|
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಚಟಗಾವನ ಹಥಜಾರಿಯ ಸೋಮಪುರ ಪ್ರದೇಶದಲ್ಲಿ ವಾಸಿಸುವ ಶಾಹ ಆಲಮ್ ಇವನು ದುರ್ಗಾ ಪೂಜಾ ಮಂಟಪಕ್ಕೆ ನುಗ್ಗಲು ಪ್ರಯತ್ನಿಸಿದನು. ಇದರಿಂದ ಅನುಮಾನಗೊಂಡ ಪೂಜಾ ಸಮಿತಿ ಸದಸ್ಯರು ತಕ್ಷಣವೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಲಮ್ ಬಳಿ ಕುರಾನ್ ಗಳಿಂದ ತುಂಬಿದ ಒಂದು ಚೀಲವೂ ಇತ್ತು. 3 ಗಂಟೆಗಳ ನಂತರ ಪೊಲೀಸರು ಆಲಮ್ ಮನೋರೋಗಿ ಎಂದು ಹೇಳಿ ಬಿಡುಗಡೆ ಮಾಡಿದರು. (ಭಾರತವೇ ಆಗಿರಲಿ ಅಥವಾ ಬಾಂಗ್ಲಾದೇಶವೇ ಆಗಿರಲಿ ಹಿಂದೂಗಳ ಶ್ರದ್ಧಾ ಸ್ಥಳಗಳನ್ನು ಅಪವಿತ್ರಗೊಳಿಸುವ ಮತಾಂಧರು ಯಾವತ್ತೂ ಮನೋರೋಗಿಗಳೇ ಆಗಿರುತ್ತಾರೆ. ಇದು ದೊಡ್ಡ ಒಗಟಾಗಿದೆ ! – ಸಂಪಾದಕರು) ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವುದನ್ನು ನೋಡಿದ ಪೊಲೀಸರು ಆಲಂನನ್ನು ರಾತ್ರಿ 2 ಗಂಟೆಗೆ ಮತ್ತೆ ಬಂಧಿಸಿ ವಶಕ್ಕೆ ಪಡೆದರು.
ಸೋಮಪುರಾ ಪ್ರದೇಶದ ಶ್ರೀ ಶ್ರೀ ರಕ್ಷಾಕಾಳಿ ದೇವಸ್ಥಾನದಲ್ಲಿ ಅಕ್ಟೋಬರ್ 21 ರಂದು ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ, ಪೊಲೀಸರು ಯಾವುದೇ ತನಿಖೆ ನಡೆಸದೆ ಶಾಹ ಆಲಮ್ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದಾರೆ ಎಂದು ಹಿಂದೂಗಳು ಹೇಳಿದ್ದಾರೆ. ಪೂಜಾ ಸಮಿತಿ ಸದಸ್ಯರು ಆಲಮ್ ದುರ್ಗಾ ಪೂಜೆ ಮಂಟಪಕ್ಕೆ ನುಗ್ಗಿ ಗಲಾಟೆ ನಡೆಸಲು ಯತ್ನಿಸುತ್ತಿದ್ದನು ಎಂದು ಆರೋಪಿಸಿದ್ದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳ ನೋವನ್ನು ಕೊನೆಗೊಳಿಸಲು ಭಾರತದಲ್ಲಿ ಪರಿಣಾಮಕಾರಿ ಹಿಂದೂ ಸಂಘಟನೆ ಆವಶ್ಯಕವಿದೆ ! |