ಅಪಘಾತದಲ್ಲಿ ಶರೀರಕ್ಕೆ ಕಲ್ಪನೆಗೂ ಮೀರಿದ ಹಾನಿಯಾದ ಬಳಿಕವೂ ಅದನ್ನು ಸ್ವೀಕರಿಸಿ, ಅನೇಕ ಸೇವೆಗಳನ್ನು ಮಾಡಬಹುದು ಎಂದು ನಮಗೆ ಊಹಿಸಲೂ ಸಾಧ್ಯವಿಲ್ಲ. ಅಂತಹ ಸೇವೆಯ ಆದರ್ಶವನ್ನು ವೈಶಾಲಿ ಎಲ್ಲರ ಮುಂದೆ ಇಟ್ಟಿದ್ದಾಳೆ. ಈ ರೀತಿ ಮಾಡಿರುವ ಕು. ವೈಶಾಲಿ ನಾಗೇಶ ಗಾವಡಾ ಇವಳನ್ನು ಹೊಗಳಿದಷ್ಟೂ ಕಡಿಮೆಯೇ. ಈ ರೀತಿ ಸೇವೆಯನ್ನು ಮಾಡಿ, ವೈಶಾಲಿ ಸಾಧನೆಯಲ್ಲಿ ಶೀಘ್ರ ಪ್ರಗತಿಯನ್ನು ಸಾಧಿಸುವಳು ಎಂದು ನನಗೆ ಖಾತ್ರಿಯಿದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ |
೧. ಕಾಲೇಜಿನಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಅಪಘಾತವಾಗಿ ಪ್ರಜ್ಞೆ ತಪ್ಪಿ ಬೀಳುವುದು ಮತ್ತು ಎದುರಿನಿಂದ ಬಂದ ವಾಹನ ಕೈಮೇಲೆ ಹೋಗಿದ್ದರಿಂದ ಕೈ ಪುಡಿಪುಡಿಯಾಗಿ ತೀವ್ರ ರಕ್ತಸ್ರಾವವಾಗುವುದು : ನಾನು ಕಾಲೇಜಿನಲ್ಲಿ ಕಲಿಯುತ್ತಿದ್ದೆ. ೧೪.೧೧.೨೦೧೬ ರಂದು ಮಧ್ಯಾಹ್ನ ೩ ಗಂಟೆಗೆ ನಾನು ದ್ವಿಚಕ್ರವಾಹನದಿಂದ ಮನೆಗೆ ಹೋಗುತ್ತಿದ್ದೆ. ಆಗ ಹಿಂದಿನಿಂದ ಒಂದು ವಾಹನ ಬಂದಿತು ಮತ್ತು ಅದು ನನ್ನ ವಾಹನಕ್ಕೆ ಡಿಕ್ಕಿ ಹೊಡೆಯಿತು. ನಾನು ಕೆಳಗೆ ಬಿದ್ದೆ ಮತ್ತು ಮೂರ್ಛಿತಳಾದೆ. ಅದೇ ಸಮಯದಲ್ಲಿ ಎದುರಿನಿಂದ ಬಂದ ವಾಹನವು ನನ್ನ ತಲೆಯ ಮೇಲಿನಿಂದಲೇ ಹೋಗುವುದಿತ್ತು; ಆದರೆ ದೇವರ ದಯೆಯಿಂದ ಅದು ನನ್ನ ಕೈಮೇಲಿನಿಂದ ಹೋಯಿತು. ಅದರಿಂದಾಗಿ ನನ್ನ ಕೈಗೆ ಪೆಟ್ಟು ಬಿದ್ದು ಬಹಳಷ್ಟು ರಕ್ತಸ್ರಾವ ಆಯಿತು. ನನ್ನ ಈ ಸ್ಥಿತಿ ನೋಡಿ ಅಲ್ಲಿದ್ದವರು ‘ನಾನು ಸತ್ತಿದ್ದೇನೆ’ ಎಂದು ನನ್ನನ್ನು ಪೋಸ್ಟ್‌ಮಾರ್ಟಮ್‌ಗೆ ಒಯ್ದರು. ಅಲ್ಲಿ ಶವವಿಚ್ಛೇದನೆ ಮಾಡುವ ಎಲ್ಲ ತಯಾರಿ ಯನ್ನು ಮಾಡಲಾಗಿತ್ತು; ಅಷ್ಟರಲ್ಲಿ ನನ್ನ ಬಲಗಾಲಿನ ಬೆರಳು ಗಳು ಅಲುಗಾಡಿದವು. ತದನಂತರ ತಕ್ಷಣವೇ ನನ್ನನ್ನು ಬೆಳಗಾವಿಯ ‘ಕೆ.ಎಲ್.ಇ.’ ಆಸ್ಪತ್ರೆಗೆ ಕರೆದೊಯ್ದರು.
೨. ಆಸ್ಪತ್ರೆಯಲ್ಲಿ ಭರ್ತಿ ಮಾಡುವಾಗ ಎದುರಾದ ತೊಂದರೆಗಳು : ನನ್ನ ಸ್ಥಿತಿಯನ್ನು ನೋಡಿ ಆಸ್ಪತ್ರೆಯ ಅಧಿಕಾರಿಗಳು ೨ ಲಕ್ಷ ರೂಪಾಯಿಗಳನ್ನು ಜಮೆ ಮಾಡದೆ ಆಸ್ಪತ್ರೆಗೆ ಸೇರಿಸಲು ಮುಂದಾಗಲಿಲ್ಲ. ನನ್ನ ತಂದೆಯವರು ಕಷ್ಟಪಟ್ಟು ಹಣವನ್ನು ಸಂಗ್ರಹಿಸಲು ಬಹಳ ಪ್ರಯತ್ನಿಸಿದರು; ಏಕೆಂದರೆ ಆಗ ನೋಟುನಿಷೇಧ ಇತ್ತು. ತಂದೆಯವರು ಹೇಗೋ ೨ ಲಕ್ಷ ರೂಪಾಯಿ ಜಮೆ ಮಾಡಿ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಅದರ ನಂತರ ನನ್ನ ಚಿಕಿತ್ಸೆ ಪ್ರಾರಂಭವಾಯಿತು.
೩. ಆಸ್ಪತ್ರೆಗೆ ದಾಖಲಾದ ಬಳಿಕ ನಡೆದ ಘಟನಾವಳಿಗಳು
೩ ಅ. ಆಧುನಿಕ ವೈದ್ಯರು ನಾನು ಬದುಕುವ ಖಾತರಿಯನ್ನು ಕೊಡದೇ ಇರುವುದು : ಆಧುನಿಕ ವೈದ್ಯರು ನಾನು ಬದುಕುವ ಖಾತರಿ ಕೊಡುತ್ತಿರಲಿಲ್ಲ. ಅವರು ‘ಅವಳ ಜೀವ ಹೋಗಬಹುದು ಅಥವಾ ಅವಳ ಕೈಯನ್ನಾದರೂ ಕತ್ತರಿಸಬೇಕಾಗುವುದು’ ಎಂದು ಹೇಳಿದರು. ಆಗ ನನ್ನ ತಂದೆ, ಅವರಿಗೆ ‘ಹುಡುಗಿಯ ಕೈ ಹೋದರೂ ನಡೆದೀತು; ಆದರೆ ನನ್ನ ಮಗಳು ಬದುಕುಳಿಯಬೇಕು’ ಎಂದು ಹೇಳಿದರು. ತಂದೆ ಹೀಗೆ ಹೇಳಿದ ಬಳಿಕ ಆಧುನಿಕ ವೈದ್ಯರು ನನಗೆ ಚಿಕಿತ್ಸೆ ಕೊಡಲು ಪ್ರಾರಂಭಿಸಿದರು.
೩ ಆ. ನನ್ನ ರಕ್ತದ ಗುಂಪಿನ (ಬ್ಲಡ್ ಗ್ರೂಪ್‌ನ) ರಕ್ತವು ಎಲ್ಲಿಯೂ ಸಿಗುತ್ತಿರಲಿಲ್ಲ. ಅದರಿಂದಾಗಿ ಮನೆಯವರಿಗೆ ಓಡಾಡಬೇಕಾಯಿತು.
೩ ಇ. ರಕ್ತವನ್ನು ನೀಡಿದ ಬಳಿಕವೂ ನಾನು ೩೫ ದಿನಗಳ ಕಾಲ ಪ್ರಜ್ಞಾಹೀನ (ಕೋಮಾ) ಸ್ಥಿತಿಯಲ್ಲಿಯೇ ಇದ್ದೆ. ೩೫ ದಿನಗಳ ನಂತರ ನನಗೆ ಪ್ರಜ್ಞೆ ಬಂದಿತು.
೩ ಈ. ‘ಸಾಧಕಿಯು ಭಗವಾನ ಶ್ರೀಕೃಷ್ಣನನ್ನು ಕರೆಯುತ್ತಿದ್ದಾಳೆ’, ಎಂದು ತಿಳಿದ ಬಳಿಕ ಆಧುನಿಕ ವೈದ್ಯರು ‘ಶ್ರೀಕೃಷ್ಣನೇ ಅವಳನ್ನು ಬದುಕಿಸಿದ್ದಾನೆ’ ಎಂದು ಹೇಳುವುದು : ನನಗೆ ಬಹಳ ತೊಂದರೆ ಆಗುತ್ತಿತ್ತು. ನಾನು ಎಲ್ಲಿದ್ದೇನೆ ಎಂಬುದು ನನಗೆ ತಿಳಿಯುತ್ತಿರ ಲಿಲ್ಲ. ನಾನು ನಿರಂತರವಾಗಿ ಶ್ರೀಕೃಷ್ಣನನ್ನು ಕರೆಯುತ್ತಿದ್ದೆ ಮತ್ತು ನನ್ನ ತೊಂದರೆಗಳನ್ನು ಶ್ರೀಕೃಷ್ಣನಿಗೆ ಹೇಳುತ್ತಿದ್ದೆ. ಆಧುನಿಕ ವೈದ್ಯರು ನಾನು ಕೃಷ್ಣನನ್ನು ಕರೆಯುತ್ತಿರುವುದನ್ನು ಕೇಳಿ ನಮ್ಮ ಮನೆಯ ಜನರಿಗೆ ‘ಈ ಕೃಷ್ಣ ಯಾರು ? ಅವನನ್ನು ಆದಷ್ಟು ಬೇಗನೆ ಅವಳ ಬಳಿಗೆ ಕರೆದುಕೊಂಡು ಬನ್ನಿ’ ಎಂದು ಹೇಳಿದರು. ಆಗ ತಂದೆಯವರು ವೈದ್ಯರಿಗೆ ‘ಅವನು ಭಗವಾನ ಶ್ರೀಕೃಷ್ಣನಾಗಿದ್ದಾನೆ. ಅವಳು ಅವನ ಭಕ್ತಿಯನ್ನು ಮಾಡುತ್ತಾಳೆ; ಆದ್ದರಿಂದ ಅವಳು ಅವನನ್ನು ಕರೆಯುತ್ತಿದ್ದಾಳೆ” ಎಂದು ಹೇಳಿದರು. ಇದನ್ನು ಕೇಳಿದ ಆಧುನಿಕ ವೈದ್ಯರು ತಂದೆಗೆ ”ಶ್ರೀಕೃಷ್ಣನೇ ಅವಳನ್ನು ರಕ್ಷಿಸಿದ್ದಾನೆ. ನನ್ನ ಕೈಯಲ್ಲಿ ಏನೂ ಇರಲಿಲ್ಲ’’ ಎಂದು ಹೇಳಿದರು.
೩ ಉ. ತಲೆಯ ಎಡಭಾಗಕ್ಕೆ ಪೆಟ್ಟು ಬಿದ್ದಿದ್ದರಿಂದ ಎಡಬದಿಯ ಕಣ್ಣು ಕಾಣಿಸಲಾರದು; ಹಾಗೆಯೇ ‘ಮಾನಸಿಕ ತೊಂದರೆಗಳಿಗೆ ಅವಳು ಯಾವಾಗಲೂ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಆಧುನಿಕ ವೈದ್ಯರೊಬ್ಬರು ಹೇಳುವುದು : ಆಧುನಿಕ ವೈದ್ಯರು ನನ್ನ ಶರೀರದ ಪೂರ್ಣ ಪರೀಕ್ಷೆ ಮಾಡಿ, ‘ಇವಳ ತಲೆಗೆ ಬಹಳ ಪೆಟ್ಟಾಗಿದ್ದರಿಂದ ಅವಳು ೩೫ ದಿನ ಪ್ರಜ್ಞಾಹೀನಳಾಗಿದ್ದಳು’ ಎಂದು ಹೇಳಿದರು. ನಂತರ ನನ್ನ ತಲೆಯ ‘ಸ್ಕ್ಯಾನಿಂಗ್’ ಮಾಡಲು ನನ್ನ ತಲೆಯ ಮೇಲಿನ ಎಲ್ಲ ಕೂದಲುಗಳನ್ನು ತೆಗೆದಿದ್ದರು. ಆಧುನಿಕ ವೈದ್ಯರು ‘ಇವಳ ತಲೆಯ ಎಡಭಾಗಕ್ಕೆ ಪೆಟ್ಟು ಬಿದ್ದಿರುವುದರಿಂದ ಅವಳ ಎಡಬದಿಯ ಕಣ್ಣು ಕಾಣಿಸಲಾರದು, ಹಾಗೆಯೇ ಅವಳಿಗೆ ಮಾನಸಿಕ ತೊಂದರೆಗಳ ನಿವಾರಣೆಗಾಗಿ ಪ್ರತಿದಿನ ಮಾತ್ರೆಗಳನ್ನು ಸೇವಿಸಬೇಕಾಗುವುದು’ ಎಂದು ಹೇಳಿದರು. ನಂತರ ನನ್ನನ್ನು ಮನೆಗೆ ಕರೆತಂದರು.
೪. ‘ತಲೆಯ ಮೇಲೆ ಕೂದಲಿಲ್ಲ ಮತ್ತು ಒಂದು ಕೈ ಇಲ್ಲ’ ಎಂದು ತಿಳಿದಾಗ ನನಗೆ ತುಂಬಾ ದುಃಖವಾಗುವುದು : ಒಂದು ಕೈ ಇಲ್ಲ ಎಂದು ನನಗೆ ತಿಳಿದಿರಲಿಲ್ಲ. ನಾನು ನನ್ನ ತಾಯಿಗೆ ‘ನನ್ನ ಕೈಯನ್ನು ಏಕೆ ಕಟ್ಟಿದ್ದಾರೆ ? ಅದನ್ನು ಬಿಡಿಸಿ’ ಎಂದು ಹೇಳುತ್ತಿದ್ದೆ. ಆದರೆ ಅವಳು ನನಗೆ ಏನನ್ನೂ ಹೇಳುತ್ತಿರಲಿಲ್ಲ. ಅವಳೇ ಅಳುತ್ತಿದ್ದಳು. ಆಮೇಲೆ ನನಗೆ ಜನರ ಮಾತು ಸ್ವಲ್ಪ ಸ್ವಲ್ಪ ಅರ್ಥವಾಗತೊಡಗಿತು. ನಾನು ಕನ್ನಡಿಯಲ್ಲಿ ನೋಡಿದೆ. ಆಗ ‘ನನಗೆ ಕೈಯಿಲ್ಲ’ ಎಂಬುದು ತಿಳಿಯಿತು. ನನಗೆ ತುಂಬಾ ದುಃಖವಾಯಿತು. ನನ್ನ ತಲೆಯ ಮೇಲೆ ಕೂದಲು ಇಲ್ಲ. ಕೈ ಇಲ್ಲ, ಇದರಿಂದಾಗಿ ನಾನು ಒಂದೇ ಸಮನೆ ಅಳುತ್ತಿದ್ದೆ. ನಾನು ಹೊರಗೆ ಎಲ್ಲಿಯೂ ಹೋಗದೆ ಯಾವಾಗಲೂ ಮನೆಯಲ್ಲೇ ಇರುತ್ತಿದ್ದೆ.
೫. ಸಾಧಕರು ಮನೆಗೆ ಬಂದು ಕುಟುಂಬದವರಿಗೆ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡಲು ಹೇಳುವುದು ಮತ್ತು ಅವರೂ ಉಪಾಯಗಳನ್ನು ಮಾಡುವುದು : ನನಗೆ ಅಪಘಾತವಾದ ಸ್ಥಳದಲ್ಲಿ ಅನೇಕ ಜನರು ಅಪಘಾತದಲ್ಲಿ ಮರಣ ಹೊಂದಿದ್ದಾರೆ. ತಲೆಗೆ ಪೆಟ್ಟಾದ ಕಾರಣ ನಾನು ಹಗಲು ರಾತ್ರಿ ಬಡಬಡಿಸುತ್ತಿದ್ದೆ ಮತ್ತು ಕಿರುಚುತ್ತಿದ್ದೆ. ಇದರಿಂದ ಕುಟುಂಬದವರಿಗೆ ಬಹಳ ತೊಂದರೆಯಾಗುತ್ತಿತ್ತು. ಹಾಗಾಗಿ ನನಗೆ ನಿದ್ರೆಯ ಚುಚ್ಚುಮದ್ದನ್ನು (ಇಂಜೆಕ್ಷನ್) ಕೊಡುತ್ತಿದ್ದರು. ನನಗಾಗಿ, ಸಾಧಕರು ಮನೆಗೆ ಬಂದು ಕುಟುಂಬದ ಸದಸ್ಯರಿಗೆ ನಾಮಜಪ ಉಪಾಯಗಳನ್ನು ಹೇಳಿದರು. ಅವರೂ ಸ್ವತಃ ನಾಮಜಪ ಉಪಾಯಗಳನ್ನು ಮಾಡಿದರು.
ಇದರಿಂದ ನನ್ನ ತೊಂದರೆ ಕ್ರಮೇಣ ಕಡಿಮೆ ಆಯಿತು.
೬. ಸಮಷ್ಟಿ ಸೇವೆಯ ಆರಂಭ
೬ ಅ. ನನ್ನ ಬಳಿ ಮೊಬೈಲ್ ಇರಲಿಲ್ಲ; ಹಾಗಾಗಿ ತಂದೆಯವರು ನನಗೆ ಒಂದು ಮೊಬೈಲ್ ತಂದು ಕೊಟ್ಟರು. ಇದರಿಂದ ನಾನು ಸಾಧಕರನ್ನು ಸೇವೆಗಾಗಿ ಸಂಪರ್ಕಿಸುವ ಸೇವೆಯನ್ನು ಮಾಡಲು ಪ್ರಾರಂಭಿಸಿದೆ.
೬ ಆ. ‘ಸಾಧನೆಯನ್ನು ಮಾಡಲು ನಿರ್ಧರಿಸಿದ ಮೇಲೆ ತಲೆಯ ಮೇಲೆ ಕೂದಲು ಇಲ್ಲ ಎಂದೇಕೆ ನಾಚಿಕೆ ಪಡಬೇಕು ?’ಎಂದು ವಿಚಾರ ಮಾಡಿ ನಾನು ಸತ್ಸಂಗಕ್ಕೆ ಮತ್ತು ಸೇವೆಯನ್ನು ಮಾಡಲು ಹೋಗತೊಡಗಿದೆ ಪರಾತ್ಪರ ಗುರು ಡಾಕ್ಟರರೇ ನನ್ನನ್ನು ಈ ಅಪಘಾತದಿಂದ ರಕ್ಷಿಸಿದ್ದಾರೆ. ನಾನೀಗ ಸಾಧನೆಯನ್ನೇ ಮಾಡ ಬೇಕೆಂದು ನಿರ್ಧರಿಸಿ ಸ್ಥಿರವಾಗಿದ್ದು, ವ್ಯಷ್ಟಿ ಸಾಧನೆಯನ್ನು ಮಾಡಲು ಪ್ರಾರಂಭಿಸಿದೆನು.
ನನ್ನ ದುಃಖವನ್ನು ಕಡಿಮೆ ಮಾಡಲು ಸಾಧಕರು ನನಗೆ ‘ಸತ್ಸಂಗಕ್ಕೆ ಮತ್ತು ಸೇವೆಗೆ ಬರುವಂತೆ’ ಹೇಳಿದರು. ಹಾಗಾಗಿ ನಾನು ಅವರೊಂದಿಗೆ ಹೋಗಲು ಪ್ರಾರಂಭಿಸಿದೆ. ನನ್ನ ತಲೆಯ ಮೇಲೆ ಕೂದಲು ಇರಲಿಲ್ಲ ಮತ್ತು ನನಗೆ ಒಂದು ಕೈ ಇರಲಿಲ್ಲ. ಇದರಿಂದ ನನಗೆ ಸೇವೆಗೆ ಹೊರಗಡೆ ಹೋಗಲು ನಾಚಿಕೆ ಅನಿಸುತ್ತಿತ್ತು. ಆಗ, ಗುರುದೇವರ ಕೃಪೆಯಿಂದ, ನನ್ನ ಮನಸ್ಸಿನಲ್ಲಿ ‘ಏಕೆ ನಾಚಿಕೆ ಪಡಬೇಕು ? ನನಗೆ ಸಾಧನೆ ಮಾಡುವುದಿದೆಯಲ್ಲ ? ಎಂದು ವಿಚಾರ ಬಂದಿತು. ಇದರಿಂದ ನಾನು ನಾಚಿಕೆ ಪಡದೇ ಸೇವೆಗೆ ಹೊರಗಡೆ ಹೋಗತೊಡಗಿದೆ.
೬ ಇ. ಗುರುದೇವರ ಕೃಪೆಯಿಂದ ನನಗೆ ಸಾಧಕರ ಸಮನ್ವಯವನ್ನು ಮಾಡುವ ಜವಾಬ್ದಾರಿ ಸಿಕ್ಕಿತು.
೬ ಈ. ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಸ್ಥಳದಲ್ಲಿ ಸೇವೆ ಯನ್ನು ಮಾಡುವುದು : ೧೫.೨.೨೦೨೩ ರ ನಂತರ ಹಿಂದೂ ರಾಷ್ಟ್ರ-ಜಾಗೃತಿ ಸಭೆ ಇತ್ತು. ನನಗೆ ಬೇರೆ ಊರಿಗೆ ಹೋಗಿ ಸಭೆಯ ಸಂದರ್ಭದಲ್ಲಿ ಸೇವೆಯನ್ನು ಮಾಡುವ ಜವಾಬ್ದಾರಿ ಯನ್ನು ನೀಡಿದ್ದರು. ಆದರೆ ನನಗೆ ಅದನ್ನು ಸ್ವೀಕರಿಸಲು ಆಗುತ್ತಿರಲಿಲ್ಲ. ಆಗ ನಾನು ಜವಾಬ್ದಾರ ಸಾಧಕರಿಗೆ, ‘ನಾನು ಒಂದೇ ಸೇವೆಯನ್ನು ಮಾಡಬಲ್ಲೆ’ ಎಂದು ಹೇಳಿದೆನು. ನಂತರ ಜವಾಬ್ದಾರ ಸಾಧಕರು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು ಮತ್ತು ನನಗೆ ಎರಡೂ ಸೇವೆಗಳನ್ನು ನೀಡಿದರು. ಗುರುದೇವರು ನನ್ನಲ್ಲಿ ಸಾಮರ್ಥ್ಯವಿಲ್ಲದಿರುವಾಗಲೂ ನನ್ನಿಂದ ಎರಡೂ ಸೇವೆಗಳನ್ನು ಮಾಡಿಸಿಕೊಂಡರು. ಅದಕ್ಕಾಗಿ ನನಗೆ ಬಹಳ ಕೃತಜ್ಞತೆ ಅನಿಸಿತು.
೬ ಉ. ಆಶ್ರಮದಲ್ಲಿ ಉಳಿದುಕೊಂಡು ಸೇವೆಯನ್ನು ಮಾಡುವುದು : ನನಗೆ ಸನಾತನದ ಗೋವಾದಲ್ಲಿರುವ ರಾಮನಾಥಿ ಆಶ್ರಮದಲ್ಲಿ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿತು. ನಾನು ಆಶ್ರಮದಲ್ಲಿ ಬಹಳಷ್ಟು ಕಲಿತೆನು. ಗುರುದೇವರ ಕೃಪೆಯಿಂದ ನನಗೆ ಸಾಧನೆ ಮಾಡುವಾಗ ಯಾವುದೇ ಅಡಚಣೆಯಾಗಲಿಲ್ಲ. ‘ಎಲ್ಲವನ್ನೂ ಗುರುದೇವರೇ ಮಾಡಿಸಿಕೊಳ್ಳುತ್ತಾರೆ’ ಎಂದು ನನಗೆ ದೃಢವಾದ ಶ್ರದ್ಧೆಯಿದೆ.
೭. ಸಾಧನೆಯಿಂದ ಆನಂದದಿಂದ ಇರಲು ಬರುವುದು : ಇಷ್ಟೆಲ್ಲ ನಡೆದರೂ ನಾನೀಗ ಯಾವಾಗಲೂ ಆನಂದ ದಿಂದ ಇರುತ್ತೇನೆ. ನನಗೆ ಈಗ ಯಾವುದರ ಬಗ್ಗೆಯೂ ದುಃಖವೆನಿಸುವುದಿಲ್ಲ. ಇತರ ಸಾಧಕರು ನನಗೆ, ‘ನೀನು ಇಷ್ಟು ಆನಂದದಿಂದ ಹೇಗೆ ಇರುತ್ತೀಯಾ ? ನಿನ್ನ ಮುಖ ನೋಡಿ ದಾಗ ನಮಗೂ ಆನಂದವೆನಿಸುತ್ತದೆ’ ಎಂದು ಕೇಳುತ್ತಾರೆ.
೮. ಗುರುಕೃಪೆಯಿಂದ ಆಯುಷ್ಯವಿಡೀ ತೆಗೆದುಕೊಳ್ಳಬೇಕಾದ ಮಾತ್ರೆಗಳನ್ನು ತೆಗೆದುಕೊಳ್ಳುವ ಆವಶ್ಯಕತೆ ಉಳಿಯಲಿಲ್ಲ : ಆಧುನಿಕ ವೈದ್ಯರು ನನಗೆ ನಿಯಮಿತ ತೆಗೆದುಕೊಳ್ಳುವಂತೆ ಹೇಳಿದ ಮಾತ್ರೆಗಳನ್ನು ಕೂಡ ನಾನೀಗ ತೆಗೆದುಕೊಳ್ಳುವುದಿಲ್ಲ. ಇದೆಲ್ಲವೂ ಗುರುಗಳ ಕೃಪೆಯಿಂದಲೇ ಆಗುತ್ತಿದೆ. ಇದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಶರಣಾಗತಿಯಿಂದ ಕೃತಜ್ಞತೆ ಯನ್ನು ವ್ಯಕ್ತಪಡಿಸುತ್ತೇನೆ.
ಗುರುದೇವರು ನನ್ನನ್ನು ಇಷ್ಟು ಕಠಿಣ ಪ್ರಸಂಗದಲ್ಲಿ ಬದುಕಿಸಿದರು. ನನಗೆ ಸಾಧನೆಯನ್ನು ಕಲಿಸಿದರು ಮತ್ತು ನನ್ನನ್ನು ಇಲ್ಲಿಯವರೆಗೆ ತಂದರು. ಇದಕ್ಕಾಗಿ ನಾನು ಗುರುದೇವರಿಗೆ ಕೃತಜ್ಞಳಾಗಿದ್ದೇನೆ. ಇನ್ನುಮುಂದೆ ಪ್ರತಿಯೊಂದು ಕಾರ್ಯವನ್ನು ಮಾಡುವಾಗ ನನಗೆ ಗುರುದೇವರ ಸ್ಮರಣೆ ಇರಲಿ. ‘ಗುರುದೇವಾ ನನಗೆ ನಿಮ್ಮ ಚರಣಗಳಲ್ಲಿಯೇ ಇರಲು ಸಾಧ್ಯವಾಗಲಿ. ನಮಗೆ ಪ್ರತಿಕ್ಷಣ ನಿಮ್ಮ ಅಸ್ತಿತ್ವವನ್ನು ಅನುಭವಿಸಲು ಸಾಧ್ಯವಾಗಲಿ’ ಇದೇ ನಿಮ್ಮ ಕೋಮಲ ಚರಣಗಳಲ್ಲಿ ಪ್ರಾರ್ಥನೆ’.
– ಕು. ವೈಶಾಲಿ ನಾಗೇಶ ಗಾವಡಾ (ವಯಸ್ಸು ೨೩ ವರ್ಷ), ಖಾನಾಪುರ, ಬೆಳಗಾವಿ ಜಿಲ್ಲೆ. (೨೨.೫.೨೦೨೩)