
ಬಡೋದಾ (ಗುಜರಾತ್) – ಪರಿಪೂರ್ಣ ಸೇವೆ ಮಾಡುವುದು, ಪ್ರೀತಿ ಇತ್ಯಾದಿ ಗುಣಗಳ ಭಂಡಾರ ಇರುವ ಹಾಗೂ ನಿರಂತರ ಈಶ್ವರನ ಅನುಸಂಧಾನದಲ್ಲಿರುವ ಬಡೊದಾದ ಸನಾತನದ ಸಾಧಕ ಶ್ರೀ. ಶ್ರೀಪಾದ ಹರ್ಷೆ (ವಯಸ್ಸು ೮೯) ಇವರು ಸನಾತನದ ೧೨೭ ನೇ ಸಂತ ಪದವಿಯಲ್ಲಿ ಆರೂಢರಾದರು. ಅಕ್ಟೊಬರ್ ೧೧ ರಂದು ಬಡೊದಾದ ಸನಾತನದ ಸಾಧಕಿ ಸೌ. ಅಂಶೂ ಸಂತ ಇವರ ನಿವಾಸಸ್ಥಾನದಲ್ಲಿ ಚೈತನ್ಯಮಯ ವಾತಾವರಣದಲ್ಲಿ
ಪೂ. ಹರ್ಷೆ ಅಜ್ಜ ಹಾಗೂ ಶ್ರೀ. ಶೀಲಾ ಅಜ್ಜಿಯೊಂದಿಗೆ ಅನೌಪಚಾರಿಕ ಚರ್ಚೆ ನಡೆಸುವಾಗ ಸನಾತನದ ಧರ್ಮಪ್ರಸಾರಕಿ ಸದ್ಗುರು ಅನುರಾಧಾ ವಾಡೆಕರ ಇವರು ಪೂ. ಹರ್ಷೆ ಅಜ್ಜ ಇವರು ಸಂತ ಪದವಿಯಲ್ಲಿ ಆರೂಢರಾಗಿರುವ ಗುಟ್ಟನ್ನು ಬಹಿರಂಗ ಪಡಿಸಿದರು. ಸದ್ಗುರು ಅನುರಾಧಾ ವಾಡೆಕರ ಇವರು ಅವರ ಸನ್ಮಾನ ಮಾಡಿದರು. ಈ ಸಮಯದಲ್ಲಿ ಸನಾತನದ ಸಂತ ಪೂ. (ಸೌ.) ಸಂಗೀತಾ ಜಾಧವ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಈ ಸಮಯದಲ್ಲಿ ಪೂ. ಹರ್ಷೆ ಅಜ್ಜ ಇವರ ಕುಟುಂಬದವರೂ ಉಪಸ್ಥಿತರಿದ್ದರು. ಈ ಆನಂದವಾರ್ತೆ ಕೇಳಿದ ನಂತರ ನೆರೆದಿದ್ದ ಕುಟುಂಬದವರೆಲ್ಲರ ಆನಂದ ಮುಗಿಲು ಮುಟ್ಟಿತು.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !