‘ಸಮಷ್ಟಿ ಸಾಧನೆ ಎಂದರೆ ಸಮಾಜದ ಸಾಧನೆ ಮತ್ತು ವ್ಯಷ್ಟಿ ಸಾಧನೆ ಎಂದರೆ ವ್ಯಕ್ತಿಯ ಸಾಧನೆ. ಹಿಂದೆ ಕಾಲಮಹಾತ್ಮೆಯಂತೆ ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಹಾಗೂ ವ್ಯಷ್ಟಿ ಸಾಧನೆಗೆ ಶೇ. ೩೦ ರಷ್ಟು ಮಹತ್ವ ಇತ್ತು; ಆದರೆ ಈಗ ಕಾಲಾನುಸಾರ ಸಮಷ್ಟಿ ಸಾಧನೆಯು ಶೇ. ೬೫ ಹಾಗೂ ವ್ಯಷ್ಟಿ ಸಾಧನೆ ಶೇ. ೩೫ ರಷ್ಟು ಮಹತ್ವದ್ದಾಗಿದೆ. ಸದ್ಯ ಸಮಷ್ಟಿ ಸಾಧನೆ ಮಾಡುವಾಗ ಸಾಧಕರ ಮೇಲೆ ೬ ಮತ್ತು ೭ ನೇ ಪಾತಾಳದಿಂದ ದೊಡ್ಡ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಹಲ್ಲೆ ಮಾಡುತ್ತಿವೆ. ಸಾಧಕರ ವ್ಯಷ್ಟಿ ಸಾಧನೆ, ಅಂದರೆ ‘ನಾಮಜಪ ಮಾಡುವುದು, ಆಧ್ಯಾತ್ಮಿಕ ಸ್ಥರದ ಉಪಾಯ ಮಾಡುವುದು, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುವುದು’ ಇತ್ಯಾದಿಗಳು ಕಡಿಮೆ ಆಗುತ್ತಿರುವುದರಿಂದ ಸಾಧಕರಿಗೆ ಶಾರೀರಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಸ್ಥರದಲ್ಲಿ ಕೆಟ್ಟ ಶಕ್ತಿಗಳ ಹಲ್ಲೆ ಹೆಚ್ಚಾಗುತ್ತಿದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನ ಕಡಿಮೆಯಾಗುತ್ತಿದ್ದರಿಂದ ಕೆಟ್ಟ ಶಕ್ತಿಗಳು ಸಾಧಕರ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಮತ್ತು ನಕಾರಾತ್ಮಕ ವಿಚಾರಗಳನ್ನು ಹೆಚ್ಚಿಸಿ ಅವರ ಸಾಧನೆಯಲ್ಲಿ ಹಾಗೂ ಸೇವೆಯಲ್ಲಿ ಅಡಚಣೆ ತರುತ್ತವೆ. ಆದ್ದರಿಂದ ಸಾಧಕರು ತಮ್ಮ ವ್ಯಷ್ಟಿ ಸಾಧನೆಯನ್ನು ಹೆಚ್ಚಿಸಿ ತಮ್ಮ ಸುತ್ತಲೂ ಸಾಧನೆಯ ರಕ್ಷಣಾ ಕವಚ ನಿರ್ಮಿಸು ವುದು ಆವಶ್ಯಕವಾಗಿದೆ. ವ್ಯಷ್ಟಿ ಸಾಧನೆ ಹೆಚ್ಚಿಸಿದರೆ ಸಾಧಕರ ಆಧ್ಯಾತ್ಮಿಕ ಶಕ್ತಿಯೂ ಹೆಚ್ಚಾಗುವುದು ಹಾಗೂ ಇದರಿಂದ ಕೆಟ್ಟ ಶಕ್ತಿಗಳ ಹಲ್ಲೆಯಿಂದ ರಕ್ಷಣೆಯಾಗಿ ಅವರ ಸಾಧನೆ ಮತ್ತು ಸೇವೆ ಉತ್ತಮ ರೀತಿಯಲ್ಲಿ ಆಗಲು ಸಹಾಯವಾಗುವುದು.’ – (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೨೮.೭.೨೦೨೩)