ಗಾಜಿಯಾಬಾದ (ಉತ್ತರಪ್ರದೇಶ ) ಇಲ್ಲಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಜೈ ಶ್ರೀರಾಮ’ ಘೋಷಣೆ ನೀಡುವ ವಿದ್ಯಾರ್ಥಿಗಳನ್ನು ತಡೆದ ಶಿಕ್ಷಕಿ !

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿಯ ಎ.ಬಿ.ಎಸ್.ಈ. ಇಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಹಾಡಿನ ಪ್ರಸ್ತುತ ಪಡಿಸುವ ಮೊದಲು ‘ಜೈ ಶ್ರೀರಾಮ’ ಎಂದು ಘೋಷಣೆ ನೀಡಿದರು. ಅದಕ್ಕೆ ವ್ಯಾಸಪೀಠದಲ್ಲಿನ ಇತರ ವಿದ್ಯಾರ್ಥಿಗಳು ‘ಜೈ ಶ್ರೀರಾಮ’ ಎಂದು ಪ್ರತಿಸಾದ ನೀಡಿದರು. ಇದಕ್ಕೆ ಓರ್ವ ಶಿಕ್ಷಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಮಹಾವಿದ್ಯಾಲಯದ ಹೊರಗೆ ಬೃಹತ್ ಪೊಲೀಸ ಬಂದೋಬಸ್ತ ಮಾಡಲಾಯಿತು. ಸಂಬಂಧಿತ ಶಿಕ್ಷಕಿಗೆ ಕೆಲಸದಿಂದ ಅಮಾನತುಗೊಳಿಸುವ ಬೇಡಿಕೆ ಕೂಡ ಸಲ್ಲಿಸಲಾಯಿತು.

೧. ‘ಜೈ ಶ್ರೀರಾಮ’ನ ಘೋಷಣೆ ನೀಡಿದ ನಂತರ ಶಿಕ್ಷಕಿ, ”ನೀವು ಇಲ್ಲಿ ಘೋಷಣೆ ನೀಡುವುದಕ್ಕಾಗಿ ಬಂದಿಲ್ಲ. ಇದು ಕಾಲೇಜಿನ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈಗ ನೀವು ಇಲ್ಲಿ ಹಾಡು ಹೇಳಬಾರದು.” ಎಂದು ಹೇಳಿದರು.

೨. ಇದೇ ಕಾರ್ಯಕ್ರಮದ ಇತರ ವಿಡಿಯೋ ಪ್ರಸಾರಿತವಾಗುತ್ತಿವೆ. ಅದರಲ್ಲಿ ಈ ಶಿಕ್ಷಕಿ, ‘ನಾವೆಲ್ಲರೂ ಇಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಬಂದಿದ್ದೇವೆ; ಹಾಗಾದರೆ ಇಲ್ಲಿ ‘ಜೈ ಶ್ರೀರಾಮ’ನ ಘೋಷಣೆ ಏಕೆ ನೀಡಲಾಗುತ್ತಿದೆ ? ಇದಕ್ಕೆ ಅರ್ಥವೇ ಇಲ್ಲ. ನೀವು ಶಿಸ್ತನ್ನು ಪಾಲಿಸಿರಿ. ನೀವು ಶಿಸ್ತಿನಿಂದ ವರ್ತಿಸಿದಾಗಲೇ ಈ ಕಾರ್ಯಕ್ರಮ ಆರಂಭವಾಗುವುದು. ಇಲ್ಲವಾದರೆ ನಾವು ಭವಿಷ್ಯದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುವುದಿಲ್ಲ. ನೀವು ಒಂದು ಒಳ್ಳೆಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವಿರಿ. ಹಾಗಾದರೆ ನಿಮ್ಮ ವರ್ತನೆ ಕೂಡ ಒಳ್ಳೆಯದಾಗಿರಬೇಕು.’ ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಜೈ ಶ್ರೀರಾಮ’ ಘೋಷಣೆ ನೀಡುವುದರಿಂದ ಯಾವ ಹಾನಿ ಆಗುತ್ತದೆ ?’, ಇದು ಯಾರಾದರೂ ಹೇಳುವವರೇ ? ದೇಶದ ಪ್ರತಿಯೊಬ್ಬರೂ ಶ್ರೀ ರಾಮನ ಜೀವನದ ಆದರ್ಶ ಪಡೆಯಬೇಕು, ಹೀಗಿರುವಾಗ ಅವರ ಹೆಸರಿಗೂ ಕೂಡ ವಿರೋಧ ಮಾಡುವುದು ಲಜ್ಜಾಸ್ಪದ !