ಅಮೆರಿಕದಲ್ಲಿ ಹಿಂದೂಗಳ ಚಳವಳಿಯ ಪರಿಣಾಮ !
ಕ್ಯಾಲಿಫೋರ್ನಿಯಾ (ಅಮೇರಿಕಾ) – ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಗೇವ್ಹಿನ್ ನ್ಯೂಸಮ್ ಅವರು ತಮ್ಮ ವೀಟೋವನ್ನು (ನಿರಾಕರಣೆಯ ಹಕ್ಕು) ಉಪಯೋಗಿಸಿ ಜಾತಿಯ ಹೆಸರಿನಲ್ಲಿ ಪ್ರತ್ಯಕ್ಷ ಹಿಂದೂ ವಿರೋಧಿ ಮಸೂದೆಯನ್ನು ತಡೆದರು. ಗವರ್ನರ್ ಗೇವ್ಹಿನ್ ನ್ಯೂಸಮ್ ಅವರು ಮಸೂದೆಯನ್ನು ತಡೆದಿರುವ ಬಗ್ಗೆ ‘ಹಿಂದೂ ಅಮೆರಿಕನ್ ಫೌಂಡೇಶನ್’ ಸಮಾಧಾನ ವ್ಯಕ್ತಪಡಿಸಿದೆ.
1. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈಗಾಗಲೇ ಲಿಂಗ, ವಂಶ, ಬಣ್ಣ, ಧರ್ಮ, ರಾಷ್ಟ್ರೀಯ ಮೂಲ, ವಿಕಲಾಂಗತೆ, ಲೈಂಗಿಕ ಗುರುತು ಮುಂತಾದ ಭೇದಭಾವವನ್ನು ತಡೆಯುವ ಕಾನೂನುಗಳು ಅಸ್ತಿತ್ವದಲ್ಲಿದೆ. ಹಾಗಾಗಿ ಯಾವುದೇ ಹೊಸ ಕಾನೂನಿನ ಅಗತ್ಯವಿಲ್ಲ. ಅದಕ್ಕಾಗಿ ನಾನು ಈ ಮಸೂದೆಗೆ ಸಹಿ ಹಾಕುವುದಿಲ್ಲ, ನಿರಾಕರಣೆಯ ಹಕ್ಕನ್ನು ಬಳಸುತ್ತೇನೆ ಎಂದು ಗವರ್ನರ್ ಗೇವ್ಹಿನ್ ನ್ಯೂಸಮ್ ಸ್ಪಷ್ಟ ಪಡಿಸಿದರು.
2. `ಎಸ್.ಬಿ-403’ ಹೆಸರಿನ ಈ ಮಸೂದೆಯನ್ನು ಕ್ಯಾಲಿಫೋರ್ನಿಯಾ ಶಾಸಕಾಂಗವು ಮಾರ್ಚ್ 2023 ರಲ್ಲಿ ಅಂಗೀಕರಿಸಿತ್ತು. ಅದರಲ್ಲಿ ‘ಹಿಂದೂ ಧರ್ಮದ ಕೆಲವು ವಿಶಿಷ್ಟ ಆಚರಣೆಗಳು ಮತ್ತು ಪದ್ಧತಿಗಳು ಭೇದಭಾವ ಮಾಡುವಂತಹದ್ದಿದೆ’ ಎಂದು ಹೇಳಿ ಇಡೀ ಹಿಂದೂ ಧರ್ಮವನ್ನು ಅಪಕೀರ್ತಿಗೊಳಿಸಲು ಪ್ರಯತ್ನಿಸಲಾಗಿತ್ತು. ‘ಹಿಂದೂಗಳ ಧಾರ್ಮಿಕ ಆಚರಣೆಗಳು,ಪದ್ಧತಿಗಳು ಭೇದಭಾವ ಮೂಡಿಸುವಂತಹದ್ದಿದೆ’ ಎಂದು ಅತ್ಯಂತ ಚಾಲಾಕಿತನದಿಂದ ಸೂಚಿಸಲಾಗಿತ್ತು.
3. ಮಸೂದೆಯ ಎಲ್ಲಾ ಅಂಶಗಳು ತಾರತಮ್ಯದಿಂದ ಕೂಡಿತ್ತು ಹಾಗೂ ಹಿಂದೂ ಧರ್ಮ ಮತ್ತು ದಕ್ಷಿಣ ಏಷ್ಯಾದ ಹಿಂದೂ ಸಮಾಜದ ಬಗ್ಗೆ ದೊಡ್ಡ ತಪ್ಪು ತಿಳುವಳಿಕೆಯನ್ನು ನಿರ್ಮಾಣ ಮಾಡುವುದರಲ್ಲಿತ್ತು. ಆದ್ದರಿಂದ, ‘ಅಮೆರಿಕನ್ ಹಿಂದೂ ಫೌಂಡೇಶನ್’ ಈ ಮಸೂದೆಯನ್ನು ವಿರೋಧಿಸಿ ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಪ್ರತಿಭಟನೆಯನ್ನು ಮಾಡಿತ್ತು. ಈ ಪ್ರತಿಭಟನೆಯನ್ನು ಪರಿಗಣಿಸಿ, ಗವರ್ನರ್ ಗೇವ್ಹಿನ್ ನ್ಯೂಸಮ್ ಈ ಮಸೂದೆಯನ್ನು ತಡೆದರು.