ಪೇಶಾವರನಲ್ಲಿ ಪಾಕಿಸ್ತಾನಿ ವೀಕ್ಷಕರು ನನ್ನ ಮೇಲೆ ಮೊಳೆಗಳನ್ನು ಎಸೆದಿದ್ದರು ! – ಇರ್ಫಾನ್ ಪಠಾಣ, ಮಾಜಿ ಕ್ರಿಕೆಟ ಪಟು 

ಪುಣೆ – ಭಾರತಾದ ಮಾಜಿ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಇವರು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. `ಪಾಕಿಸ್ತಾನದ ಪೇಶಾವರದಲ್ಲಿ ಆಟವಾಡುವಾಗ ಪಾಕಿಸ್ತಾನಿ ಪ್ರೇಕ್ಷಕರು ನನ್ನ ಮೇಲೆ ಮೊಳೆಗಳನ್ನು ಎಸೆದಿದ್ದರು. ಈ ಮೊಳೆ ನನ್ನ ಕಣ್ಣಿನ ಕೆಳಗೆ ತಗುಲಿತ್ತು’ ಎಂದು ಅವರು ಹೇಳಿದರು. ಅಕ್ಟೋಬರ್ 19, 2023 ರಂದು ಪುಣೆಯಲ್ಲಿ ನಡೆದ  ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಪಠಾಣ ಇವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಈ ಸಮಯದಲ್ಲಿ ಪಠಾಣ ಇವರು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಭಾರತೀಯ ಅಭಿಮಾನಿಗಳ ಬಗ್ಗೆ ದೂರು ನೀಡುವ ಮೊದಲು ಅವರ ನಡವಳಿಕೆಯನ್ನು ಗಮನಿಸಬೇಕು ಎಂದು ಪಠಾಣ್ ಹೇಳಿದ್ದಾರೆ. (ಪಾಕಿಸ್ತಾನದ ಈ ನಡುವಳಿಕೆಯೆಂದರೆ ಕಾಮಾಲೆ ಕಣ್ಣಿಗೆ ಎಲ್ಲವೂ ಈ ಹೇಳಿಕೆ ನೆನಪಿಗೆ ಬರುತ್ತದೆ – ಸಂಪಾದಕರು)

ಭಾರತ ಏಕದಿನ ವಿಶ್ವಕಪ್ ಆಯೋಜಿಸಿದೆ. ಇದರಡಿಯಲ್ಲಿ ಅಕ್ಟೋಬರ್ 14 ರಂದು ಕರ್ಣಾವತಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯಿತು. ಆ ಸಮಯದಲ್ಲಿ, ಭಾರತವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದ ನಂತರ, ಪಾಕಿಸ್ತಾನವು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ಸಲ್ಲಿಸಿತು. ಇದರಲ್ಲಿ ಪಾಕ್ ಆಟಗಾರರು ಪೆವಿಲಿಯನ್‌ಗೆ ಹಿಂತಿರುಗುತ್ತಿರುವಾಗ ಕೆಲವು ವೀಕ್ಷಕರು  `ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ‘ಈ ಘೋಷಣೆಗಳು ಆಟಗಾರರ ಭಾವನೆಗಳಿಗೆ ಧಕ್ಕೆ ತಂದಿವೆ’, ಎಂದು ಅದರಲ್ಲಿ ಹೇಳಿತ್ತು.

ಸಂಪಾದಕೀಯ ನಿಲುವು

ಭಾರತೀಯ ವೀಕ್ಷಕರನ್ನು ದೂಷಿಸುವವರು ಪಾಕಿಸ್ತಾನ ಮತ್ತು ಭಾರತದಲ್ಲಿರುವ ಪಾಕಿಸ್ತಾನ ಪ್ರೇಮಿಗಳು ಈ ವಿಷಯದಲ್ಲಿ ಏನಾದರೂ ಮಾತನಾಡುವರೇ ?