ನಾನು 10 ಯಹೂದಿಗಳನ್ನು ಕೊಂದೆ !

ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತಾದ ಮಾಹಿತಿಯನ್ನು ಇಸ್ರೇಲ್ ಸೇನೆ ಮತ್ತು ರಕ್ಷಣಾ ಸಚಿವಾಲಯವು ತಮ್ಮ ವಿವಿಧ ’ಎಕ್ಸ್’ ಖಾತೆಗಳ ಮೂಲಕ ನಿರಂತರವಾಗಿ ಪ್ರಸಾರ ಮಾಡುತ್ತಿದೆ. ಅವರು ಹಮಾಸ್ ಓರ್ವ ಭಯೋತ್ಪಾದಕ ಮತ್ತು ಆತನ ತಂದೆಯ ನಡುವಿನ ಆಡಿಯೋ ಸಂಭಾಷಣೆಯನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಮಹಮೂದ್ ಎಂಬ ಭಯೋತ್ಪಾದಕ ತನ್ನ ತಂದೆಗೆ, ತಾನು 10 ಯಹೂದಿಗಳನ್ನು ಕೊಂದೆ ಎಂದು ಹೇಳುತ್ತಿದ್ದಾನೆ. ಇಸ್ರೇಲಿ ರಕ್ಷಣಾ ಸಚಿವಾಲಯ ಮಾಹಿತಿ ನೀಡುತ್ತಾ, ಮಹಮೂದ್ ಅಕ್ಟೋಬರ್ 7 ರಂದು 10 ಯಹೂದಿಗಳನ್ನು ಹತ್ಯೆ ಮಾಡಿದ್ದೂ ಆ ಮಾಹಿತಿಯನ್ನು ಅದೇ ದಿನ ತನ್ನ ತಂದೆಗೆ ನೀಡಿದ್ದಾನೆ ಎಂದು ತಿಳಿಸಿದೆ. ಇದಕ್ಕಾಗಿ ಅವರು ಹತ್ಯೆ ಮಾಡಿದ ಒಬ್ಬ ಯಹೂದಿ ಮಹಿಳೆಯ ಮೊಬೈಲ್ ಬಳಸಿದ್ದಾನೆ ಎಂದು ಇಸ್ರೇಲ್ ಹೇಳಿದೆ. ಈ ಸಮಯದಲ್ಲಿ ಮಹಮೂದ ತಂದೆ ಅವನಿಗೆ, ’ಅಲ್ಲಾಹು ಅಕ್ಬರ್ (ಅಲ್ಲಾ ಮಹಾನ್). ದೇವರು ನಿನ್ನನ್ನು ರಕ್ಷಿಸಲಿ ! ಅಲ್ಲಾ ನಿನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಾನೆ ಎಂದು ನನಗೆ ಖಾತ್ರಿಯಿದೆ!’ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಮಹಮೂದನ ತಾಯಿ ಅವನನ್ನು ಹೊಗಳುತ್ತಿರುವುದು ಆಡಿಯೋದಲ್ಲಿ ಕೇಳಿಸುತ್ತದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ