ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯ ಅಪಹರಣ, ಮತಾಂತರ ಮತ್ತು ಮುಸಲ್ಮಾನ ಯುವಕನೊಂದಿಗೆ ಬಲವಂತದ ಮದುವೆ ಮಾಡಿರುವ ಪ್ರಕರಣ
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಿರಪೂರಖಾಸನಲ್ಲಿ ರಿಟಾ ಮೇಘವಾರ ಹೆಸರಿನ ಹಿಂದೂ ಹುಡುಗಿಯನ್ನು 2 ತಿಂಗಳ ಹಿಂದೆ ಅವಳ ಮನೆಯಿಂದಲೇ ಅಪಹರಿಸಲಾಗಿತ್ತು. ಮುಸಲ್ಮಾನ ಯುವಕ ಅಹ್ಮದ್ ಅವಳನ್ನು ಅಪಹರಿಸಿದ್ದನು. ನಂತರ ಆಕೆಯನ್ನು ಮತಾಂತರಗೊಳಿಸಿ ಈ ಯುವಕನೊಂದಿಗೆ ವಿವಾಹ ಮಾಡಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಬಳಿಕ ನ್ಯಾಯಾಲಯ ಆಕೆಯನ್ನು ಆಶ್ರಯಧಾಮಕ್ಕೆ ಕಳುಹಿಸಿತ್ತು. ರಿಟಾ ಅವಳು ನ್ಯಾಯಾಲಯಕ್ಕೆ ‘ಈ ಮದುವೆಯಿಂದ ತಾನು ಸಂತೋಷವಾಗಿಲ್ಲವೆಂದು ತಿಳಿಸುತ್ತಾ, ತನ್ನ ಹೆತ್ತವರ ಬಳಿಗೆ ಮರಳಲು ಬಯಸಿರುವುದಾಗಿ’ ತಿಳಿಸಿದಳು; ಆದರೆ ನ್ಯಾಯಾಲಯ ಅದನ್ನು ಸ್ವೀಕರಿಸಲಿಲ್ಲ. ಅವಳು ಮತ್ತೆ ಮತ್ತೆ ನ್ಯಾಯಾಲಯಕ್ಕೆ ಅದನ್ನು ಹೇಳಲು ಪ್ರಯತ್ನಿಸಿದಳು; ಆದರೆ ನ್ಯಾಯಾಲಯ ಅವಳ ಮಾತನ್ನು ಕೇಳಲಿಲ್ಲ. ಈ ಹುಡುಗಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.
(ಸೌಜನ್ಯ – RCM Swabhiman Barat)
ಸಂಪಾದಕೀಯ ನಿಲುವುಪಾಕಿಸ್ತಾನದ ನ್ಯಾಯಾಲಯಗಳೂ ಹಿಂದೂ ದ್ವೇಷಿ ಮತ್ತು ಜಿಹಾದಿ ಮಾನಸಿಕತೆ ಇದೆ ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು ! |