ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ

#Datta Datta, #ShriDatta ShriDatta #mahalaya mahalaya, #pitrupaksha pitrupaksha, #shraddha shraddha, #ShraddhaRituals Shraddha rituals, #Shraddhavidhi Shraddha vidhi

‘ಶ್ರಾದ್ಧವು ಲಿಂಗದೇಹಕ್ಕೆ ಮಾಡಲಾಗುವ ಸಂಸ್ಕಾರಕರ್ಮಕ್ಕೆ ಸಂಬಂಧಿಸಿದೆ. ಶ್ರಾದ್ಧವನ್ನು ಮಾಡುವುದೆಂದರೆ ಪಿತೃಗಳ ಲಿಂಗದೇಹಗಳಿಗೆ ಗತಿ ಕೊಡಲು ಬ್ರಹ್ಮಾಂಡದಲ್ಲಿನ ಯಮಲಹರಿಗಳನ್ನು (ಇಂಧನಾತ್ಮಕ) ಆವಾಹನೆ ಮಾಡುವುದು. ಈ ಪ್ರಾರ್ಥನಾ ಸ್ವರೂಪ ಆವಾಹನೆಯಿಂದ ಬ್ರಹ್ಮಾಂಡದಲ್ಲಿನ ದತ್ತತತ್ತ್ವಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು ಕಾರ್ಯನಿರತವಾಗಿ ಪಿತೃಗಳ ಲಿಂಗದೇಹಕ್ಕೆ ಸಂಬಂಧಿಸಿದ ಯಮಲಹರಿಗಳನ್ನು ತಮ್ಮ ಆಕರ್ಷಣಾಶಕ್ತಿಯಿಂದ ಸೆಳೆದುಕೊಂಡು ಪೃಥ್ವಿಯ ಕಕ್ಷೆಯಲ್ಲಿ ತರುತ್ತವೆ. ಅನೇಕ ಲಿಂಗದೇಹಗಳು ಮೃತ್ಯುಲೋಕದಲ್ಲಿ ಸಿಲುಕಿಕೊಂಡಿರುತ್ತವೆ. ಈ ಲಿಂಗದೇಹಗಳಿಗೆ ಗತಿ ಸಿಗಲು ಕ್ರಿಯಾತ್ಮಕ ಯಮಲಹರಿಗಳ ಆವಶ್ಯಕತೆಯಿರುತ್ತದೆ. ಶ್ರಾದ್ಧಕರ್ಮದಲ್ಲಿ ಈ ಲಹರಿಗಳನ್ನು ಆವಾಹನೆ ಮಾಡಿದಾಗ ಪಿತೃಗಳ ಲಿಂಗದೇಹದ ಸುತ್ತಲೂ ಇರುವ ವಾಯುಮಂಡಲವು ಕಾರ್ಯನಿರತವಾಗಿ ಯಮಲಹರಿಗಳ ಶಕ್ತಿಯಿಂದ ಲಿಂಗದೇಹವು ಮುಂದಿನ ಹಂತಕ್ಕೆ ತಳ್ಳಲ್ಪಡುತ್ತದೆ. ಅಂದರೆ ಲಿಂಗದೇಹಕ್ಕೆ ಸದ್ಗತಿಯು ಸಿಗುತ್ತದೆ.’

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಮುದ್ರಿಸಿದ ಗ್ರಂಥ ‘ಶ್ರಾದ್ಧ – ೨ ಭಾಗಗಳು’)