ಇಸ್ರೇಲ್ ಗೆ ಇರಾನ್ ಬೆದರಿಕೆ !
ತೆಹರಾನ್ (ಇರಾನ್) – ಹಮಾಸ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ. ಇಸ್ರೇಲ್ ಈಗಾಗಲೇ ಗಾಜಾ ಪಟ್ಟಿಗೆ ನೀರು, ವಿದ್ಯುತ್ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಅವರಿಂದ ಸಾವಿರಾರು ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಗಾಜಾ ಪಟ್ಟಿಯ ಮೇಲೆ ಪ್ರತಿ ದಿನ ಹಾರಿಸಲಾಗುತ್ತಿದೆ. ಅದ್ದರಿಂದ ಆಕ್ರೋಶಗೊಂಡ ಇರಾನ್ ಇಸ್ರೇಲ್‌ಗೆ ‘ಗಾಜಾ ಪಟ್ಟಿಯ ಮೇಲೆ ಬಾಂಬ್ ದಾಳಿ ನಿಲ್ಲಿಸದಿದ್ದರೆ, ಎಲ್ಲಾಕಡೆಯಿಂದ ಯುದ್ಧ ಆರಂಭಿಸುವುದಾಗಿ ಬೆದರಿಕೆ ಹಾಕಿದೆ. ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್ಬದೋಲ್ಲಾಹಿಯನ್ ಅವರು ಲೆಬನಾನ್ ನ ರಾಜಧಾನಿ ಬೆರೂಟ್ ಗೆ ತಲುಪಿದ ನಂತರ ಅವರು ಲೆಬನಾನ್‌ನ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದರು. ಆನಂತರ ಅವರು ಪತ್ರಕಾರರೊಂದಿಗೆ ಮಾತನಾಡುತ್ತಾ ಮೇಲಿನ ಬೆದರಿಕೆ ಹಾಕಿದರು.