‘ಯೂಟ್ಯೂಬ್’, ‘ಫೇಸ್‌ಬುಕ್’ ಮತ್ತು ‘ಎಕ್ಸ್’ ಮೇಲಿನ 15 ಕ್ಕೂ ಹೆಚ್ಚು ಪೋಸ್ಟಗಳನ್ನು ನಿರ್ಬಂಧಿಸಲಾಗಿದೆ
‘ಯೂಟ್ಯೂಬ್’, ‘ಫೇಸ್‌ಬುಕ್’ ಮತ್ತು ‘ಎಕ್ಸ್’ ಮೇಲಿನ 15 ಕ್ಕೂ ಹೆಚ್ಚು ಪೋಸ್ಟಗಳನ್ನು ನಿರ್ಬಂಧಿಸಲಾಗಿದೆ

ಸಿಂಗಾಪುರ – ಸಿಂಗಾಪುರ ಸರಕಾರವು ಯೂಟ್ಯೂಬ್, ಫೇಸ್ ಬುಕ್ ಮತ್ತು ಎಕ್ಸ್ ಎಂಬ 3 ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ 15 ಪೋಸ್ಟಗಳನ್ನು ನಿರ್ಬಂಧಿಸಲು ಆದೇಶಿಸಿದೆ. ಭಾರತೀಯ ಸಮುದಾಯವನ್ನು ಗುರಿಯಾಗಿಸಿದ್ದ ಈ ಪೋಸ್ಟಗಳು ಚೀನಾ ದೇಶಕ್ಕೆ ಸಂಬಂಧಿಸಿದ್ದವು. ಈ ಮೂಲಕ ಸಿಂಗಾಪುರದ ಸಾಂಸ್ಕೃತಿಕ ವೈವಿಧ್ಯತೆಯ ವಿಚಾರಧಾರೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಸಿಂಗಾಪುರ ಸರಕಾರವು ತಕ್ಷಣವೇ ಈ ಪೋಸ್ಟಗಳನ್ನು ನಿರ್ಭಂದಿಸಿದೆ. ಈ ಅಪರಾಧಕ್ಕಾಗಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.
Singapore blocks 14 social media posts on X, FB, and YouTube targeting the Indian community under the Online Criminal Harms Act (OCHA).
Authorities state the posts originated from an overseas China-based platform and targeted the local Indian community to incite racial discord.… pic.twitter.com/5Lq8XEV6Ut
— Sanatan Prabhat (@SanatanPrabhat) June 7, 2026
ಸಿಂಗಾಪುರದ ಗೃಹ ಸಚಿವರಾದ ಎಡ್ವಿನ್ ಟಾಂಗ್ ರವರು ಪತ್ರಕರ್ತರೊಂದಿಗೆ ಮಾತನಾಡಿ, ಇಲ್ಲಿಯವರೆಗೆ ದೊರೆತ ಮಾಹಿತಿಯ ಅನುಸಾರ, ಈ ಪೋಸ್ಟಗಳನ್ನು ವಿದೇಶದಿಂದ ಮಾಡಲಾಗಿದೆ. ಈ ವಿಡಿಯೋಗಳು ನಮ್ಮ ವಿವಿಧ ಜನಾಂಗೀಯ ಸಮಾಜ ವ್ಯವಸ್ಥೆಯ ಮೇಲೆ ದಾಳಿ ಮಾಡುವಂತಹ ಹಾಗೂ ಜನರ ನಡುವೆ ಜನಾಂಗೀಯ ಆಧಾರದ ಮೇಲೆ ಒಡಕು ಮೂಡಿಸುವಂತಹದ್ದಾಗಿದ್ದವು. ಸಿಂಗಾಪುರದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಮಹತ್ವವಿದ್ದು, ಎಲ್ಲರಿಗೂ ಸಮಾನ ಸ್ಥಾನವಿದೆ. ಈ ವಿಡಿಯೋಗಳು ನಮ್ಮ ಸಮಾಜದ ಅಡಿಪಾಯವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿವೆ. ಸರಕಾರವು ಅಂತಹ ಪ್ರಯತ್ನದ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಇದಾಗಿದ್ದು, ಇದನ್ನು ಎಲ್ಲಾ ರೀತಿಯಿಂದಲೂ ವಿರೋಧಿಸಬೇಕು ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara