ಹಿಂದೂ ವಿರೋಧಿ ಘೋಷಣೆ !
ತಿರುವನಂತಪುರಂ (ಕೇರಳ) – ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಹಮಾಸ್ ಮತ್ತು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಲು ಕೇರಳದ ಮುಸ್ಲಿಂ ಬಹುಸಂಖ್ಯಾತವಿರುವ ಮಲ್ಲಪುರಂ ಜಿಲ್ಲೆಯಲ್ಲಿನ ಮುಸ್ಲೀಮರು ಅಕ್ಟೋಬರ್ ೨೭ ರಂದು ಆನ್ಲೈನ್ ಸಭೆಯ ಆಯೋಜನೆ ಮಾಡಿದ್ದರು. ಈ ಸಭೆಗೆ ಹಮಾಸ್ ನ ನಾಯಕ ಖಾಲಿದ್ ಮಶಾಲ್ ಇವನು ಮಾರ್ಗದರ್ಶನ ಮಾಡಿದನು. ಈ ಸಭೆಯಲ್ಲಿ ಖಾಲಿದ ಇವನು ಹಿಂದೂ ವಿರೋಧಿ ಘೋಷಣೆ ನೀಡಿರುವುದು ಕೂಡ ಕಂಡು ಬಂದಿದೆ.
೧. ಖಾಲಿದನು ಉಪಸ್ಥಿತ ಮುಸಲ್ಮಾನರಿಗೆ ಹಮಾಸ್ ಭಯೋತ್ಪಾದಕರಿಗೆ ಬೆಷರತ್ತು ಬೆಂಬಲ ನೀಡಲು ಕರೆ ನೀಡಿದ್ದಾನೆ. ಇದರಿಂದ ಮುಸಲ್ಮಾನರು ಹಮಾಸ್ ಗೆ ಬೆಂಬಲ ನೀಡುವ ಪ್ರತಿಜ್ಞೆ ಮಾಡಿದರು. ಖಾಲಿದ್ ಇವನು ೭ ನಿಮಿಷ ಮಾರ್ಗದರ್ಶನ ಮಾಡಿದನು.
೨. ಈ ಸಭೆಯಲ್ಲಿ ‘ಬುಲ್ಡೋಜರ್ ಹಿಂದುತ್ವ ಕಿತ್ತಿ ಎಸೆಯಿರಿ’, ಎಂದು ಘೋಷಣೆ ನೀಡಲಾದವು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಗಲಭೆ ನಡೆಸುವ ಮತಾಂಧರ ಕಾನೂನ ಬಾಹಿರ ಮನೆಗಳನ್ನು ನೆಲೆಸಮ ಮಾಡಿದರು. ಆದ್ದರಿಂದ ಅವರನ್ನು ‘ಬಾಬಾ ಬುಲ್ಡೋಜರ್’ ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಈ ಘೋಷಣೆಗಳು ನೀಡಲಾದವು.
೩. ಈ ಸಭೆ ‘ಜಾಮಾತ-ಎ-ಇಸ್ಲಾಮಿ’ ಸಂಘಟನೆಯ ‘ಸಾಲಿಡೇರಿಟಿ ಯೂಥ್ ಮೊಮೆಂಟ್’ ಈ ಯುವ ಶಾಖೆಯಿಂದ ಆಯೋಜಿಸಲಾಗಿತ್ತು. ಈ ಹಿಂದೆ ಈ ಯುವ ಸಂಘಟನೆಯಿಂದ ಪ್ಯಾಲೆಸ್ಟೈನ್ಅನ್ನು ಬೆಂಬಲಿಸಲು ಮೆರವಣಿಗೆ ಕೂಡ ನಡೆಸಲಾಗಿತ್ತು. ಈ ಸಭೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಟೀಕೆಗಳಾಗುತ್ತಿವೆ.
ಭಾಜಪದಿಂದ ಟೀಕೆ
ಈ ಸಭೆಯ ಬಗ್ಗೆ ಭಾಜಪವು ಕೇರಳದಲ್ಲಿನ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸಂಯುಕ್ತ ಸರಕಾರವನ್ನು ಟೀಕಿಸಿದೆ. ಕೇರಳದ ಭಾಜಪ ಪ್ರದೇಶಾಧ್ಯಕ್ಷ ಕೆ. ಸುರೇಂದ್ರಂ ಇವರು ‘ಮುಖ್ಯಮಂತ್ರಿ ಪೀನರಾಯಿ ವಿಜಯನ್ ಇವರ ಪೊಲೀಸರು ಎಲ್ಲಿ ಇರುವರು ? ಹಮಾಸ್ ನ ನಾಯಕ ಸಭೆಯಲ್ಲಿ ಮಾರ್ಗದರ್ಶನ ಮಾಡುತ್ತಾನೆ, ಇದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಪ್ಯಾಲೆಸ್ಟೈನ್ ಜನರಿಗೆ ರಕ್ಷಿಸುವ ಹೆಸರಿನಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡಲಾಗುತ್ತಿದೆ. ಭಯೋತ್ಪಾದಕ ಸಂಘಟನೆ ಹಮಾಸ್ ಮತ್ತು ಅದರ ನಾಯಕರ ಹಾಡಿಹೊಗಳಲಾಗುತ್ತಿದೆ. ಅವರನ್ನು ಯೋಧ ಎಂದು ಹೇಳಲಾಗುತ್ತಿದೆ’, ಎಂದು ಟೀಕಿಸಿದರು.
Hamas leader Khaled Mashel’s virtual address at the Solidarity event in Malappuram is alarming. Where’s @pinarayivijayan‘s Kerala Police ? Under the guise of ‘Save Palestine,’ they’re glorifying Hamas, a terrorist organization, and its leaders as ‘warriors.’ This is… pic.twitter.com/51tWi88wTb
— K Surendran (@surendranbjp) October 27, 2023
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ನ ನಾಯಕನಿಗೆ ಆನ್ಲೈನ್ ಸಭೆಯಲ್ಲಿ ಆಮಂತ್ರಿಸಿ ಅವನಿಗೆ ಮಾರ್ಗದರ್ಶನ ಮಾಡುವಂತ ಹೇಳಿದ ಕೇರಳದಲ್ಲಿನ ಇಸ್ಲಾಮಿಕ್ ಸಂಘಟನೆಯ ಮೇಲೆ ನಿಷೇಧ ಹೇರಬೇಕು ! ಇಂತಹ ಹುಳುವನ್ನು ಈಗಲೇ ಮುಗಿಸಬೇಕು ! ಇಂತಹ ಸಭೆಗೆ ಕೇರಳದಲ್ಲಿನ ಸರಕಾರವು ಅನುಮತಿ ಹೇಗೆ ನೀಡಿತು ? ಇದನ್ನು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು ! |