ಇಸ್ಲಾಂನಿಂದ ಹೊರಹಾಕುವ ಬೆದರಿಕೆ

ತಿರುವನಂತಪುರಂ (ಕೇರಳಮ್) – ಕೇರಳಮ್‌ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ಅವರು ರೆಸ್ಟೋರೆಂಟ್ ಉದ್ಘಾಟನೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ದೀಪ, ಅಂದರೆ ‘ನಿಲವಿಲಕ್ಕು’ ಬೆಳಗಿದ್ದಕ್ಕೆ ಇಸ್ಲಾಮಿಕ್ ಸಂಘಟನೆಗಳ ಮೌಲ್ವಿಗಳು (ಇಸ್ಲಾಂನ ಧಾರ್ಮಿಕ ಮುಖಂಡರು) ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕೃತ್ಯವನ್ನು ‘ಅಪರಾಧ’ ಎಂದು ಕರೆದಿದ್ದಾರೆ. ಫಾತಿಮಾ ತಹ್ಲಿಯಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Kerala's first woman MLA, Fathima Thahiliya of the IUML, is facing criticism from hardliners and threats of expulsion from Islam for simply lighting a traditional lamp at a restaurant inauguration.
If lighting a lamp is considered unacceptable, why are Hindus alone expected to… pic.twitter.com/cXdQHQFD6C
— Sanatan Prabhat (@SanatanPrabhat) June 7, 2026
‘ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ’ ಸಂಘಟನೆಯು ತನ್ನ ಸಭೆಯಲ್ಲಿ ಈ ಕೃತ್ಯದ ಕುರಿತು ‘ನಿಲವಿಲಕ್ಕು ಹಚ್ಚುವುದು ಇಸ್ಲಾಮಿಕ್ ಸಂಪ್ರದಾಯವಲ್ಲ. ಯಾವುದೇ ಮುಸ್ಲಿಮರು ಹೀಗೆ ಮಾಡುವುದು ಇಸ್ಲಾಂನ ಬೋಧನೆಗಳಿಗೆ ವಿರುದ್ಧವಾಗಿದೆ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಯಾರಾದರೂ ಮುಸ್ಲಿಮರು ಮುಸ್ಲಿಮೇತರ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಹೀಗೆ ಮಾಡಿದರೆ, ಅವರು ಇಸ್ಲಾಂನಿಂದ ಹೊರಹೋಗಬಹುದು. ಹಾಗೆಯೇ ಕೇವಲ ಸಂಪ್ರದಾಯ ಅಥವಾ ಅನುಕರಣೆ ಎಂದು ಹೀಗೆ ಮಾಡುವುದು ಕೂಡ ‘ಹರಾಮ್’ (ಇಸ್ಲಾಂ ಪ್ರಕಾರ ಅಯೋಗ್ಯ) ಮತ್ತು ಅಪರಾಧದ ವರ್ಗಕ್ಕೆ ಸೇರುತ್ತದೆ’ ಎಂದು ಹೇಳಿದೆ.
ಸಂಘಟನೆಯ ನಾಯಕ ಅಬ್ದುಲ್ ಹಮೀದ್ ಫೈಜಿ ಅಂಬಾಲಕ್ಕದಾವೂ ಅವರು, ಇಸ್ಲಾಂ ತನ್ನ ಅನುಯಾಯಿಗಳಿಗೆ ಇತರ ಧರ್ಮಗಳ ಸಂಪ್ರದಾಯಗಳನ್ನು ಪಾಲಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!
ಒಡಿಶಾ: ಇಂಜಿನಿಯರ್ನಿಂದ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ವಶ