ಭಕ್ತರು ಭಗವಾ ಧ್ವಜಗಳನ್ನು ಹಚ್ಚಿರುವ ಅಂಗಡಿಗಳಿಗೆ ಮಾತ್ರ ಹೋಗಬೇಕು ! – ವಿಹಿಂಪ

  • ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅಂಗಡಿಗಳನ್ನು ಹಾಕಲು ಅನುಮತಿ ನೀಡುವ ಪ್ರಕರಣ 

  • ಜಿಲ್ಲಾಡಳಿತವು ಕೆಲವು ಮುಸಲ್ಮಾನ ವ್ಯಾಪಾರಿಗಳಿಗೂ ಹರಾಜಿನಲ್ಲಿ ಭಾಗವಹಿಸಲು ಅನುಮತಿ ನೀಡಿದೆ

ಮಂಗಳೂರು – ಇಲ್ಲಿನ ಶ್ರೀ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿರುವ ಎಲ್ಲ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಗವಾ ಧ್ವಜವನ್ನು ಹಚ್ಚಿದ್ದಾರೆ. ಈ ಮೂಲಕ ಭಕ್ತಾದಿಗಳಿಗೆ ‘ಹಿಂದೂಗಳ ಅಂಗಡಿ ಯಾವುದು ?’ ಎಂಬುದು ತಿಳಿಯುತ್ತದೆ. ವಿಶ್ವಹಿಂದೂ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಎಚ್. ಕೆ. ಪುರುಷೋತ್ತಮ ರವರು ಮಾತನಾಡುತ್ತ ಜಿಲ್ಲೆಯ ಎಲ್ಲಾ ದೇವಸ್ಥಾನಗಳು ದೇವಸ್ಥಾನದ ಆವರಣದಲ್ಲಿ ಹಿಂದೂಗಳ ಉತ್ಸವಗಳ ಸಮಯದಲ್ಲಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.

1. ಪುರುಷೋತ್ತಮರವರು ಮುಂದುವರಿದು, ಜಿಲ್ಲಾಡಳಿತವು ಹಿಂದೂಯೇತರರಿಗೆ ಅಂಗಡಿಗಾಗಿ ಜಾಗ ಕೊಡುವುದು ಸರಿಯಲ್ಲ. `ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದತ್ತಿ ಅಧಿನಿಯಮ 1997’ ಕಾಯಿದೆಯ ಅನುಸಾರ, ಅಲ್ಲಿ ಇತರೆ ಸಮುದಾಯದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ ಯಾವುದೇ ಸಾಧ್ಯತೆಯಿಲ್ಲ.

 2. ಮತ್ತೊಂದೆಡೆ ಅಕ್ಟೋಬರ್ 13 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉತ್ಸವ ವರ್ತಕರ ಸಮನ್ವಯ ಸಮಿತಿಯು ಮುಸಲ್ಮಾನ ವ್ಯಾಪಾರಿಗಳನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿತು. ಹಾಗಾಗಿ ಜಿಲ್ಲಾಡಳಿತವು ಕೆಲವು ಮುಸಲ್ಮಾನ ವ್ಯಾಪಾರಿಗಳಿಗೆ ದೇವಸ್ಥಾನದ ಪರಿಸರದಲ್ಲಿ ಅಂಗಡಿಗಳ ಲಿಲಾವಿನಲ್ಲಿ  ಭಾಗವಹಿಸಲು ಅನುಮತಿ ನೀಡಿದೆ.

‘ಡಿ. ವೈ. ಎಫ್‌. ಐ’ ಮುಸಲ್ಮಾನರ ರಾಜಕೀಯ ಪಕ್ಷದ ಅಸೂಯೆ! 

ಜಿಹಾದಿ ಸಂಘಟನೆಯಾದ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ರಾಜಕೀಯ ಪಕ್ಷವಾಗಿರುವ  `ಡಿ. ವೈ. ಎಫ್‌. ಐ’ಯು ವಿಹಿಂಪನ್ನು ವಿರೋಧಿಸುತ್ತ, ವಿಹಿಂಪ ಬಡ ಹಿಂದೂ ಮತ್ತು ಮುಸಲ್ಮಾನ ವ್ಯಾಪಾರಿಗಳ ನಡುವೆ ದ್ವೇಷವನ್ನು ನಿರ್ಮಿಸುತ್ತಿದೆ. ಜಿಲ್ಲಾಡಳಿತವು ಶ್ರೀ ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ವ್ಯಾಪಾರಿಗಳ  ಸುರಕ್ಷೆಗಾಗಿ ಪ್ರಯತ್ನಿಸಬೇಕು, ಎಂದು ಹೇಳಿದೆ.

ಸಂಪಾದಕೀಯ ನಿಲುವು

ಮುಸಲ್ಮಾನರ ಉರುಸ್ ಅಥವಾ ಇತರ ಹಬ್ಬಗಳ ಸಮಯದಲ್ಲಿ ಹಿಂದೂಗಳಿಗೆ ಅಂಗಡಿಯನ್ನು ಹಾಕಲು ಅನುಮತಿ ನೀಡಲಾಗುತ್ತದೆಯೇ? ಇಂತಹ ಹಿಂದೂದ್ರೋಹಿ ನಿರ್ಧಾರವನ್ನು ತೆಗೆದುಕೊಂಡಿರುವ ಮಂಗಳೂರು ಜಿಲ್ಲಾಡಳಿತಕ್ಕೆ ಧಿಕ್ಕಾರ!