ಚೀನಾ ತನ್ನ ವಿದ್ಯಾರ್ಥಿಗಳಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠೆಯನ್ನು ಜಾಗೃತಗೊಳಿಸಲು ಕಾನೂನಿನ ಅಂಗೀಕಾರ !

ಬೀಜಿಂಗ್ – ಚೀನಾ ದೇಶಭಕ್ತಿಯ ಶಿಕ್ಷಣವನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ಚೀನಾ ಸರಕಾರ ದೇಶಭಕ್ತಿಯ ಶಿಕ್ಷಣ ಕಾನೂನನ್ನು ಅಂಗೀಕರಿಸಿದೆ. ಈ ಕಾಯಿದೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಅಭ್ಯಾಸಕ್ರಮವನ್ನು ಕಲಿಸಲು ಕಾಯಿದೆ ನಿರ್ಮಿಸಲಿದೆ. ಈ ಕಾಯಿದೆಯು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಚೀನಾದ ಯುವಕರಲ್ಲಿ ಜೀವನದ ಎಲ್ಲಾ ಮಗ್ಗಲುಗಳಲ್ಲಿ ರಾಷ್ಟ್ರೀಯ ಐಕ್ಯತೆ, ದೇಶಭಕ್ತಿ ಮತ್ತು ಕಮ್ಯುನಿಸ್ಟ್ ಪಕ್ಷದ ವಿಷಯದಲ್ಲಿ ನಿಷ್ಠೆಯನ್ನು ಜಾಗೃತಗೊಳಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ.

1. ಈ ಕಾನೂನಿನಲ್ಲಿ, ದೇಶದಲ್ಲಿ ಕೆಲವರು ದೇಶಭಕ್ತಿಯನ್ನು ಮರೆಯುತ್ತಿದ್ದಾರೆ ಈ ಬಗ್ಗೆ ಅವರಿಗೆ ಅರಿವು ಮೂಡಿಸುವ ಆವಶ್ಯಕತೆಯಿದೆ. ಎಂದು ಹೇಳುತ್ತದೆ.

2. ‘ಐತಿಹಾಸಿಕ ಶೂನ್ಯವಾದ’ದಂತಹ (ಹಿಸ್ಟಾರಿಕಲ ನಿಹಿಲಿಜಮ್) ಸವಾಲುಗಳನ್ನು ಎದುರಿಸಲು ಕಾನೂನಿನ ಅಗತ್ಯವಿದೆ ಎಂದು ಸರಕಾರದ ಹೇಳಿಕೆಯಾಗಿದೆ. ಚೀನಾದಲ್ಲಿ ಜನರು ಕಮ್ಯುನಿಸ್ಟ್ ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದಾಗ ಅಥವಾ ಪಕ್ಷದ ಕ್ಷಮತೆಯನ್ನು ಅನುಮಾನಿಸಿ ಅದನ್ನು ಟೀಕಿಸಲು ಪ್ರಾರಂಭಿಸಿದಾಗ, ಅದನ್ನು ‘ಐತಿಹಾಸಿಕ ಶೂನ್ಯವಾದ’ ಎಂದು ಕರೆಯಲಾಗುತ್ತದೆ.

ಸಂಪಾದಕೀಯ ನಿಲುವು

ಇದರಿಂದ ಚೀನಾದ ಅಭ್ಯಾಸಕ್ರಮದಲ್ಲಿ ಕಮ್ಯುನಿಸ್ಟರ ವೈಭವಿಕರಣಗೊಳಿಸುವ ಪಠ್ಯವಿರಲಿದೆ ಇದು ಖಂಡಿತ ! ಕೋಮುವಾದಿಗಳ ವಿಷಯದಲ್ಲಿ ಇಂತಹ ಸುಳ್ಳು ಇತಿಹಾಸವನ್ನು ಕಲಿತ ನಂತರ ನಿರ್ಮಾಣವಾಗುವ ಮುಂದಿನ ಯುವಪೀಳಿಗೆ ಹೇಗಿರಲಿದೆ, ಎನ್ನುವ ವಿಚಾರವನ್ನೂ ಮಾಡದಿರುವುದು ಉತ್ತಮ !