ಕಾಂಗ್ರೆಸ್‌ ಮತ್ತು ನಗರ ನಕ್ಸಲರು !

ಭಾಜಪ ವತಿಯಿಂದ ಭೋಪಾಳದಲ್ಲಿನ ಸಮ್ಮೇಳನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಈಗ ಕಾಂಗ್ರೆಸ್‌ನಲ್ಲಿ ‘ನಗರ ನಕ್ಸಲರ ಪ್ರಭಾವವಿದೆ”, ಎಂದು ಹೇಳಿದರು. ಅನೇಕ ಅರ್ಥದಲ್ಲಿ ಈ ಆರೋಪ ಅತ್ಯಂತ ಗಂಭೀರವಾಗಿದೆ. ೨೦೧೮ ರಲ್ಲಿ ‘ನ್ಯಾಶನಲ್‌ ಸ್ಟುಡೆಂಟ್ಸ್ ಯೂನಿಯನ್‌ ಆಫ್‌ ಇಂಡಿಯಾ’ (ಎನ್‌.ಎಸ್‌.ಯು.ಐ.) ಕಾಂಗ್ರೆಸ್ಸಿನ ಈ ವಿದ್ಯಾರ್ಥಿ ಸಂಘಟನೆಯ ಸದಸ್ಯರ ಹೆಸರಿನಲ್ಲಿ ಒಂದು ಡೈರಿ ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಸ್ಪಷ್ಟವಾಗಿ ಮುಂದಿನಂತೆ ಹೇಳಲಾಗಿತ್ತು. ‘ಎಡಪಂಥೀಯ ಸಂಘಟನೆಗಳು ‘ನಗರ ನಕ್ಸಲ್‌ವಾದ’ದ ಪ್ರವರ್ತಕರು’ ಹಾಗೂ ಎಲ್ಲ ಪ್ರತ್ಯೇಕತಾವಾದಿ ಸಮೂಹಗಳನ್ನು ಸಮರ್ಥಿಸುತ್ತವೆ.’ ಅವುಗಳು ‘ನಗರ ನಕ್ಸಲ್‌ವಾದ’ ಹಾಗೂ ‘ನಗರ ಜಾತಿವಾದ’ಗಳನ್ನು ಪುರಸ್ಕರಿಸುತ್ತವೆ ಹಾಗೂ ‘ಕ್ಯಾಂಪಸ್‌’ನಲ್ಲಿನ (ವಿದ್ಯಾಪೀಠದ ಪರಿಸರದಲ್ಲಿ) ರಕ್ತಪಾತ’ದ ಮೇಲೆ ಗಮನವಿಡುತ್ತವೆ.’ ‘ಎನ್‌.ಎಸ್‌.ಯು.ಐ. ಕೂಡ ಒಂದು ಎಡಪಂಥೀಯ ಸಂಘಟನೆ ಆಗಿದೆ. ಈ ಡೈರಿಯಲ್ಲಿರುವ ಇನ್ನೊಂದು ಮಹತ್ವದ ವಿಷಯ ವೆಂದರೆ, ಎಡಪಂಥೀಯರು ಭಾರತೀಯ ಕ್ರಾಂತಿಕಾರಿ ಮಂಗಲ ಪಾಂಡೆ ಇವರನ್ನು ‘ಡ್ರಗ್‌ ಎಡಿಕ್ಟ್‌’ (ಅಮಲು ಪದಾರ್ಥಕ್ಕೆ ತುತ್ತಾದವ) ಎನ್ನುತ್ತಾರೆ. ಇದರಿಂದ ಸ್ವಾತಂತ್ರ್ಯದ ಹಿಂದಿನ ಕಾಲದಿಂದಲೂ ಕ್ರಾಂತಿಕಾರಿಗಳನ್ನು ನೋಡುವ ಕಾಂಗ್ರೆಸ್ಸಿನ ದೃಷ್ಟಿಕೋನ ಎಷ್ಟು ಕೀಳ್ಮಟ್ಟದ, ತಪ್ಪು ಹಾಗೂ ದೇಶವಿಘಾತಕ ವಾಗಿದೆ, ಎಂಬುದೂ ಅರಿವಾಗುತ್ತದೆ. ಅಂದಿನ ವಿದ್ಯಾಪೀಠದ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಡೈರಿಯನ್ನು ಪ್ರಸಾರ ಮಾಡಿದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತು, ಆಗ ರಾಹುಲ್‌ ಗಾಂಧಿಯವರು ತಮ್ಮ ಪಕ್ಷದ ಈ ವಿದ್ಯಾರ್ಥಿ ಸಂಘಟನೆಯ ಪಕ್ಷವಹಿಸಿ ‘ಈ ದೇಶದಲ್ಲಿ ಸಂಘದ ಹೊರತು ಯಾವುದೇ ಸರಕಾರೇತರ ಸಂಘಟನೆ (ಎನ್‌.ಜಿ.ಒ,) ಇಲ್ಲ. ಇನ್ನಿತರ ಎಲ್ಲ ಎನ್‌.ಜಿ.ಒ.ಗಳ ಧ್ವನಿಯನ್ನು ಅದುಮಿ ಅವರನ್ನು ಸೆರೆಮನೆಗೆ ತಳ್ಳಲಾಗುತ್ತದೆ’, ಎನ್ನುವ ವ್ಯಂಗ್ಯ ಮಾತನ್ನು ಟ್ವೀಟ್‌ ಮಾಡಿದ್ದರು. ಅನಂತರ ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ನುಣುಚಿಕೊಳ್ಳಲು ಪ್ರಯತ್ನಿಸುವ ಸ್ಪಷ್ಟೀಕರಣವನ್ನೂ ನೀಡಿತು. ಕಾಂಗ್ರೆಸ್‌ ಎಡ ಅಥವಾ ಸಾಮ್ಯವಾದಿ ವಿಚಾರಶೈಲಿಯನ್ನು ಎಷ್ಟು ದೊಡ್ಡ ಪ್ರಮಾಣದಲ್ಲಿ ಪುರಸ್ಕಾರ ಮಾಡುತ್ತದೆ, ಎಂಬುದಕ್ಕೆ ಇದೊಂದು ಜೀವಂತ ಉದಾಹರಣೆಯಾಗಿದೆ ಹಾಗೂ ಇದರಿಂದ ಪ್ರಧಾನಮಂತ್ರಿಯವರ ಹೇಳಿಕೆಗೆ ಆಧಾರ ಸಿಗುತ್ತಾ ಹೋಗುವುದು. ನೆಹರುರವರ ಕಾಲದಿಂದಲೂ ಅವರ ಚೀನಾಪ್ರೇಮ ಜಗಜ್ಜಾಹೀರಾಗಿತ್ತು. ‘ಕಾಂಗ್ರೆಸ್‌ ಆರಂಭದಲ್ಲಿ ತನ್ನನ್ನು ಸಮಾಜವಾದಿ ಎಂದು ಹೇಳುತ್ತಿದ್ದರೂ, ಅದರ ಮಡಿಲಲ್ಲಿ ಸಾಮ್ಯವಾದವನ್ನೇ ಜೋಪಾಸನೆ ಮಾಡಲಾಗುತ್ತಿತ್ತು’, ಎಂದು ಹೇಳಿದರೆ ತಪ್ಪಾಗದು. ೧೯೬೯ ರಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸ್‌ ಸರಕಾರಕ್ಕೆ ಎಡಪಂಥೀಯರು ಬೆಂಬಲ ನೀಡಿ ಅದನ್ನು ಉಳಿಸಿದರು ಹಾಗೂ ಅಂದಿನಿಂದಲೆ ಸಾಮ್ಯವಾದಿಗಳ ‘ಋಣ’ ತೀರಿಸುವ ದೃಷ್ಟಿಯಲ್ಲೆಂದೇನೋ ಸಾಮ್ಯವಾದಿಗಳು ಹೇಳಿದ್ದೆಲ್ಲವನ್ನೂ ಕಾಂಗ್ರೆಸ್‌ ಮಾಡಿತು. ನಂತರ ೧೯೭೦ ರ ದಶಕದಲ್ಲಿ ಆಸ್ತಿಗಳ ಮೇಲಿನ ಮೂಲಭೂತ ಅಧಿಕಾರವನ್ನು ತೆಗೆಯಲಾಯಿತು, ಬ್ಯಾಂಕ್‌ಗಳ ರಾಷ್ಟ್ರೀಕರಣ ಹಾಗೂ ಉದ್ಯೋಗಗಳ ರಾಷ್ಟ್ರೀಕರಣ ಮಾಡಲಾಯಿತು ಹಾಗೂ ಕೊನೆಗೆ ಸಂವಿಧಾನದಲ್ಲಿ ಸರ್ವಧರ್ಮಸಮಭಾವ ಶಬ್ದವನ್ನೂ ತುರುಕಿಸಲಾಯಿತು. ‘ಇಂಡಿಯನ್‌ ಕೌನ್ಸಿಲ್‌ ಆಫ್‌ ಹಿಸ್ಟೋರಿಕಲ್‌ ರಿಸರ್ಚ್‌’, ‘ಇಂಡಿಯನ್‌ ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ರಿಸರ್ಚ್‌’, ‘ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರಲ್‌ ರಿಸರ್ಚ್‌’, ಹೀಗೆ ಎಲ್ಲ ಮಹತ್ವದ ಸಂಸ್ಥೆಗಳಲ್ಲಿ ಎಡಪಂಥೀಯರು ತಮ್ಮ ಕಾಲು ಚಾಚಿದರು. ಅದೇ ರೀತಿ ಜೆ.ಎನ್‌.ಯು.ವಿನ ನಿರ್ಮಾಣ ಮಾಡಿ ವಿಶಿಷ್ಟ ವಿಚಾರ ಶೈಲಿಯ ಜನರನ್ನು ಅಲ್ಲಿ ನೇಮಕ ಮಾಡಲಾಯಿತು. ಅಲ್ಲಿ ಮೊದಲು ಪತ್ರಕಾರಿಕೆಯ ಪದವಿಯನ್ನು ಆರಂಭಿಸಿದರು. ಆಡಳಿತಾಧಿಕಾರಿ, ಪ್ರಾಧ್ಯಾಪಕ, ಪತ್ರಕರ್ತ ಇತ್ಯಾದಿ ಎಲ್ಲದಕ್ಕೂ ಅಲ್ಲಿಗೆ ಹೋಗುವುದು ಅನಿವಾರ್ಯವಾಯಿತು. ಇವೆಲ್ಲವನ್ನೂ ಕಾಂಗ್ರೆಸ್ಸಿನ ಸಹಾಯದಿಂದಲೆ ಸಾಮ್ಯವಾದಿಗಳು ಮಾಡಿದರು. ಈ ನಡುವೆ ರಾಹುಲ್‌ ಗಾಂಧಿ ಚೀನಾಗೆ ಹೋಗಿ ಅಲ್ಲಿನ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಬಂದರು. ರಾಹುಲ್‌ ಗಾಂಧಿ ಕಳೆದ ಅನೇಕ ವರ್ಷಗಳಿಂದ ಸ್ವಾತಂತ್ರ್ಯವೀರ ಸಾವರ್ಕರರ ವಿಷಯದಲ್ಲಿ ಉದ್ದೇಶಪೂರ್ವಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದು ಕೂಡ ಅವರ ವಿಕೃತ ಸಾಮ್ಯವಾದಿ ಮಾನಸಿಕತೆಯನ್ನು ತೋರಿಸುತ್ತದೆ. ೨೦೧೮ ರಲ್ಲಿಯೂ ಪ್ರಧಾನಮಂತ್ರಿ ಮೋದಿಯವರು ‘ಛತ್ತೀಸಗಡದಲ್ಲಿ ಹೆಚ್ಚುತ್ತಿರುವ ನಕ್ಸಲ್‌ವಾದಕ್ಕೆ ಹೊಣೆಯಾಗಿರುವ ನಗರ ನಕ್ಸಲ್‌ವಾದಕ್ಕೆ ಕಾಂಗ್ರೆಸ್‌ ಸಹಾಯ ಮಾಡುತ್ತಿದೆ’, ಎಂದು ಆರೋಪ ಮಾಡಿದ್ದರು; ಏಕೆಂದರೆ ಪತ್ರಕರ್ತನ ಹತ್ಯೆ ಮಾಡುವ ನಕ್ಸಲರಿಗೆ ಕಾಂಗ್ರೆಸ್‌ ‘ಕ್ರಾಂತಿಕಾರಿ’ ಎಂದು ಹೇಳುತ್ತಿತ್ತು. ಕಾಂಗ್ರೆಸ್‌ ೧೦ ವರ್ಷಗಳಿಗಿಂತಲೂ ಹೆಚ್ಚು ಕಾಲ ನಕ್ಸಲ್‌ಪೀಡಿತ ಛತ್ತೀಸ್‌ಗಡದ ವಿಕಾಸವಾಗಲು ಬಿಡಲಿಲ್ಲ.

ಸಾಮ್ಯವಾದಿ ಕಾಂಗ್ರೆಸ್ಸಿನ ವಿರುದ್ಧ ಕ್ರಮ ತೆಗೆದುಕೊಳ್ಳಿ !

‘ಸಮಾನತೆ’ ಎಂಬುದು ಸಾಮ್ಯವಾದಿಗಳ ಕೇವಲ ವೈಚಾರಿಕ ವಿವಾದಕ್ಕಾಗಿ ನಿರ್ಮಾಣ ಮಾಡಿರುವ ನಾಟಕವಾಗಿದೆ’, ಈ ಸಾಮ್ಯವಾದಿಗಳು ಜಗತ್ತಿನಾದ್ಯಂತ ಮಾಡಿದ ಕ್ರೂರ ಹತ್ಯೆಗಳ ಇತಿಹಾಸ ಮುಂದೆ ಬರುವಾಗ ಅರಿವಾಗುತ್ತದೆ. ‘ಇಷ್ಟು ವರ್ಷ ಕಾಂಗ್ರೆಸ್‌ ಇದೆಲ್ಲವನ್ನೂ ನಡೆಸಿಕೊಳ್ಳುತ್ತಿತ್ತು ಹಾಗೂ ಅದಕ್ಕೆ ಒಂದು ರೀತಿ ಬೆಂಬಲವನ್ನೂ ನೀಡುತ್ತಿತ್ತು’, ಎನ್ನುವ ಚಿತ್ರಣ ಮುಂದೆ ಬರುತ್ತದೆ. ಕೇರಳ, ಬಂಗಾಲ, ತ್ರಿಪುರಾದಂತಹ ಸಾಮ್ಯವಾದಿ ರಾಜ್ಯಗಳ ಸ್ಥಿತಿ ಇಂದು ಹೇಗಿದೆ ? ಇಲ್ಲಿ ವಿಕಾಸವಂತೂ ಆಗಿಯೆ ಇಲ್ಲ. ತದ್ವಿರುದ್ಧ ಹಿಂದೂಗಳ ಮೇಲೆ ಪ್ರಚಂಡ ಆಘಾತ ನಡೆಯುತ್ತಿದೆ. ಆರಂಭದಲ್ಲಿ ಬಡವರ ಶೋಷಣೆಯ ವಿರುದ್ಧವೆಂದು ಆರಂಭಿಸಿದ ಈ ಚಳುವಳಿ ಈಗ ವಿದೇಶದಿಂದ ಬರುವ ಹಣದಿಂದ ದೇಶವನ್ನು ದುರ್ಬಲಗೊಳಿಸುವ ಉದ್ಯೋಗವನ್ನು ಆರಂಭಿಸಿದೆ. ಪ್ರಧಾನಿಯವರು ಹೇಳಿದಂತೆ ಕಾಂಗ್ರೆಸ್‌ ಕೂಡ ಸದ್ಯ ನಗರ ನಕ್ಸಲ್‌ವಾದವನ್ನು ನಡೆಸುತ್ತಿದ್ದರೆ, ಅದರಿಂದ ದೇಶಕ್ಕೆ ಬಹಳ ದೊಡ್ಡ ಅಪಾಯ ವಿದೆ, ಎಂಬುದು ಬಹಿರಂಗವಾಗಿದೆ. ಆದ್ದರಿಂದ ಸರಕಾರ ನಕ್ಸಲ್‌ವಾದಕ್ಕಾಗಿ ಯಾವ ನಿಲುವನ್ನು ಅವಲಂಬಿಸಿತ್ತದೊ, ಅದನ್ನೆ ಅದು ಕಾಂಗ್ರೆಸ್ಸಿಗೂ ಅವಲಂಬಿಸುವುದು ಅಪರಿಹಾರ್ಯವಾಗಿದೆ. ಆದ್ದರಿಂದ ನಗರ ನಕ್ಸಲರು ನಡೆಸುತ್ತಿರುವ ಕಾಂಗ್ರೆಸ್ಸಿನ ಮೇಲೆ ಈಗ ಸರಕಾರ ಶೀಘ್ರಗತಿಯಲ್ಲಿ ನಿರ್ಬಂಧ ಹೇರಲು ಕ್ರಮ ತೆಗೆದುಕೊಳ್ಳಬೇಕು !