ಸಕ್ಕರೆ ಮತ್ತು ಬೆಲ್ಲ ತಯಾರಿಸುವ ಪ್ರಕ್ರಿಯೆ ಮತ್ತು ಅವುಗಳ ತುಲನಾತ್ಮಕ ಅಧ್ಯಯನ
ನಾವು ಪೇಟೆಯಿಂದ ತರುವ ಸಕ್ಕರೆಯು ನೈಸರ್ಗಿಕವಾಗಿರುವುದಿಲ್ಲ. ಸಕ್ಕರೆಯನ್ನು ತಯಾರಿಸುವಾಗ ಮುಖ್ಯವಾಗಿ ಕಬ್ಬಿನ ರಸಕ್ಕೆ ರಾಸಾಯನಿಕ ಪ್ರಕ್ರಿಯೆ ಮಾಡಲಾಗುತ್ತದೆ. ಅದರಲ್ಲಿ ‘ಸಲ್ಫರ್ ಡೈಆಕ್ಸೈಡ್, ‘ಫಾಸ್ಫೋರಿಕ್ ಆಸಿಡ್, ‘ಕ್ಯಾಲ್ಶಿಯಮ್ ಹೈಡ್ರಾಕ್ಸೈಡ್ ಮತ್ತು ‘ಆಕ್ಟಿವೇಟೆಡ್ ಕಾರ್ಬನ್ ಈ ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಕ್ಕರೆಯ ಇತರ ಘಟಕದ್ರವ್ಯಗಳನ್ನು ತೆಗೆದು ‘ಸುಕ್ರೋಸ್ ಹೆಸರಿನ ಸಕ್ಕರೆಯ ಅಂಶವನ್ನು ಮಾತ್ರ ಇಡಲಾಗುತ್ತದೆ.