇಂತಹ ಶಬ್ದಾತೀತ ಸೌ. ಬಿಂದಾ ಅಕ್ಕನವರಿಗೆ ಅವರ ಜನ್ಮದಿನದ ನಿಮಿತ್ತ ‘ಅವರಿಂದ ಅಲೌಕಿಕವಾದ ವ್ಯಷ್ಟಿ ಮತ್ತು ಸಮಷ್ಟಿ ಇಂತಹ ದೈವಿ ಕಾರ್ಯಗಳು ಯಾವಾಗಲೂ ನಡೆಯಲಿ’, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.

ಪ್ರತಿದಿನ ಪ್ರತಿ ಕ್ಷಣ ಹುಟ್ಟುಹಬ್ಬದ ದಿನದಂತೆ ಆನಂದದಲ್ಲಿರುವ ಏಕೈಕ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಹುಟ್ಟುಹಬ್ಬ ೧೪.೧೦.೨೦೨೩ ರಂದು ಇದೆ’, ಎಂದು ಅನಿಸುವುದೇ ಇಲ್ಲ ; ಏಕೆಂದರೆ ಪ್ರತಿದಿನ ಪ್ರತಿಕ್ಷಣ ಹುಟ್ಟುಹಬ್ಬದ ದಿನದಂದು ಹೇಗೆ ಆನಂದ ಇರುತ್ತದೆಯೋ, ಅದೇ ರೀತಿ ಅವರು ವರ್ಷದ ಪ್ರತಿಯೊಂದು ದಿನ ಆತ್ಮಾನಂದದಿಂದ ಆನಂದದಲ್ಲಿರುತ್ತಾರೆ, ಹಾಗೆಯೇ ಅವರ ಹುಟ್ಟುಹಬ್ಬದ ದಿನದಂದು ಎಲ್ಲಾ ಸಾಧಕರು ಅವರಿಗಿಂತಲೂ ಹೆಚ್ಚು ಆನಂದದಿಂದ ಇರುತ್ತಾರೆ, ‘ಹೀಗೆ ಸಹ ಯಾರಾದರೂ ಇರಬಹುದು !’ ಎಂಬುದರ ಅನುಭೂತಿಯು ಕೇವಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಂದ ಬರುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ (೨೯.೯.೨೦೨೩)