ದೇವಿಯ ಉಪಾಸನೆಯ ವಿವಿಧ ಪದ್ಧತಿಗಳು

ತಂತ್ರಶಾಸ್ತ್ರವನ್ನು ಪಾಲಿಸುವ ತಾಂತ್ರಿಕರು ತಂತ್ರಶಾಸ್ತ್ರದ ಜನಕನಾದ ಸದಾಶಿವನ ಉಪಾಸನೆ ಮಾಡುತ್ತಾರೆ. ಅದರಂತೆ ತ್ರಿಪುರಸುಂದರಿ, ಮಾತಂಗಿ, ಉಗ್ರತಾರಾ ಇತ್ಯಾದಿ ತಾಂತ್ರಿಕ ಶಕ್ತಿಗಳ ಉಪಾಸನೆಯನ್ನೂ ಮಾಡುತ್ತಾರೆ. ಶಿವನಂತೆ ಶಕ್ತಿಯೂ ತಂತ್ರಶಾಸ್ತ್ರದ ಆರಾಧ್ಯ ದೇವತೆಯಾಗಿರುವುದು ಸುಸ್ಪಷ್ಟವಾಗುತ್ತದೆ.

ಕಲಿಯುಗದಲ್ಲಿ ವಿವಿಧ ಸಂತರು ಮಾಡಿರುವ ದೇವಿಯ ಉಪಾಸನೆ

ಆದಿ ಶಂಕರಾಚಾರ್ಯರು ತ್ರಿಪುರ ಸುಂದರಿದೇವಿಯ ಉಪಾಸನೆಯನ್ನು ಮಾಡಿದ್ದರು. ಅಲ್ಲದೇ ಅವರ ಮೇಲೆ ಮೂಕಾಂಬಿಕಾ ದೇವಿ ಮತ್ತು ಸರಸ್ವತಿದೇವಿಯ ವರದಹಸ್ತವಿತ್ತು. ಅವರು ತಮ್ಮ ಮೂರನೇಯ ವಯಸ್ಸಿನಲ್ಲಿಯೇ ದೇವಿಯ ಭುಜಂಗಸ್ತೋತ್ರವನ್ನು ರಚಿಸಿ ದೇವಿಯನ್ನು ವಿವಿಧ ರೀತಿಯಲ್ಲಿ ವರ್ಣಿಸಿದ್ದಾರೆ.

ಶ್ರೀ ದುರ್ಗಾದೇವಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

ಕವಚವು ಮಂತ್ರವಿದ್ಯೆಯಲ್ಲಿನ ಒಂದು ವಿಧವಾಗಿದೆ. ಇದರಲ್ಲಿ ದೇವತೆಯು ನಮ್ಮ ದೇಹದ ರಕ್ಷಣೆಯನ್ನು ಮಾಡಬೇಕೆಂಬ ಪ್ರಾರ್ಥನೆಯಿರುತ್ತದೆ. ಅನೇಕ ವಿಧದ ಮಂತ್ರಗಳ ಸಹಾಯದಿಂದ ಮನುಷ್ಯನ ದೇಹದ ಮೇಲೆ ಮಂತ್ರಕವಚಗಳನ್ನು ನಿರ್ಮಿಸಬಹುದು. ಈ ಕವಚಗಳು ಸ್ಥೂಲ ಕವಚಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ.

ನವರಾತ್ರಿಯ ವ್ರತಗಳು ಮತ್ತು ಪೂಜೆ

ಬಳಿಕ ೧೧ ಬಾರಿ ಶ್ರೀಸೂಕ್ತವನ್ನು ಪಠಿಸಿ ತುಪ್ಪ ಮತ್ತು ಗುಗ್ಗುಳಗಳಿಂದ ಹವನವನ್ನು ಮಾಡಬೇಕು. ಇದರಿಂದ ಲಕ್ಷ್ಮೀಮಾತೆಯು ಪ್ರತ್ಯಕ್ಷ ದರ್ಶನ ನೀಡುವಳು. ಅವಳಿಗೆ ಪ್ರತಿನಿತ್ಯವೂ ತಮ್ಮ ಮನೆಯಲ್ಲಿಯೇ ಉಳಿಯಲು ಪ್ರಾರ್ಥನೆ ಮಾಡಬೇಕು.

ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮರಣೋತ್ತರ ಕ್ರಿಯಾಕರ್ಮಗಳು ಮತ್ತು ಶ್ರಾದ್ಧಾದಿ ವಿಧಿಗಳ ಮಹತ್ವ

ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮೃತದೇಹದ ದಹನ ಮಾಡಿ ಅದರ ಅಸ್ಥಿಗಳನ್ನೂ ಪವಿತ್ರ ಜಲದಲ್ಲಿ ವಿಸರ್ಜನೆ ಮಾಡುವ ಮೂಲಕ ಶರೀರದಲ್ಲಿನ ಪಂಚಮಹಾಭೂತಾತ್ಮಕ ಭಾಗಗಳನ್ನು ಆ ಮಹಾಭೂತಗಳಿಗೆ ಹಿಂದಿರುಗಿಸುತ್ತೇವೆ.

ನವರಾತ್ರಿ

‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ.

ಶ್ರಾದ್ಧವನ್ನು ಮಾಡುವಾಗ ತೊಂದರೆಗಳು ಬಂದರೆ ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ?

‘ಇಂತಹ ಒಂದು ಕಾರಣಕ್ಕಾಗಿ ಶ್ರಾದ್ಧವನ್ನು ಮಾಡಲು ಆಗುವುದಿಲ್ಲ’ ಎಂದು ಯಾರಿಗೂ ಹೇಳಲು ಸಾಧ್ಯವಾಗದಷ್ಟು ಪರಿಹಾರ ಮಾರ್ಗಗಳನ್ನು ಹಿಂದೂಧರ್ಮದಲ್ಲಿ ಹೇಳಲಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಶ್ರಾದ್ಧವನ್ನು ಮಾಡುವುದು ಎಷ್ಟು ಅವಶ್ಯಕವಾಗಿದೆ ಎಂಬುದು ತಿಳಿಯುತ್ತದೆ.

ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ಮತ್ತು ಅವರಿಗೆ ಸದ್ಗತಿಯನ್ನು ಪ್ರದಾನಿಸುವ ದೇವತೆ – ದತ್ತ

ಇತ್ತೀಚಿನ ಕಾಲದಲ್ಲಿ ಹಿಂದಿನಂತೆ ಯಾರೂ ಶ್ರಾದ್ಧ-ಪಕ್ಷ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ.

ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು ?

‘ಕುಲ’ ಈ ಶಬ್ದವನ್ನು ‘ಆಯಾ ಜೀವಗಳ ಜೀವನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಕೊಡುಕೊಳ್ಳುವಿಕೆಯ ರೂಪದಲ್ಲಿ ಸಂಪರ್ಕಕ್ಕೆ ಬಂದಿರುವ ಇತರ ಜೀವಿಗಳು’ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆಯೇ ಹೊರತು ‘ಪೀಳಿಗೆ’ ಎಂಬರ್ಥದಲ್ಲಿ ಉಪಯೋಗಿಸಲಾಗಿಲ್ಲ.

ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ

‘ಶ್ರಾದ್ಧವು ಲಿಂಗದೇಹಕ್ಕೆ ಮಾಡಲಾಗುವ ಸಂಸ್ಕಾರಕರ್ಮಕ್ಕೆ ಸಂಬಂಧಿಸಿದೆ. ಶ್ರಾದ್ಧವನ್ನು ಮಾಡುವುದೆಂದರೆ ಪಿತೃಗಳ ಲಿಂಗದೇಹಗಳಿಗೆ ಗತಿ ಕೊಡಲು ಬ್ರಹ್ಮಾಂಡದಲ್ಲಿನ ಯಮಲಹರಿಗಳನ್ನು (ಇಂಧನಾತ್ಮಕ) ಆವಾಹನೆ ಮಾಡುವುದು.