ಸರ್ವೋಚ್ಚ ನ್ಯಾಯಾಲಯದಿಂದ ಎಲ್ಲಾ ರಾಜ್ಯಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ
ನವ ದೆಹಲಿ – ‘ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಸಿ.ಪಿ.ಐ.) ಈ ರಾಜಕೀಯ ಪಕ್ಷದ ಮಹಿಳಾ ಶಾಖೆಯ ‘ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮನ್’ ನಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದೆ. ಇದರಲ್ಲಿ ಗೋರಕ್ಷಕರಿಂದ ಮುಸಲ್ಮಾನರ ಮೇಲೆ ದಾಳಿ ಮಾಡಲಾಗಿರುವುದು ಎಂದು ದಾವೇ ಮಾಡಲಾಗಿದೆ. ಈ ಶಾಖೆಯ ವತಿಯಿಂದ ಹಿರಿಯ ನ್ಯಾಯವಾದಿ ಕಪಿಲ್ ಸಿಬ್ಬಲ್ ಇವರು ಪಕ್ಷ ಮಂಡಿಸಿದರು. ಈ ಸಮಯದಲ್ಲಿ ಸಿಬ್ಬಲ್ ಇವರು ಸರ್ವೋಚ್ಚ ನ್ಯಾಯಾಲಯಕ್ಕೆ ‘ಗೋರಕ್ಷಕರಿಂದ ಗೋಮಾಂಸ ಮತ್ತು ಕರುಗಳನ್ನು ಸಾಗಾಣಿಕೆ ಮಾಡುವ ಮುಸಲ್ಮಾನರಿಗೆ ಥಳಿಸಲಾಗುತ್ತಿದೆ’, ಎಂದು ಹೇಳಿದರು. ಆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಎಲ್ಲಾ ರಾಜ್ಯಗಳಿಗೆ ನೋಟಿಸ್ ಕಳಿಸಲಾಗಿದೆ. ಈ ಹಿಂದೆ ಕೂಡ ನ್ಯಾಯಾಲಯದಿಂದ ನೋಟಿಸ್ ಕಳುಹಿಸಲಾಗಿತ್ತು. ಇದರಲ್ಲಿ ರಾಜ್ಯಗಳಿಗೆ ದ್ವೇಷಪೂರಿತ ಅಪರಾಧದ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ಕೂಡ ನೀಡಲಾಗಿದೆ.
ಸಂಪಾದಕೀಯ ನಿಲುವುಗೋ ಕಳ್ಳಸಾಗಾಣಿಕೆದಾರದಿಂದ ನಡೆಯುವ ಕಾನೂನ ಬಾಹಿರ ಗೋಹತ್ಯೆ ತಡೆಯುವ ಕಾರ್ಯ ಗೋರಕ್ಷಕರು ಮಾಡುತ್ತಾರೆ ! ಈ ಸಮಯದಲ್ಲಿ ಮತಾಂಧ ಕಟುಕರು ಗೋರಕ್ಷಕರನ್ನು ಥಳಿಸುತ್ತಾರೆ, ಗುಂಡಿನ ದಾಳಿ ಮಾಡುತ್ತಾರೆ, ಗೋವುಗಳನ್ನು ಚಲಿಸುವ ವಾಹನದಿಂದ ರಸ್ತೆಗೆ ಎಸೆಯುತ್ತಾರೆ. ಈ ರೀತಿಯ ಘಟನೆಗಳು ಘಟಿಸುತ್ತಿವೆ. ಈ ಘಟನೆ ಕಮ್ಯುನಿಸ್ಟ್ ಪಕ್ಷಕ್ಕೆ ಕಾಣುವುದಿಲ್ಲ; ಕಾರಣ ಅದು ಹಿಂದೂದ್ವೇಷದಿಂದ ಕಿವುಡು ಮತ್ತು ಕುರುಡಾಗಿದೆ. ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಇದ್ದರೂ ಕೂಡ ಗೋಕಳ್ಳ ಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಯಾವುದೇ ರಾಜಕೀಯ ಪಕ್ಷ ಎಂದು ನ್ಯಾಯಾಲಯಕ್ಕೆ ಹೋಗುವುದಿಲ್ಲ ಇದನ್ನು ತಿಳಿದುಕೊಳ್ಳಿ ! |