ಭಾರತೀಯ ವಿದೇಶಾಂಗ ಸಚಿವಾಲಯ ಕಾನೂನು ರೀತಿಯಲ್ಲಿ ಅಧ್ಯಯನ !
ದೋಹಾ (ಕತಾರ) – ಕತಾರದಲ್ಲಿನ ಅಲ್ ದಾಹರ ಕಂಪನಿಯಲ್ಲಿನ ೮ ಭಾರತೀಯ ಕಾರ್ಮಿಕರಿಗೆ ಸ್ಥಳೀಯ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಈ ಭಾರತೀಯ ಕಾರ್ಮಿಕರು ಭಾರತದ ನೌಕಾದಳದ ಮಾಜಿ ಸೈನಿಕರಾಗಿದ್ದಾರೆ. ಇವರ ಮೇಲೆ ಇಸ್ರೇಲ್ ಗಾಗಿ ಬೆಹುಗಾರಿಕೆ ಮಾಡಿರುವ ಆರೋಪ ಕೇಳಿಬಂದಿದೆ. (ಎಲ್ಲರೂ ನಿವೃತ್ತ) ಕ್ಯಾಪ್ಟನ್ ನವತೆಜ ಸಿಂಹ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ ವರ್ಮ, ಕ್ಯಾಪ್ಟನ್ ಸೌರಭ ವಸಿಷ್ಠ, ಕಮಾಂಡರ್ ಅಮಿತ ನಾಗಪಾಲ, ಕಮಾಂಡರ್ ಪೂರ್ಣೆಂದು ತಿವಾರಿ, ಕಮಾಂಡರ್ ಸುಗುಣಕರ ಪಾಕಲ, ಕಮಾಂಡರ್ ಸಂಜೀವ ಗುಪ್ತ, ಮತ್ತು ನಾವಿಕ ರಾಗೇಶ ಎಂದು ಇವರ ಹೆಸರುಗಳಾಗಿವೆ. ಈ ಶಿಕ್ಷೆಯ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯವು, ಗಲ್ಲು ಶಿಕ್ಷೆಯ ನಿರ್ಣಯನಿಂದ ನಮಗೆ ದೊಡ್ಡ ಆಘಾತವಾಗಿದೆ. ನಾವು ಸವಿಸ್ತರ ತೀರ್ಪಿನ ದಾರಿ ಕಾಯುತ್ತಿದ್ದೇವೆ. ನಾವು ಈ ಭಾರತೀಯ ಕುಟುಂಬದ ಸದಸ್ಯರು ಮತ್ತು ಕಾನೂನುತಜ್ಞರ ತಂಡದ ಸಂಪರ್ಕದಲ್ಲಿದ್ದೇವೆ. ನಾವು ಎಲ್ಲಾ ಕಾನೂನು ರೀತಿಯ ಪರ್ಯಾಯ ಹುಡುಕುತ್ತಿದ್ದೇವೆ. ನಾವು ಈ ಪ್ರಕರಣದಲ್ಲಿ ಎಲ್ಲಾ ರೀತಿಯ ಕಾನೂನು ಸಹಾಯ ನೀಡುವೆವು. ಶಿಕ್ಷೆ ಆದ ನಂತರ ಭಾರತೀಯರ ಮೇಲೆ ಇಟಲಿಯಿಂದ ಪ್ರಗತ ಜಲಾಂತರ್ಗಾಮಿ ಖರೀದಿ ಮಾಡುವ ಕತಾರಿನ ರಹಸ್ಯ ಯೋಜನೆಯ ಮಾಹಿತಿ ಇಸ್ರೇಲ್ ಗೆ ನೀಡಿರುವ ಆರೋಪ ಇದೆ. ಇದೆ ಪ್ರಕರಣದಲ್ಲಿ ಒಂದು ಖಾಸಗಿ ರಕ್ಷಣಾ ಕಂಪನಿಯ ಮುಖ್ಯ ಕಾರ್ಯಕಾರಿಅಧಿಕಾರಿ ಮತ್ತು ಕತಾರದ ಅಂತರಾಷ್ಟ್ರೀಯ ಸೈನ್ಯ ಕ್ರಮ ಕೈಗೊಳ್ಳುವ ಮುಖ್ಯಸ್ಥನನ್ನು ಕೂಡ ಬಂಧಿಸಲಾಗಿತ್ತು.