೧. ‘ಕರ್ತೃತ್ವ’ ಶಬ್ದದ ಅರ್ಥ : ‘ಕರ್ತೃತ್ವ’ವೆಂದರೆ ‘ಯಾವುದೇ ಕೃತಿ ಅಥವಾ ವಿಚಾರವನ್ನು ಸ್ವತಃ ನಾನೇ ಮಾಡಿದ್ದೇನೆ’, ಎಂದು ಅನಿಸುವುದು ಮತ್ತು ಆ ರೀತಿ ಇತರರಿಗೆ ತೋರಿಸಲು ಪ್ರಯತ್ನಿಸುವುದು. ಇದೆಂದರೆ ನಮಗೆ ನಾವೇ ಪ್ರಶಸ್ತಿಪತ್ರವನ್ನು ನೀಡಿದಂತಾಗಿದೆ. ‘ತಾನು’ ಮಾಡಿರುವ ಬಗ್ಗೆ ಪ್ರತಿಯೊಂದು ಸ್ಥಳದಲ್ಲಿ ಹೇಳಿಕೊಂಡು ಮೆರೆಯುವುದು, ‘ನನಗೆ ಹೊಳೆಯಿತು’, ಎಂದು ಅನಿಸುವುದು ಅಥವಾ ‘ನಾನು ಮಾಡಿದೆ’, ಎಂಬ ವಿಚಾರವನ್ನು ಮಾಡಿ ಬದುಕುವುದು, ಅಂದರೆ ‘ಕರ್ತೃತ್ವ ಇರುವುದು’. ಇದು ಅಹಂನ ಲಕ್ಷಣವಾಗಿದೆ.
೨. ಕರ್ತೃತ್ವ ಮತ್ತು ಕೃತಜ್ಞತೆ : ‘ನಾವು ಎಲ್ಲೆಲ್ಲಿ ಕರ್ತೃತ್ವವನ್ನು ತೆಗೆದುಕೊಳ್ಳುತ್ತೇವೆ ?’, ಎಂಬುದರ ಅಧ್ಯಯನ ಮಾಡಿದಾಗ, ‘ನಾವು ಕೇವಲ ಬೆರಳೆಣಿಕೆಯಷ್ಟು ಪ್ರಸಂಗಗಳಲ್ಲಿ ಮಾತ್ರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಬಾಕಿ ಇತರ ಎಲ್ಲ ಕಡೆಗಳಲ್ಲಿ ನಾವು ಕರ್ತೃತ್ವವನ್ನು ತೆಗೆದುಕೊಳ್ಳುತ್ತಿರುತ್ತೇವೆ’, ಎಂಬುದು ಗಮನಕ್ಕೆ ಬಂದಿತು. ಒಂದು ವೇಳೆ ನಾವು ಪೂರ್ಣ ದಿನದಲ್ಲಿ ‘ಕರ್ತೃತ್ವದ ಬದಲು ಕೃತಜ್ಞತೆ’ಯನ್ನು ಅನುಭವಿಸುವ ಪ್ರಯತ್ನವನ್ನು ಹೆಚ್ಚಿಸಿದರೆ, ಗುರುದೇವರು ನಿಶ್ಚಿತವಾಗಿಯೂ ನಮ್ಮನ್ನು ಕೃತಜ್ಞತಾಭಾವದ ಆನಂದದಲ್ಲಿಡುವರು. ಇದನ್ನು ನಾವು ಅನುಭವಿಸಬೇಕು.
೩. ನಿರ್ಜೀವ ವಸ್ತುಗಳಲ್ಲಿ ಕರ್ತೃತ್ವವಿರದೇ ಸಮರ್ಪಣೆಯ ಭಾವ ಇರುವುದು : ನಾವು ಬಳಸುತ್ತಿರುವ ನಿರ್ಜೀವ ವಸ್ತುಗಳಲ್ಲಿ ಕರ್ತೃತ್ವ ಇರುವುದಿಲ್ಲ. ಆದುದರಿಂದ ಯಾರೂ ಮತ್ತು ಅವುಗಳನ್ನು ಹೇಗೆ ಉಪಯೋಗಿಸಿದರೂ, ಅವು ಸಮರ್ಪಣಾಭಾವದಲ್ಲಿಯೇ ಇರುತ್ತವೆ. ಅವುಗಳಲ್ಲಿ ಕರ್ತೃತ್ವ ಇರದ ಕಾರಣ ಅವುಗಳನ್ನು ಹೇಗೆ ಬಳಸಿದರೂ ಅವು ಬಳಸಲು ಬಿಡುತ್ತವೆ; ಆದರೆ ನಾವು ಮಾತ್ರ ಅವುಗಳ ಸಹಾಯದಿಂದ ಮಾಡಿದ ಕೃತಿಯನ್ನೂ ‘ನಾನು ಮಾಡಿದೆ’ ಎನ್ನುತ್ತಾ ಮರೆಯುತ್ತೇವೆ. ಉದಾ. ಬೆರಳಚ್ಚು ಮಾಡಿದಾಗ ನಮಗೆ ‘ನಾನು ಇದನ್ನು ಮಾಡಿದೆ’, ಎಂದು ಕರ್ತೃತ್ವದ ಅರಿವಾಗುತ್ತದೆ; ಆದರೆ ಯಾರ ಸಹಾಯದಿಂದ ನಾನು ಬೆರಳಚ್ಚು ಮಾಡಿದೆನೋ, ಆ ಗಣಕಯಂತ್ರಕ್ಕೆ ಮಾತ್ರ ಯಾವುದೇ ಕರ್ತೃತ್ವ ಇರುವು ದಿಲ್ಲ. ನಾವು ಅದರ ಬಳಕೆಯನ್ನು ಯಾವ ರೀತಿ ಮಾಡುತ್ತೇವೆಯೋ, ಅದೇ ರೀತಿ ಅದು ಮಾಡಲು ಬಿಡುತ್ತದೆ. ಇದರಿಂದ ‘ಅದರಲ್ಲಿ ಎಷ್ಟು ಸಮರ್ಪಣಾಭಾವವಿದೆ !’, ಎಂಬುದು ಗಮನಕ್ಕೆ ಬರುತ್ತದೆ.
೪. ಕರ್ತೃತ್ವದ ಬಗ್ಗೆ ಗುರುದೇವರ ಕಲಿಸುವಿಕೆ : ಕರ್ತೃತ್ವ ಬಂದರೆ, ಸಾಧನೆಯಲ್ಲಿ ಅಧೋಗತಿ ಆಗುತ್ತದೆ ಮತ್ತು ಕೃತಜ್ಞತೆ ಬಂದರೆ ಸಾಧನೆಯಲ್ಲಿ ಪ್ರಗತಿಯಾಗುತ್ತದೆ’, ಎಂದು ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಹೇಳಿದ್ದಾರೆ. ಕೃತಜ್ಞತಾಭಾವಕ್ಕೆ ಗುರು ದೇವರಿಗಿಂತ ಉತ್ತಮ ಉದಾಹರಣೆ ಜಗತ್ತಿನಲ್ಲಿ ಬೇರೆ ಇಲ್ಲ. ಅವರು ಮಾಡುವವರು-ಮಾಡಿಸಿಕೊಳ್ಳುವವರು ಆಗಿ ದ್ದರೂ ‘ನಾನು ಮಾಡಿಲ್ಲ. ಅದು ನಿಮ್ಮ ಭಾವದಿಂದಾಗಿ ಆಯಿತು’, ಎಂದು ನಮಗೆ ಹೇಳಿ ಅವರು ಪುನಃ ಕೃತಜ್ಞತಾ ಭಾವದಲ್ಲಿ ಇರುತ್ತಾರೆ. ಸಾಧಕರಿಗೆ ಶ್ವಾಸ ಮತ್ತು ಮನುಷ್ಯಜನ್ಮದ ಸಾರ್ಥಕತೆಯ ಧ್ಯಾಸವನ್ನು ನೀಡಿ ಮತ್ತೆ ‘ಇದೆಲ್ಲ ನಿಮ್ಮಿಂದ ಆಯಿತು’, ಎಂದು ಹೇಳುವಲ್ಲಿ ಎಷ್ಟು ಪರಾಕೋಟಿಯ ಕೃತಜ್ಞತಾಭಾವವಿದೆ ! ಒಂದು ವೇಳೆ ಇದನ್ನು ನಾವು ಸತತವಾಗಿ ಗಮನದಲ್ಲಿಟ್ಟರೆ, ನಮ್ಮ ಗುಡ್ಡದಷ್ಟು ಕರ್ತೃತ್ವವು ಕೃತಜ್ಞತಾಭಾವದಲ್ಲಿ ರೂಪಾಂತರವಾಗದೇ ಇರಲಾರದು.
‘ಗುರುದೇವರೇ ಈ ಅಂಶಗಳನ್ನು ಸೂಚಿಸಿ ನನಗೆ ಯಾವಾಗಲೂ ಕೃತಜ್ಞತಾಭಾವದಲ್ಲಿರುವುದರ ಅರಿವು ಮಾಡಿಕೊಟ್ಟಿದ್ದಕ್ಕಾಗಿ. ನಾನು ಅವರ ಚರಣಗಳಲ್ಲಿ ಕೋಟಿಶಃ ಕೃತಜ್ಞನಾಗಿದ್ದೇನೆ.’
– ನ್ಯಾಯವಾದಿ ನೀಲೇಶ ಸಾಂಗೋಲಕರ (ಆಧ್ಯಾತ್ಮಿಕ ಮಟ್ಟ ಶೇ. ೬೩), ಪಂಢರಾಪುರ (೬.೭.೨೦೨೩)