|
ಬಸ್ತಿ (ಉತ್ತರ ಪ್ರದೇಶ) – ಇಲ್ಲಿನ ಚೌರಿ ಬಜಾರ್‌ನಲ್ಲಿ ಸಿಂಹವಾಹಿನಿ ದುರ್ಗಾ ಪೂಜಾ ಸಮಿತಿ ಆಯೋಜಿಸಿದ್ದ ನವರಾತ್ರೋತ್ಸವದಲ್ಲಿ ಭಜನೆ ನಡೆಯುತ್ತಿತ್ತು. ಆ ವೇಳೆ ಮುಸ್ಲಿಂ ಯುವತಿಯೊಬ್ಬಳು ಶ್ರೀ ದುರ್ಗಾದೇವಿ ಮೂರ್ತಿ ಹಾಗೂ ಭಜನೆ ಮಾಡುತ್ತಿದ್ದ ಗಾಯಕರ ಮೇಲೆ ಕಪ್ಪು ಬಟ್ಟೆ ಎಸೆದಿದ್ದಾಳೆ. ಈ ಯುವತಿಯು ಗಾಯಕನಿಂದ ಮೈಕ್ ಅನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತಾ, ‘ಇಸ್ಲಾಂ ಜಿಂದಾಬಾದ್’ ಮತ್ತು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದಳು. ಈ ಘಟನೆ ರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ. ಈ ವಿಷಯ ಮರುದಿನ ಬೆಳಿಗ್ಗೆ ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳಿಗೆ ತಿಳಿದಾಗ, ಅವರ ಕಾರ್ಯಕರ್ತರು ಇಲ್ಲಿನ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಯುವತಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇದರಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಪೊಲೀಸರು ಯುವತಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ಸಂಪಾದಕೀಯ ನಿಲುವುನವರಾತ್ರೋತ್ಸವದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವಾಗ ಮತಾಂಧ ಯುವತಿಯೊಬ್ಬಳು ಈ ದುಃಸಾಹಸ ಮಾಡಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಧರ್ಮಹಾನಿಯನ್ನು ತಡೆಯಲು ಏನೂ ಮಾಡದಿರುವ ಸ್ಮಶಾನ ಮೌನ ತಾಳುವ ಹಿಂದೂಗಳ ಮೇಲೆ ಜಿಹಾದಿ ಭಯೋತ್ಪಾದಕರು ದಾಳಿ ಮಾಡಿದರೆ, ಆಶ್ಚರ್ಯವೇನು ? |