ಸಾಧಕರೇ, ಆಧ್ಯಾತ್ಮಿಕ ತೊಂದರೆಯ ತೀವ್ರತೆಯು ಸತತ ಬದಲಾಗುತ್ತಿರುವುದರಿಂದ ಆಗಾಗ ತೊಂದರೆಯ ಲಕ್ಷಣಗಳ ಅಧ್ಯಯನ ಮಾಡಿ ‘ಎಷ್ಟು ಗಂಟೆ ಉಪಾಯ ಮಾಡಬೇಕು ?’, ಎಂಬುದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿಕೊಳ್ಳಿರಿ !

ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾದಾಗ ಸಾಧಕರು ಸಮಯಕ್ಕೆ ಸರಿಯಾಗಿ ಅದರ ಕಡೆಗೆ ಗಾಂಭೀರ್ಯದಿಂದ ಗಮನ ಕೊಡುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ತಮಗಾಗುವ ತೊಂದರೆಗಳ ಲಕ್ಷಣಗಳ, ಉದಾ. ಏನೂ ಹೊಳೆಯದಿರುವುದು, ತಲೆ ಭಾರವಾಗುವುದು, ಅನಾವಶ್ಯಕ ವಿಚಾರಗಳು ಬರುವುದು ಇತ್ಯಾದಿ.

ವ್ಯಷ್ಟಿಯಿಂದ ಸಮಷ್ಟಿ ಪ್ರಕೃತಿಯಾಗುವಷ್ಟು ಸಾಧಕರಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ನಾವು ಪರಿಪೂರ್ಣ ಅಧ್ಯಯನ ಮಾಡಿದರೆ, ಅದರಿಂದ ನಮ್ಮ ಸಾಧನೆಯಾಗುತ್ತದೆ ಮತ್ತು ಗುರುದೇವರಿಗೆ ಅದೇ ಇಷ್ಟವಾಗುತ್ತದೆ” ಎಂದು ಹೇಳಿದರು. ಇದರಿಂದ ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ ?’, ಎಂಬುದನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಸರಿಯಾಗಿ ಗುರುತಿಸಿದರು ಮತ್ತು ಪೂ. (ಸುಶ್ರೀ (ಕು.)) ರತ್ನಮಾಲಾ ದಳವಿ ಅವರಿಗೆ ಮುಂದಿನ ಮಾರ್ಗವನ್ನು ತೋರಿಸಿದರು

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರ ಇವರು ವ್ಯಷ್ಟಿ ಸಾಧನೆಯ ಕುರಿತು ನೀಡಿದ ಅಮೂಲ್ಯ ದೃಷ್ಟಿಕೋನ !

‘ಶಾರೀರಿಕ ಅಡಚಣೆಗಳಿಂದ ವ್ಯಷ್ಟಿ ಸಾಧನೆಯಾಗುವುದಿಲ್ಲ, ಎಂದು ಹೇಳುವುದು’, ಎಂದರೆ ಸಹಾನುಭೂತಿಯನ್ನು ಪಡೆಯುವುದು, ಹಾಗೆಯೇ ರಿಯಾಯತಿಯನ್ನು ತೆಗೆದುಕೊಳ್ಳುವುದಾಗಿದೆ. ಏನೇ ಅಡಚಣೆಗಳಿದ್ದರೂ, ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಿ ಅದರಲ್ಲಿ ಹೇಳಿದಂತೆ ಸಾಧಕರು ಪ್ರಯತ್ನಗಳನ್ನು ಮಾಡಬೇಕು.’

ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರೇ, ವಿವಾಹದ ವಿಷಯದಲ್ಲಿ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಿ !

ಸಂಬಂಧಿಕರು, ಸ್ನೇಹಿತರ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಮೇಲೆ ಕೆಲವು ಸಾಧಕರ ಮನಸ್ಸಿನಲ್ಲಿ ತನ್ನ ಮದುವೆಯ ವಿಚಾರಗಳು ಬರಬಹುದು. ಸಾಧನೆಯ ಪ್ರಯತ್ನವನ್ನು ತಳಮಳದಿಂದ ಮಾಡುತ್ತಿದ್ದರೆ ಕಾಲಾಂತರದಿಂದ ಈ ವಿಚಾರಗಳು ಬರುವುದು ತನ್ನಷ್ಟಕ್ಕೆ ನಿಲ್ಲುತ್ತದೆ. ಆ ವಿಚಾರಗಳ ಕಾಳಜಿ ಮಾಡಬಾರದು !

‘ಪ್ರಾಣಶಕ್ತಿವಹನ ಉಪಚಾರಪದ್ಧತಿ’ಯಿಂದ ಆಧ್ಯಾತ್ಮಿಕ ಉಪಾಯ ಮಾಡಿದ ನಂತರ ‘ಎಡಕಿವಿ ನೋಯುವುದರ ಮೂಲ ಕಾರಣ, ಕೆಳಗಿನ ದವಡೆಯ ಎಡಬದಿಯ ಮೊದಲ ಉಪದವಡೆಹಲ್ಲು ಆಗಿದೆ’ ಎಂಬುದು ತಿಳಿಯುವುದು

‘ಓರ್ವ ಸಂತರ ಎಡಬದಿಯ ದವಡೆ ಹಲ್ಲು ನೋಯುತ್ತಿದ್ದು, ದವಡೆ ಹಲ್ಲಿನ ನೋವು ಹೆಚ್ಚಾಗಿದ್ದರಿಂದ ಆ ಸಂತರ ಎಡ ಕಿವಿ ನೋಯುತ್ತಿದೆ’, ಎಂಬುದು ಗಮನಕ್ಕೆ ಬಂದಿತು. ಇದರಿಂದ ‘ಕಿವಿ ನೋವಿಗೆ ದವಡೆ ಹಲ್ಲಿನ ತೊಂದರೆ ಮೂಲ ಕಾರಣವಾಗಿದೆ’ ಎಂದು ಸದ್ಗುರು (ಡಾ.) ಮುಕುಲ ಗಾಡಗೀಳರವರಿಗೆ ತಿಳಿಯಿತು.

ಪೂ. ರಮಾನಂದ ಗೌಡ ಇವರು ಮಾರ್ಗದರ್ಶನದ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಾಡಿದ ಭಾವಪೂರ್ಣ ಪ್ರಾರ್ಥನೆ ಮತ್ತು ಶರಣಾಗತ ಸ್ಥಿತಿಯಲ್ಲಿ ವ್ಯಕ್ತಪಡಿಸಿದ ಕೃತಜ್ಞತೆ !

ಮಾರ್ಗದರ್ಶನದ ಕೊನೆಗೆ ಪೂ. ರಮಾನಂದಣ್ಣನವರು ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡಿದರು. ಈ ಪ್ರಾರ್ಥನೆಯು ಅವರಿಗೆ ಒಳಗಿನಿಂದ ಹೊಳೆದಿತ್ತು. ಅದನ್ನು ಕೇಳಿ ಎಲ್ಲ ಸಾಧಕರಿಗೆ ಭಾವಜಾಗೃತಿಯಾಯಿತು ಮತ್ತು ಅವರು ಒಂದು ಬೇರೆ ಸ್ಥಿತಿಯನ್ನೇ ಅನುಭವಿಸಿದರು.

ಎಲ್ಲರಿಗೂ ಸಹಜವಾಗಿ ಅರಿವಾಗುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಲೌಕಿಕತೆ !

ನಾವು ಟಿಕೇಟು ಪಡೆಯಲು ಪ್ರವೇಶದ್ವಾರದ ಬಳಿ ನಿಂತಿರುವಾಗ ಅಲ್ಲಿನ ಕೆಲವು ಹುಡುಗಿಯರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರ ಬಳಿಗೆ ಬಂದು, ‘ನಮಗೆ ನಿಮ್ಮೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳುವುದಿದೆ ! ತೆಗೆದುಕೊಳ್ಳಬಹುದಾ ?’ ಎಂದು ಕೇಳಿದರು.

ಭಗವದ್ಗೀತೆ ಏನು ಹೇಳುತ್ತದೆ ?

ಸಂಕ್ಷಿಪ್ತವಾಗಿ ಹೇಳುವುದಾದರೆ, ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ. ಅನೇಕ ಮಾರ್ಗಗಳನ್ನು ಹೇಳಿ ನಮ್ಮ ಪ್ರಕೃತಿಗೆ ಇಷ್ಟವಾಗುವ ಮಾರ್ಗವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಕೊಡುತ್ತದೆ.

ಯಾವುದಾದರೂ ಪ್ರಸಂಗದಿಂದ ಅನಾವಶ್ಯಕ ವಿಚಾರಗಳು ಹೆಚ್ಚಾದರೆ ಏನು ಮಾಡಬೇಕು ?

ಯಾವ ಪ್ರಸಂಗ ಘಟಿಸಿದೆಯೋ, ನನ್ನ ಜೀವನದಲ್ಲಿ ಆ ಪ್ರಸಂಗಕ್ಕೆ ಎಷ್ಟು ಬೆಲೆಯಿದೆ ? ಆ ಪ್ರಸಂಗದಿಂದ ನನ್ನ ಜೀವನದ ಮೇಲೆ ಎಷ್ಟು ಪರಿಣಾಮವಾಗಲಿದೆ ? ತಾತ್ಕಾಲಿಕವೋ ಅಥವಾ ದೀರ್ಘಕಾಲೀನ ಪರಿಣಾಮ ಬೀರಲಿದೆಯೋ ?’, ಎಂಬುದನ್ನು ನಾವು ನಮ್ಮ ಮನಸ್ಸಿಗೆ ಕೇಳಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಸತ್ಸಂಗದಲ್ಲಿನ ಮಾರ್ಗದರ್ಶನಪರ ಅಂಶಗಳು !

ವ್ಯಷ್ಟಿ ಸಾಧನೆಯು ಚೆನ್ನಾಗಿ ಆಗದಿದ್ದರೆ, ಸೇವೆಯೂ ಚೆನ್ನಾಗಿ ಆಗುವುದಿಲ್ಲ. ಅದಕ್ಕಾಗಿ ಸ್ವಭಾವದೋಷಗಳು ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ.