Navaratri Navratri Navaratrotsav Navratrotsav Durgadevi Durga Devi Devi #Navaratri #Navratri #Navaratrotsav #Navratrotsav #Durgadevi #Durga #Devi
ಭಾರತದಲ್ಲಿ ದೇವಿ ಉಪಾಸನೆಯ ಪರಂಪರೆಯು ಪುರಾತನ ಕಾಲದಿಂದ ನಡೆದುಬಂದಿದೆ. ದೇವಿಯ ಮೂಲ ರೂಪ ನಿರ್ಗುಣವಾಗಿದ್ದರೂ, ದೇವಿಯ ಸಗುಣ ರೂಪದ ಉಪಾಸನೆಯ ಪರಂಪರೆ ಭಾರತದಲ್ಲಿ ಪ್ರಚಲಿತವಿದೆ. ಕುಲದೇವಿ, ಗ್ರಾಮದೇವಿ, ಶಕ್ತಿಪೀಠ ಮುಂತಾದ ವಿವಿಧ ಸಗುಣ ರೂಪಗಳಲ್ಲಿ ದೇವಿಯನ್ನು ಉಪಾಸಿಸಲಾಗುತ್ತದೆ.
ಹಿಂದೂ ಸಂಸ್ಕೃತಿಯಲ್ಲಿ ಎಷ್ಟು ಮಹತ್ವ ದೇವರಿಗೆ ಇದೆಯೋ, ಅಷ್ಟೇ ಮಹತ್ವ ದೇವಿಗೂ ಇರುವುದು ಉಲ್ಲೇಖನೀಯವಾಗಿದೆ. ಭಾರತದಲ್ಲಿ ಇತರ ಸಂಪ್ರದಾಯಗಳಂತೆಯೇ ಶಾಕ್ತ ಸಂಪ್ರದಾಯವೂ ಇದೆ. ಪಂಚಾಯತನ ಪೂಜೆಯಲ್ಲಿ ಶಿವ, ವಿಷ್ಣು, ಗಣಪತಿ ಮತ್ತು ಸೂರ್ಯರೊಂದಿಗೆ ದೇವಿಯ ಪೂಜೆಗೂ ವಿಶೇಷ ಮಹತ್ವವಿದೆ. ಉಪಾಸಕರ ಹೃದಯದಲ್ಲಿ ದೇವಿಗೆ ವಿಶೇಷ ಸ್ಥಾನವಿರುವುದರಿಂದಲೇ ಪ್ರತಿವರ್ಷ ನವರಾತ್ರಿ ಉತ್ಸವ ಬಹಳ ವಿಜೃಂಭಣೆ ಹಾಗೂ ಉತ್ಸಾಹದಿಂದ ಭಾರತದಾದ್ಯಂತ ಆಚರಿಸಲಾಗುತ್ತದೆ.
೧. ಶಾಕ್ತ ಸಂಪ್ರದಾಯ
ಭಾರತದಲ್ಲಿ ವಿವಿಧ ಸಂಪ್ರದಾಯಗಳು ಕಾರ್ಯನಿರತವಾಗಿವೆ. ಈ ಸಂಪ್ರದಾಯಗಳಿಗೆ ಸಂಬಂಧಿಸಿದ ದೇವತೆಗಳ ಉಪಾಸನೆಯು ಪ್ರಚಲಿತವಾಗಿವೆ. ಗಾಣಪತ್ಯ, ಶೈವ, ವೈಷ್ಣವ, ಸೌರ್ಯ, ದತ್ತ ಮುಂತಾದ ಸಂಪ್ರದಾಯದಂತೆ ಶಾಕ್ತ ಸಂಪ್ರದಾಯದ ಅಸ್ತಿತ್ವವೂ ಬಹಳ ಪ್ರ್ರಾಚೀನ ಕಾಲದಿಂದಲೂ ಭಾರತದಲ್ಲಿದೆ. ಶಾಕ್ತ ಸಂಪ್ರದಾಯವು ತಿಳಿಸಿದಂತೆ ಶಕ್ತಿ ಉಪಾಸನೆ ಮಾಡುವ ಅನೇಕ ಶಾಕ್ತರು ಭಾರತದಾದ್ಯಂತ ಎಲ್ಲೆಡೆಯೂ ಕಂಡುಬರುತ್ತಾರೆ.
೨. ಪಂಚಾಯತನ ಪೂಜೆಯ ಪ್ರಮುಖ ದೇವತೆ
ಆದಿ ಶಂಕರಾಚಾರ್ಯರು ಪಂಚಾಯತನ ಪೂಜೆಯ ಪದ್ಧತಿಯನ್ನು ಭಾರತದಲ್ಲಿ ಪ್ರಾರಂಭಿಸಿದರು. ಈ ಪದ್ಧತಿಯಲ್ಲಿ ದೇವಿಯ ಸ್ಥಾನವು ಮಹತ್ವದ್ದಾಗಿದೆ. ಭಾರತದಲ್ಲಿ ಉಪಾಸನೆ ಮಾಡಲಾಗುವ ಪ್ರಮುಖ ಐದು ಉಪಾಸ್ಯದೇವತೆಗಳಲ್ಲಿ ಒಂದು ಶಕ್ತಿ, ಅಂದರೆ ದೇವಿಯಾಗಿದ್ದಾಳೆ.
೩. ತಂತ್ರಶಾಸ್ತ್ರದ ಆರಾಧ್ಯ ದೇವತೆ
ತಂತ್ರಶಾಸ್ತ್ರವನ್ನು ಪಾಲಿಸುವ ತಾಂತ್ರಿಕರು ತಂತ್ರಶಾಸ್ತ್ರದ ಜನಕನಾದ ಸದಾಶಿವನ ಉಪಾಸನೆ ಮಾಡುತ್ತಾರೆ. ಅದರಂತೆ ತ್ರಿಪುರಸುಂದರಿ, ಮಾತಂಗಿ, ಉಗ್ರತಾರಾ ಇತ್ಯಾದಿ ತಾಂತ್ರಿಕ ಶಕ್ತಿಗಳ ಉಪಾಸನೆಯನ್ನೂ ಮಾಡುತ್ತಾರೆ. ಶಿವನಂತೆ ಶಕ್ತಿಯೂ ತಂತ್ರಶಾಸ್ತ್ರದ ಆರಾಧ್ಯ ದೇವತೆಯಾಗಿರುವುದು ಸುಸ್ಪಷ್ಟವಾಗುತ್ತದೆ.
ಗರಬಾ ಎಂಬ ನೃತ್ಯೋಪಾಸನೆಯಲ್ಲಿ ನುಸುಳಿಕೊಂಡಿರುವ ಅಯೋಗ್ಯ ಕೃತಿಗಳನ್ನು ತಡೆಗಟ್ಟಿ ಉತ್ಸವದ ಪಾವಿತ್ರ್ಯತೆಯನ್ನು ಕಾಪಾಡಿರಿ !
ಹಿಂದೆ ಗರಬಾ ನೃತ್ಯದ ಸಮಯದಲ್ಲಿ ದೇವಿಯ, ಕೃಷ್ಣ ಲೀಲೆಯ ಮತ್ತು ಸಂತರು ರಚಿಸಿದ ಗೀತೆಗಳನ್ನು ಹೇಳಲಾಗುತ್ತಿತ್ತು. ಇಂದು ಭಗವಂತನ ಈ ಸಾಮೂಹಿಕ ನೃತ್ಯೋಪಾಸನೆಗೆ ವಿಕೃತ ಸ್ವರೂಪವು ಬಂದಿದೆ. ಚಲನಚಿತ್ರಗಳಲ್ಲಿನ ಹಾಡುಗಳ ತಾಳದಲ್ಲಿ ಅಶ್ಲೀಲ ಅಂಗವಿಕ್ಷೇಪ ಮಾಡಿ ಗರಬಾವನ್ನು ಆಡಲಾಗುತ್ತದೆ. ಗರಬಾದ ನಿಮಿತ್ತದಿಂದ ವ್ಯಭಿಚಾರವೂ ನಡೆಯುತ್ತದೆ. ಪೂಜಾಸ್ಥಳದಲ್ಲಿ ತಂಬಾಕುಸೇವನೆ, ಮದ್ಯಪಾನ, ಧ್ವನಿಪ್ರದೂಷಣೆ ಮುಂತಾದ ಪದ್ಧತಿಗಳು ನಡೆಯುತ್ತವೆ. ಈ ಅಯೋಗ್ಯ ಪದ್ಧತಿಗಳೆಂದರೆ ಧರ್ಮ ಮತ್ತು ಸಂಸ್ಕೃತಿಯ ಹಾನಿಯಾಗಿದೆ. ಈ ಅಯೋಗ್ಯಪದ್ಧತಿಗಳನ್ನು ನಿಲ್ಲಿಸುವುದೆಂದರೆ ಕಾಲಾನುಸಾರ ಆವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ. ಸನಾತನವು ಕೆಲವು ವರ್ಷಗಳಿಂದ ಈ ಅಯೋಗ್ಯ ಪದ್ಧತಿಗಳ ವಿರುದ್ಧ ಜನಜಾಗೃತಿ ಚಳುವಳಿಯನ್ನು ನಡೆಸುತ್ತಿದೆ. ಇದರಲ್ಲಿ ನೀವೂ ಸಹಭಾಗಿಯಾಗಿರಿ !
ಸನಾತನ ಸಂಸ್ಥೆಯು ತಿಳಿಸಿರುವ ಕಾಲಾನುಸಾರ ಆವಶ್ಯಕವಿರುವ ಶಕ್ತಿ ಉಪಾಸನೆ
ಸನಾತನ ಸಂಸ್ಥೆಯು ಕಾಲಾನುಸಾರ ಆವಶ್ಯಕವಿರುವ ದೇವಿಯ ಉಪಾಸನೆಯನ್ನು ಮಾಡಲು ಕಲಿಸುತ್ತದೆ. ಇಲ್ಲಿ ಶ್ರೀ ದುರ್ಗಾದೇವಿಯ ನಾಮಜಪ ಮಾಡಲು ಹೇಳಲಾಗುತ್ತದೆ. ಶ್ರೀ ದುರ್ಗಾದೇವಿ ಮತ್ತು ಶ್ರೀ ಲಕ್ಷ್ಮೀದೇವಿ ಇವರ ಸಾತ್ತ್ವಿಕ ಚಿತ್ರ ಮತ್ತು ನಾಮಪಟ್ಟಿಗಳನ್ನು ಉಪಾಸನೆಯಲ್ಲಿ ಉಪಯೋಗಿಸಲು ಹೇಳಲಾಗುತ್ತದೆ. ದೇವಿತತ್ತ್ವಯುಕ್ತ ಕುಂಕುಮವನ್ನು ಸಹ ಉತ್ಪಾದನೆಗಳಲ್ಲಿ ಉಪಲಬ್ಧ ಮಾಡಿಕೊಡಲಾಗಿದೆ. ದೇವಿತತ್ತ್ವದ ಅಧಿಕ ಮಾಹಿತಿಯನ್ನು ಪಡೆಯಲು ದೇವಿಯ ಉಪಾಸನೆಯೊಂದಿಗೆ ಸಂಬಂಧಿಸಿದ ಶಕ್ತಿ ಗ್ರಂಥವೂ ಲಭ್ಯವಿದೆ. ಕಾಲಾನುಸಾರ ಅವಶ್ಯಕವಿರುವ ಶ್ರೀ ದುರ್ಗಾದೇವಿ ಮೂರ್ತಿಯನ್ನು ಸಹ ತಯಾರಿಸಲಾಗುತ್ತಿದೆ.
(ಆಧಾರ : ಸನಾತನ ಸಂಸ್ಥೆ)